ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಮೋದಿ ಆಡಳಿತದಲ್ಲಿದೆ: ಶೌರಿ

|
Google Oneindia Kannada News

ಮುಂಬೈ, ನವೆಂಬರ್ 19: ಇಂದಿರಾ ಗಾಂಧಿ ಸಮಯದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಗಿಂತ ಅಪಾಯಕಾರಿ ಸ್ಥಿತಿಯಲ್ಲಿ ಮೋದಿ ಆಡಳಿತದಲ್ಲಿ ಇದೆ ಎಂದು ಬಿಜೆಪಿ ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ.

ಆರ್ಬಿಐ ಬೋರ್ಡ್ ಸಭೆ ನಡೆದಿರುವಾಗ ರಾಹುಲ್ ಗಾಂಧಿ ಮಾತಿನ ಕಿಡಿ ಆರ್ಬಿಐ ಬೋರ್ಡ್ ಸಭೆ ನಡೆದಿರುವಾಗ ರಾಹುಲ್ ಗಾಂಧಿ ಮಾತಿನ ಕಿಡಿ

ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿದ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಪಶ್ಚಾತಾಪವಿತ್ತು. ಆದರೆ ಈಗಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನ ರಕ್ತದಲ್ಲೇ ವಂಚನೆ ಅನ್ನೋದಿದೆ: ಮೋದಿ ಲೇವಡಿ ಕಾಂಗ್ರೆಸ್ ನ ರಕ್ತದಲ್ಲೇ ವಂಚನೆ ಅನ್ನೋದಿದೆ: ಮೋದಿ ಲೇವಡಿ

ಇಂದಿರಾ ಗಾಂಧಿ ಅವರಿಗೂ ಮೋದಿ ಅವರಿಗೂ ಬಹಳ ಅಂತರ ಇದೆ. ಇಂದಿರಾ ಗಾಂಧಿ 1.75 ಲಕ್ಷ ಜನರನ್ನು ಜೈಲಿಗೆ ಅಟ್ಟಿದ್ದರೂ ಸಹ ಅವರಿಗೆ ತಮ್ಮ ಮಿತಿಯ ಅರಿವಿತ್ತು, ಪಶ್ಚಾತಾಪವೂ ಇತ್ತು. ಆದರೆ ಮೋದಿಗೆ ಅದ್ಯಾವುದೂ ಇಲ್ಲ ಎಂದು ಅವರು ಹೇಳಿದರು.

Situation Under Modi Government Worse Than Emergency: Arun Shourie

2014ರಲ್ಲಿ ಮೋದಿ ಅವರ ಪರ ಭಾರಿ ಅಲೆ ಇದ್ದರೂ ಸಹ ಅವರು ಗಳಿಸಿದ್ದು 31% ಮತಗಳಷ್ಟೆ. ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಗಟ್ಟಿಯಾದರೆ ಬಿಜೆಪಿ ಸೋಲು ಖಚಿತ ಎಂದು ಶೌರಿ ಹೇಳಿದರು.

ಆಂಧ್ರದಲ್ಲಿ ಸಿಬಿಐಗೆ ನಿರ್ಬಂಧ: ಚಂದ್ರಬಾಬು ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇನು? ಆಂಧ್ರದಲ್ಲಿ ಸಿಬಿಐಗೆ ನಿರ್ಬಂಧ: ಚಂದ್ರಬಾಬು ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇನು?

ವಿರೋಧ ಪಕ್ಷಗಳು ಒಂದಾದರೆ 2019 ರ ಚುನಾವಣೆಯಲ್ಲಿ ಮೋದಿ ಅವರನ್ನು ತಡೆಯಬಹುದು. ಪ್ರತಿ ಬಿಜೆಪಿ ಅಭ್ಯರ್ಥಿಯ ಎದುರು ಒಬ್ಬ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರ ಅನುಸರಿಸಬೇಕು ಎಂದು ಅವರು ಹೇಳಿದರು.

English summary
Former Union minister Arun Shourie on Sunday said ex-Prime Minister Indira Gandhi had a "great sense of remorse" for imposing Emergency, but the situation today is "graver" than it was in 1975-77.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X