ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಸೋನಿಯಾ ಶರದ್ ಶರದ್‌ ಪವಾರ್‌ನ್ನು ಪ್ರಧಾನಿ ಮಾಡಬಹುದಿತ್ತು: ಅಠಾವಳೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 27: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಶರದ್ ಪವಾರ್ ಅವರನ್ನು ಪ್ರಧಾನಿ ಮಾಡಬಹುದಿತ್ತು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.

2004 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದ ಗದ್ದುಗೆ ಏರಿದ್ದಾಗ ಮನಮೋಹನ್ ಸಿಂಗ್ ಬದಲು ಸೋನಿಯಾ ಗಾಂಧಿ ಶರದ್ ಪವಾರ್ ಅವರನ್ನು ಮಾಡಬಹುದಿತ್ತು ಎಂದಿದ್ದಾರೆ.

ಉ.ಪ್ರದೇಶ ಚುನಾವಣೆ: ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ರಚಿಸಿದ ಸೋನಿಯಾಉ.ಪ್ರದೇಶ ಚುನಾವಣೆ: ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ರಚಿಸಿದ ಸೋನಿಯಾ

ಇಂದೋರ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಮದಾಸ್ ಅಠಾವಳೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುತ್ತಾರೆ ಎಂದಾದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 2004 ರ ಚುನಾವಣೆಯ ನಂತರ ಭಾರತದ ಪ್ರಧಾನಿಯಾಗಬಹುದಿತ್ತು ಎಂದು ಹೇಳಿದ್ದಾರೆ.

Sonia Gandhi Shouldve Made Sharad Pawar PM, Not Manmohan Singh: Minister

ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಲು ಸಾಧ್ಯವಾದರೆ, ಸೋನಿಯಾ ಗಾಂಧಿಗೆ ಭಾರತದ ಪ್ರಜೆ, ರಾಜೀವ್ ಗಾಂಧಿಯವರ ಪತ್ನಿ (ಮಾಜಿ ಪ್ರಧಾನಿ) ಮತ್ತು ಲೋಕಸಭೆಯಲ್ಲಿ ಸಂಸತ್ ಸದಸ್ಯರು. ಹೀಗಿರುವಾಗ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅಠಾವಳೆ ಪ್ರಶ್ನಿಸಿದ್ದಾರೆ.

ಶರದ್ ಪವಾರ್ ಕೂಡಾ ಜನ ನಾಯಕರಾಗಿ ಪ್ರಧಾನಮಂತ್ರಿ ಹುದ್ದೆಗೆ ಅರ್ಹರು ಮತ್ತು ಮನಮೋಹನ್ ಸಿಂಗ್ ಬದಲಿಗೆ ಕಾಂಗ್ರೆಸ್ ಅವರನ್ನು ಪ್ರಧಾನಿಯಾಗಿಸಬೇಕಿತ್ತು, ಆದರೆ ಸೋನಿಯಾ ಗಾಂಧಿ ಹಾಗೆ ಮಾಡಲಿಲ್ಲ ಎಂದು ಅಠಾವಳೆ ಹೇಳಿದ್ದಾರೆ. ಅಲ್ಲದೇ ಪವಾರ್ 2004 ರಲ್ಲಿ ದೇಶದ ಪ್ರಧಾನಿಯಾಗಿದ್ದರೆ, ಕಾಂಗ್ರೆಸ್ ಇಂದಿನ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ರಾಮದಾಸ್ ಅಠಾವಳೆ ಸೋನಿಯಾ ಗಾಂಧಿ 2004 ರಲ್ಲಿ ಪ್ರಧಾನಿಯಾಗಬೇಕಿತ್ತು, ಅವರು ಆ ಸ್ಥಾನವನ್ನು ಸ್ವೀಕರಿಸದಿದ್ದಾಗ ಕಾಂಗ್ರೆಸ್ ತನ್ನನ್ನು ಬಲಪಡಿಸಲು ಪಕ್ಷದ ಹಿರಿಯ ನಾಯಕ ಶರದ್ ಪವಾರ್ ಅವರಿಗೆ ಪ್ರಧಾನಿ ಸ್ಥಾನ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

2004 ರ ಚುನಾವಣೆಯಲ್ಲಿ ಯುಪಿಎ ಬಹುಮತ ಪಡೆದಾಗ, ನಾನು ಸೋನಿಯಾ ಗಾಂಧಿಗೆ ಪ್ರಧಾನಿಯಾಗಲು ಸಲಹೆ ನೀಡಿದ್ದೆ. ಅವರು ವಿದೇಶಿಗರು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ʼ2004 ರಲ್ಲಿ ಯುಪಿಎ ಬಹುಮತ ಗೆದ್ದಾಗ, ಸೋನಿಯಾ ಗಾಂಧಿ ಪ್ರಧಾನಿಯಾಗಲೆಂದು ನಾನು ಸಲಹೆ ನೀಡಿದ್ದೆ. ಅವರ ವಿದೇಶಿ ಮೂಲವನ್ನು ಉಲ್ಲೇಖಿಸಿ ಸ್ಥಾನ ನಿರಾಕರಿಸುವುದು ಅರ್ಥಹೀನ ಎಂದು ನಾನು ಭಾವಿಸಿದ್ದೆ.

ವಿಶೇಷವೆಂದರೆ, 1999 ರಲ್ಲೇ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿದ್ದಕ್ಕೆ ಶರದ್‌ ಪವಾರ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಆ ಬಳಿಕ ಅವರು ತಮ್ಮದೆ ಸ್ವಂತ ಪಕ್ಷ ಎನ್‌ಸಿಪಿಯನ್ನು ಕಟ್ಟಿದ್ದರು. ಪ್ರಸ್ತುತ, ಎನ್‌ಸಿಪಿಯು ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ರಚಿಸಿಕೊಂಡು ಸರ್ಕಾರ ನಿರ್ಮಿಸಿದೆ.

2004 ರಲ್ಲಿ ಶರದ್‌ ಪವಾರ್‌ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದಿದ್ದರೆ ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಯೇ ಬೇರೆ ರೀತಿ ಇರುತ್ತಿತ್ತು. ಕಾಂಗ್ರೆಸ್‌ ಇಂದು ಇಷ್ಟು ಅನಿಶ್ಚಿತತೆಯಿಂದ ಇರಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ. ಕಾಂಗ್ರೆಸ್‌ ಬಲ ಸಂವರ್ಧನೆ ಮಾಡಬಹುದಿತ್ತು ಎಂದು ಅಠಾವಳೆ ಹೇಳಿದ್ದಾರೆ.

ಕಮಲಾ ಹ್ಯಾರಿಸ್‌ ಅಮೆರಿಕಾದ ಉಪಾಧ್ಯಕ್ಷೆ ಆಗಬಹುದಾದರೆ ಭಾರತದ ಪ್ರಜೆಯಾಗಿರುವ ಸೋನಿಯಾ ಗಾಂಧಿ ಯಾಕೆ ಭಾರತದ ಪ್ರಧಾನಿಯಾಗಬಾರದು? ಮಾಜಿ ಪ್ರಧಾನಮಂತ್ರಿ ರಾಜಿವ್‌ ಗಾಂಧಿ ಪತ್ನಿ ಹಾಗೂ ಲೋಕಸಭಾ ಸದಸ್ಯೆ ಸೋನಿಯಾ ಗಾಂಧಿ ಭಾರತದ ಪ್ರಧಾನಿ ಆಗಬಾರದೆಂದರೆ ಏನರ್ಥ? ಎಂದು ಮೋದಿ ಸಂಪುಟದ ಸಚಿವರು ಕೇಳಿದ್ದಾರೆ.

ಅದಾಗ್ಯೂ, ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಆಗುವ ಇಚ್ಛೆ ಇಲ್ಲದಿದ್ದರೆ, ಮನಮೋಹನ ಸಿಂಗ್‌ ಅವರ ಬದಲಾಗಿ ಹಿರಿಯ ರಾಜಕಾರಣಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

English summary
Sonia Gandhi should have been Prime Minister when the Congress-led UPA came to power in 2004, Union Minister Ramdas Athawale has said, drawing a comparison with US Vice president Kamala Harris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X