ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ ಆರು ಮಿಸ್ಡ್ ಕಾಲ್‌ 1.86 ಕೋಟಿ ರೂ. ದೋಚಿತು

|
Google Oneindia Kannada News

ಮುಂಬೈ, ಜನವರಿ 3: ಸಿಮ್ ಕಾರ್ಡ್ ವಿನಿಮಯದ ಶಂಕಿತ ಪ್ರಕರಣದಲ್ಲಿ ಮುಂಬೈ ಮೂಲದ ಜವಳಿ ಉದ್ಯಮಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 1.86 ಕೋಟಿ ರೂ. ಕಳೆದುಕೊಂಡಿದ್ದಾರೆ.

ಡಿಸೆಂಬರ್ 27-28ರ ರಾತ್ರಿ 11.44 ರಿಂದ 1.58ರ ಅವಧಿಯಲ್ಲಿ ಉದ್ಯಮಿಯ ಮೊಬೈಲ್‌ಗೆ ಆರು ಮಿಸ್ಡ್ ಕಾಲ್‌ಗಳು ಬಂದಿದ್ದವು. ಇದರಲ್ಲಿಯೇ ವಂಚನೆ ನಡೆಸಲಾಗಿದೆ. ಸೈಬರ್ ಪರಿಣತರು ಇದು 'ಸಿಮ್ ವಿನಿಮಯ' ಪ್ರಕರಣ ಎಂದು ಕರೆದಿದ್ದಾರೆ. ಇಲ್ಲಿ ಅಪರಾಧಿಗಳು ಅದೇ ಸಂಖ್ಯೆಯ ಇನ್ನೊಂದು ಸಿಮ್ ಕಾರ್ಡ್ ಮತ್ತು ಓಟಿಪಿ ಬಳಸಿಕೊಂಡು ಹಣ ಲೂಟಿ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ರೂಪಾ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ನಕಲಿ ಖಾತೆಐಪಿಎಸ್ ಅಧಿಕಾರಿ ರೂಪಾ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ನಕಲಿ ಖಾತೆ

ರಾತ್ರಿ ಒಟ್ಟು ಆರು ಮಿಸ್ಡ್ ಕಾಲ್‌ಗಳು ಬಂದಿದ್ದನ್ನು ನೋಡಿದ ಉದ್ಯಮಿ ಅನುಮಾನಗೊಂಡಿದ್ದರು. ಇದರಲ್ಲಿ ಎರಡು ಯು.ಕೆ. ಯಿಂದ ಬಂದ ಕರೆಗಳಾಗಿದ್ದವು. ಆದರೆ, ಬಳಿಕ ತಮ್ಮ ಫೋನ್ ಕೆಲಸ ಮಾಡುತ್ತಿಲ್ಲ ಎನ್ನುವುದು ಅವರಿಗೆ ಗೊತ್ತಾಯಿತು. ಕೂಡಲೇ ತಮ್ಮ ಸಿಮ್ ಸೇವಾದಾರ ಕಂಪೆನಿಗೆ ಕರೆ ಮಾಡಿದರು. ಹಿಂದಿನ ರಾತ್ರಿ ನಿಮ್ಮ ಮನವಿಯಂತೆಯೇ ಸಿಮ್ ಕಾರ್ಡ್ ಬ್ಲಾಕ್ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿತು.

six missed call to mobile phone robbed mumbai businessman Rs 1.86 crores

'ಡಿ. 27ರ ರಾತ್ರಿ 11.15ರ ಸುಮಾರಿಗೆ ನಾನು ಸಿಮ್ ಕಾರ್ಡ್ ಬ್ಲಾಕ್ ಮಾಡುವಂತೆ ಕರೆ ಮಾಡಿದ್ದಾಗಿ ಮಾಹಿತಿ ದೊರಕಿತು. ಆದರೆ, ನಾನು ಸಿಮ್ ಕಾರ್ಡ್ ಬ್ಲಾಕ್ ಮಾಡಲು ಯಾವುದೇ ಕರೆ ಮಾಡಿಲ್ಲ ಎಂದು ಹೇಳಿದೆ. ಅದಾದ ಬಳಿಕ ಕಂಪೆನಿ ಹೊಸ ಸಿಮ್ ಕಾರ್ಡ್ ಒದಗಿಸಿತು. ಡಿ.29ರ ಸಂಜೆ ಅದು ಆಕ್ಟಿವೇಟ್ ಆಯಿತು' ಎಂದು ಉದ್ಯಮಿ ವಿವರಿಸಿದ್ದಾರೆ.

285 ಕೋಟಿ ವಂಚನೆ ಪ್ರಕರಣದಲ್ಲಿ ತಗಲ್ಹಾಕಿಕೊಂಡವನು ಎಂಥ ಖತರ್ನಾಕ್!285 ಕೋಟಿ ವಂಚನೆ ಪ್ರಕರಣದಲ್ಲಿ ತಗಲ್ಹಾಕಿಕೊಂಡವನು ಎಂಥ ಖತರ್ನಾಕ್!

ಅಷ್ಟರಲ್ಲಾಗಲೇ ಅವರ ಬ್ಯಾಂಕ್ ಖಾತೆಯಿಂದ 28 ಬಾರಿ ಹಣ ವರ್ಗಾವಣೆಯಾಗಿತ್ತು. ಸಿಮ್ ಕಾರ್ಡ್ ಬ್ಲಾಕ್ ಆಗಿದ್ದರಿಂದ ಅವರಿಗೆ ಅದು ತಿಳಿದೇ ಇರಲಿಲ್ಲ.

ಉದ್ಯಮಿ ಬಳಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಹಣ ವರ್ಗಾವಣೆಗಾಗಿ ಬ್ಯಾಂಕ್‌ಗೆ ತೆರಳಿದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಆಗಲೇ ಉದ್ಯಮಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಖಾತೆ ಪರಿಶೀಲಿಸಿದಾಗ 15 ವಿಭಿನ್ನ ಖಾತೆಗಳಿಗೆ 28 ಬಾರಿ ಹಣವನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಈ ಯಾವ ವ್ಯವಹಾರವನ್ನೂ ನಾವ್ಯಾರೂ ನಡೆಸಿಲ್ಲ. ಅಲ್ಲದೆ, ನಾವು ಯಾವಾಗಲೂ ಹಣ ವರ್ಗಾವಣೆ ಮಾಡುವ ಯಾವ ಖಾತೆಗಳೂ ಇವುಗಳಲ್ಲಿ ಇಲ್ಲ ಎಂದು ಉದ್ಯಮಿ ತಿಳಿಸಿದ್ದಾರೆ.

ಆ ಬ್ಯಾಂಕ್ ಉದ್ಯೋಗಿ ಕದ್ದಿದ್ದು 84 ಲಕ್ಷ ರುಪಾಯಿ, ಎಲ್ಲವೂ ನಾಣ್ಯಗಳೇ! ಆ ಬ್ಯಾಂಕ್ ಉದ್ಯೋಗಿ ಕದ್ದಿದ್ದು 84 ಲಕ್ಷ ರುಪಾಯಿ, ಎಲ್ಲವೂ ನಾಣ್ಯಗಳೇ!

'ಅಪರಾಧಿಗಳು ಉದ್ಯಮಿಯ ಬ್ಯಾಂಕ್ ಮತ್ತು ಮೊಬೈಲ್ ವಿವರಗಳನ್ನು ಪಡೆದುಕೊಂಡಿದ್ದರು. ಅದರಿಂದ 1.86 ಕೋಟಿ ರೂ ವರ್ಗಾವಣೆ ಮಾಡಿರುವುದಾಗಿ ದೂರು ನೀಡಲಾಗಿದೆ. ನಿಮ್ಮ ಅನುಮತಿ ಇಲ್ಲದೆಯೇ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗಿದ್ದರೆ ಕೂಡಲೇ ಅದನ್ನು ಮತ್ತೆ ಆಕ್ಟವೇಟ್ ಮಾಡಿಸಿಕೊಳ್ಳಿ. ಮತ್ತು ವಂಚಸಿ ಹಣ ವರ್ಗಾವಣೆ ಆಗುತ್ತಿರುವುದು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸ್ ಉಪ ಆಯುಕ್ತ ಅಕ್ಬರ್ ಪಠಾಣ್ ತಿಳಿಸಿದ್ದಾರೆ.

English summary
A Mumbai based textile businessman lost 1.86 Crore from his bank account in a suspected case of SIM card swaping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X