ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕತೆ ಬಗ್ಗೆ ಮನಮೋಹನ್ ಸಿಂಗ್ ಎಚ್ಚರಿಕೆ ಆಲಿಸಿ: ಶಿವಸೇನೆ

|
Google Oneindia Kannada News

Recommended Video

ಮನಮೋಹನ್ ಸಿಂಗ್ ಆರ್ಥಿಕತೆ ಬಗ್ಗೆ ಎಚ್ಚರಿಕೆ ನೀಡಿರುವುದನ್ನು ಕೇಳಿ ಎಂದ ಶಿವಸೇನೆ | Oneindia Kannada

ಮುಂಬೈ, ಸೆಪ್ಟೆಂಬರ್ 4: ಆರ್ಥಿಕತೆ ನಿಭಾಯಿಸುವ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಎಚ್ಚರಿಕೆಯ ಮಾತನ್ನು ಆಲಿಸಿ ಎಂದು ಶಿವಸೇನೆ ಬಿಜೆಪಿಗೆ ಕಿವಿಮಾತು ಹೇಳಿದೆ.

ಮನಮೋಹನ್ ಸಿಂಗ್ ಅವರ ಸಲಹೆಯನ್ನು ಕೇಳುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇದೆ. ಆರ್ಥಿಕ ಕುಸಿತದ ಸುತ್ತ ಯಾವುದೇ ರಾಜಕೀಯ ಇರಬಾರದು. ಕಾಶ್ಮೀರ ಮತ್ತು ಆರ್ಥಿಕ ಮಂದಗತಿ ಎರಡು ವಿಭಿನ್ನ ವಿಷಯಗಳು. ಆರ್ಥಿಕತೆಯು ಮಂದಗತಿಯಲ್ಲಿದೆ.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೇಗಿತ್ತು, ಈಗ ಅಧೋಗತಿ: ಸಿದ್ದರಾಮಯ್ಯ ವಾಗ್ದಾಳಿಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೇಗಿತ್ತು, ಈಗ ಅಧೋಗತಿ: ಸಿದ್ದರಾಮಯ್ಯ ವಾಗ್ದಾಳಿ

ನಾವು ತಜ್ಞರ ಸಹಾಯವನ್ನು ತೆಗೆದುಕೊಂಡು ಅದನ್ನು ಜಯಿಸಬೇಕು. ಅವರ ಸಲಹೆಯನ್ನು ನಾವು ಪಡೆದುಕೊಳ್ಳಬೇಕು.

Shiva Sena Says Listen Manmohan Singh Warnig On Economy

ಮನಮೋಹನ್ ಸಿಂಗ್ ಅವರು ಆರ್ಥಿಕತೆಯ ಸ್ಥಿತಿಯನ್ನು ಆಳವಾಗಿ ಚಿಂತಿಸಿದ್ದಾರೆ. ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 5 ರ ಸಂಕೇತಗಳು ನಾವು ದೀರ್ಘಕಾಲದ ನಿಧಾನಗತಿಯ ಮಧ್ಯದಲ್ಲಿದ್ದೇವೆ ಎಂದು ಹೇಳಿದೆ.

ಶುಕ್ರವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಭಾರತದ ತ್ರೈಮಾಸಿಕ ಜಿಡಿಪಿ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ 5.8 ಕ್ಕೆ ಹೋಲಿಸಿದರೆ ಶೇ 5 ಕ್ಕೆ ಇಳಿದಿದೆ.

ಮೋದಿ ಸರ್ಕಾರದಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆ: ಮನಮೋಹನ್ ಸಿಂಗ್ಮೋದಿ ಸರ್ಕಾರದಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆ: ಮನಮೋಹನ್ ಸಿಂಗ್

ಪ್ರಧಾನಿ ಮನಮೋಹನ್ ಸಿಂಗ್ ಮೋದಿ ಸರ್ಕಾರ ದ್ವೇಷದ ರಾಜಕಾರಣವನ್ನು ಬಿಟ್ಟು ಬುದ್ದಿವಂತ ಮನಸ್ಸುಗಳನ್ನು ತಲುಪುವ ಮೂಲಕ ಈ ಸಮಸ್ಯೆಗೆ ಇತ್ಯರ್ಥ ಕಂಡುಕೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

"ಇಂದು ಆರ್ಥಿಕತೆಯ ಸ್ಥಿತಿ ತೀವ್ರ ಕಳವಳ ಸೃಷ್ಟಿಸಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವು 5% ದೀರ್ಘಕಾಲದ ನಿಧಾನಗತಿಯ ಮಧ್ಯದಲ್ಲಿತ್ತು ಎನ್ನುವುದನ್ನು ತೋರಿಸುತ್ತದೆ. ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಈ ಮಂದಗತಿಗೆ ಕಾರಣವಾಗಿದೆ' ಎಂದು ಸಿಂಗ್ ಹೇಳಿದ್ದರು.

English summary
Shiva Sena Says Listen Manmohan Singh Warnig On Economy, A day after the Centre dismissed former prime minister Manmohan Singh’s remark over handling of the economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X