ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಗಳಿಲ್ಲದೆ, ಬಂಧುಗಳಿಲ್ಲದೆ ಅಪ್ಪನ ಅಂತ್ಯಸಂಸ್ಕಾರ ಮಾಡಿದ ಮಗ

|
Google Oneindia Kannada News

ಮುಂಬೈ, ಮಾರ್ಚ್‌ 30: ಕೊರೊನಾ ಬೀತಿಯ ನಡುವೆ, ಲಾಕ್ ಡೌನ್ ನಿಯಮಗಳ ನಡುವೆ ಮಗ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಿದ್ದಾನೆ. ಮುಂಬೈನಲ್ಲಿ ನಡೆದ ಈ ಘಟನೆಯನ್ನು ಬಗ್ಗೆ ಆ ವ್ಯಕ್ತಿ ಮಾತನಾಡಿದ್ದಾನೆ.

33 ವರ್ಷದ ಶಶಾಂಕ್ ಕಾಂಬ್ಲೆ ಮುಂಬೈನವರು. ಅವರ ತಂದೆ ಮಾರ್ಚ್ 20 ರಂದು ನಿಧನ ಹೊಂದಿದ್ದಾರೆ. ಶುಕ್ರವಾರ ರಾತ್ರಿ ಊಟ ಮಾಡಿದ ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಅಲ್ಲಿ ಮರಣ ಹೊಂದಿದರು.

ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!

ಕೊರೊನಾ ನಿಯಂತ್ರಣಕ್ಕಾಗಿ ಏರಿರುವ ನಿರ್ಬಂಧದಿಂದ ಶಶಾಂಕ್ ಕಾಂಬ್ಲೆ ತಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಸರಿಯಾಗಿ ಮಾಡಲು ಆಗಲಿಲ್ಲ. ಮೃತ ದೇಹದ ಮೇಲೆ ಹಾಕಲು ಹೂವುಗಳು ಸಿಗಲಿಲ್ಲ. ಆ ದಿನ ಜನತಾ ಕರ್ಫ್ಯೂ ಇದ್ದ ಕಾರಣ ಅನೇಕ ಸಂಖ್ಯೆಯ ಸಂಬಂಧಿ ಹಾಗೂ ಸ್ನೇಹಿತರಿಗೆ ಕೊನೆಯ ದರ್ಶನದ ಅವಕಾಶ ಸಿಗಲಿಲ್ಲ.

Son Did His Fathers Last Rites Without Flowers And Relatives

ಜನತಾ ಕರ್ಫ್ಯೂನಿಂದ ಶಶಾಂಕ್ ಹೂವು, ಮಡಿಕೆಯನ್ನು ಸಹ ಖರೀದಿ ಮಾಡಲು ಆಗಲಿಲ್ಲ. ಅವುಗಳು ಇಲ್ಲದೆ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಬಂತು. ಕೆಲವೇ ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಕಡಿಮೆ ಜನ ಇದ್ದರು, ಅವರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.

ಹಿಂದೂ ಸಂಪ್ರದಾಯದಂತೆ ತಮ್ಮ ತಂದೆಯ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ನಂತರ ಚಿತಾಬಸ್ಮವನ್ನು ತರಲು ಹೋಗಲು ಲಾಕ್ ಡೌನ್ ನಿಯಮ ಇತ್ತು. ಮನೆಯಿಂದ ಹೊರ ಹೋಗಿ ಹೇಗೆ ಚಿತಾಬಸ್ಮ ತರುವುದು ಎನ್ನುವ ಚಿಂತೆಯಾಗಿತ್ತು ಎಂದು ಆ ಘಟನೆಯನ್ನು ಶಶಾಂಕ್ ವಿವರಿಸಿದ್ದಾರೆ.

ಭಾರತದಲ್ಲಿ 1000 ಗಡಿದಾಟಿದ ಕೊರೊನಾ ಸೋಂಕಿತರು, 29 ಸಾವುಭಾರತದಲ್ಲಿ 1000 ಗಡಿದಾಟಿದ ಕೊರೊನಾ ಸೋಂಕಿತರು, 29 ಸಾವು

ಡ್ರೈವರ್ ಕೆಲಸ ಮಾಡುವ ಶಶಾಂಕ್, ಕೊರೊನಾದಿಂದ ತಮ್ಮ ತಂದೆಯ ಅಂತ್ಯಕ್ರಿಯೆ ಸರಿಯಾಗಿ ಆಗಲಿಲ್ಲ ಎನ್ನುವ ಬೇಸರ ಕೊರಗಿನಲ್ಲಿ ಇದ್ದಾರೆ.

English summary
Shashank Kamble, a son did his father's last rites without flowers and relatives in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X