ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹಿಂದೆ ಹೊಗಳುತ್ತಿದ್ದ ಬಿಜೆಪಿಗೆ ಈಗ ಸೋನು ಸೂದ್‌ ತೆರಿಗೆ ವಂಚಕ: ಶಿವಸೇನೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್‌ 17: ನಟ ಸೋನು ಸೂದ್‌ ನಿವಾಸ ಹಾಗೂ ಹಲವು ಪ್ರದೇಶಗಳಿಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯನ್ನು ನಡೆಸಿದೆ. ಈ ಹಿನ್ನೆಲೆ ಬಿಜೆಪಿಯ ವಿರುದ್ದ ಶಿವ ಸೇನೆ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ. ಗುರುವಾರ ಬಿಜೆಪಿಯು ತಾಲಿಬಾನ್‌ ಮನಸ್ಥಿತಿ ಹೊಂದಿದೆ ಎಂದು ಹೇಳಿದ್ದ ಶಿವಸೇನೆ, ಶುಕ್ರವಾರ ಈ ಹಿಂದೆ ಸೋನುಸೂದ್‌ರನ್ನು ಹೊಗಳುತ್ತಿದ್ದ ಬಿಜೆಪಿಗೆ ಈಗ ಸೋನು ಸೂದ್‌ ತೆರಿಗೆ ವಂಚಕ ಆಗಿ ಬಿಟ್ಟಿದ್ದಾರೆ ಎಂದು ಹೇಳಿದೆ.

ಈ ತಮ್ಮ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಪ್ರಕಟ ಮಾಡಿದೆ. "ಈ ಹಿಂದೆ ಬಿಜೆಪಿಯು ನಟ ಸೋನು ಸೂದ್‌ರನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಸೋನು ಸೂದ್‌ ಮಾಡಿದ ಕಾರ್ಯದ ಹಿನ್ನೆಲೆ ಹೊಗಳುತ್ತಿತ್ತು. ಆದರೆ ಪಂಜಾಬ್‌ ಹಾಗೂ ದೆಹಲಿ ಸರ್ಕಾರವು ಸೋನು ಸೂದ್‌ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸುವ ಯತ್ನ ಮಾಡಿದ ಸಂದರ್ಭದಲ್ಲಿ ಈಗ ಬಿಜೆಪಿಗೆ ಸೋನು ಸೂದ್‌ ತೆರಿಗೆ ವಂಚಕ ಆಗಿದ್ದಾರೆ," ಎಂದು ಶಿವಸೇನೆ ಹೇಳಿದೆ.

ಸೋನು ಸೂದ್‌ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್‌ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶಸೋನು ಸೂದ್‌ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್‌ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶ

"ಸೋನು ಸೂದ್‌ ವಿರುದ್ದ ಬಿಜೆಪಿಯು ಮಾಡಿಸಿರುವ ಈ ಐಟಿ ದಾಳಿಯು ಮೋಸದಾಟ," ಎಂದು ಹೇಳಿರುವ ಶಿವಸೇನೆ, "ವಿಶ್ವದಲ್ಲೇ ಅಧಿಕ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಈ ಬಿಜೆಪಿ ಪಕ್ಷವು, ವಿಶಾಲವಾದ ಹೃದಯವನ್ನು ಕೂಡಾ ಹೊಂದಿರಬೇಕು," ಎಂದು ಕೂಡಾ ಶಿವಸೇನೆ ಉಲ್ಲೇಖ ಮಾಡಿದೆ.

Sonu Sood Once Praised by BJP, Now Considered Tax Evader: Shiv Sena

ಬುಧವಾರ ಮುಂಬೈನಲ್ಲಿ ನಟ ಸೋನುಸೂದ್‌ ನಿವಾಸಗಳು ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಸೋನುಸೂಗೆ ಸಂಪರ್ಕವಿರುವ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿತ್ತು. ಗುರುವಾರ ಬೆಳಿಗ್ಗೆಯೂ ಕೂಡಾ ಮುಂಬೈನಲ್ಲಿರುವ ನಟ ಸೋನು ಸೂದ್‌ ನಿವಾಸಕ್ಕೆ ಆದಾಯ ಇಲಾಖೆಯು ದಾಳಿ ನಡೆಸಿದೆ. ಈ ವಿಚಾರದಲ್ಲಿ ಶಿವ ಸೇನೆ ಪಕ್ಷ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಇದು ತಾಲಿಬಾನ್‌ ಸಿದ್ದಾಂತ ಎಂದು ಆರೋಪ ಮಾಡಿತ್ತು.

ಸೋನುಸೂದ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರನ್ನು ಸೇರಲು ಸಹಾಯ ಮಾಡಿದ್ದರು. ಸೋನು ಸೂದ್‌ ಬಸ್‌, ರೈಲು ಹಾಗೂ ವಿಮಾನಗಳನ್ನು ಕೂಡಾ ವಲಸಿಗರಿಗೆ ವ್ಯವಸ್ಥೆ ಮಾಡಿದ್ದರು. ಹಾಗೆಯೇ ಈ ವರ್ಷ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸೋನು ಸೂದ್‌ ಆಕ್ಸಿಜನ್‌ ಕೊರತೆ ಉಂಟಾದಾಗ ಆಕ್ಸಿಜನ್ ವ್ಯವಸ್ಥೆಯನ್ನು ಕೂಡಾ ಮಾಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಈ ದಾಳಿಯು ನಡೆದಿದೆ. ಆದರೆ ಈ ದಾಳಿಯನ್ನು ಸಮೀಕ್ಷೆ ಎಂದು ಐಟಿ ಇಲಾಖೆಯು ಹೇಳಿಕೊಂಡಿದೆ.

ಪ್ರಧಾನಿ ಮೋದಿ ಹುಟ್ಟು ಹಬ್ಬದಂದೇ 'ರಾಷ್ಟ್ರೀಯ ನಿರುದ್ಯೋಗ ದಿನ' ಭಾರೀ ಟ್ರೆಂಡ್‌!
ಇನ್ನು ಈ ಬಗ್ಗೆ ತನ್ನ ಮುಖವಾಣಿಯಲ್ಲಿ ಶಿವಸೇನೆಯು, "ಈ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸೋನು ಸೂದ್‌ ಮಾಡಿದ ಕಾರ್ಯಗಳನ್ನು ಬಿಜೆಪಿಯು ಭಾರೀ ಹೊಗಳಿತ್ತು. ಹಾಗೆಯೇ ಮಹಾ ವಿಕಾಸ್‌ ಅಘಾಡಿ ಸರ್ಕಾರವು ಈ ಕಾರ್ಯಗಳನ್ನು ಯಾಕೆ ಮಾಡುತ್ತಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು. ಆದರೆ ಸೋನು ಸೂದ್‌ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಶೈಕ್ಷಣಿಕ ಕಾರ್ಯಕ್ರಮಗಳ ರಾಯಭಾರಿ ಆಗುತ್ತಿದ್ದಂತೆ ಸೋನು ಸೂದ್‌ ನಿವಾಸಗಳ ಮೇಲೆ ಐಟಿ ದಾಳಿ ನಡೆಯುತ್ತದೆ," ಎಂದು ಶಿವಸೇನಯು ಆರೋಪ ಮಾಡಿದೆ.

ಇನ್ನು ಗುರುವಾರ ಶಿವಸೇನೆಯು ಬಿಜೆಪಿಯನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿತ್ತು. ಮಹಾರಾಷ್ಟ್ರ ಆಡಳಿತ ಪಕ್ಷ ಶಿವಸೇನ ವಕ್ತಾರೆ ಮನೀಷಾ ಖಂಡೆ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. "ಬಿಜೆಪಿಯ ಕೇಂದ್ರ ಸರ್ಕಾರವು ಗುರಿಯಾಗಿಸಿಕೊಂಡು ತನ್ನ ಕೇಂದ್ರದ ಏಜೆನ್ಸಿಗಳಿಂದ ದಾಳಿಯನ್ನು ನಡೆಸುತ್ತಿದೆ," ಎಂದು ಆರೋಪ ಮಾಡಿದ ಶಿವಸೇನೆ ವಕ್ತಾರೆ, "ಬಿಜೆಪಿಯು ತಾಲಿಬಾನ್‌ ನಂತಹ ಸಿದ್ದಾಂತವನ್ನು ಹೊಂದಿದೆ," ಎಂದು ಆರೋಪ ಮಾಡಿದ್ದರು.

(ಒನ್‌ ಇಂಡಿಯಾ ಸುದ್ದಿ)

English summary
Sonu Sood Once Praised by BJP, Now Considered Tax Evader: Shiv Sena on IT Raids at Actor’s Properties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X