ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈವೇಯಲ್ಲಿ ಗನ್ ಹಿಡಿದು ಬೆದರಿಸಿದ ಶಿವಸೇನಾ ಕಾರ್ಯಕರ್ತರು

|
Google Oneindia Kannada News

ಮುಂಬೈ, ಜನವರಿ 30: ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಹನವೊಂದಲ್ಲಿ ತೆರಳುತ್ತಿದ್ದ ಶಿವಸೇನಾ ಕಾರ್ಯಕರ್ತರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇನ್ನೊಂದು ಬದಿಯಲ್ಲಿ ತಮಗೆ ದಾರಿ ಮಾಡಿಕೊಡುವಂತೆ ಗನ್ ತೋರಿಸುವುದು ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿರೋಧಪಕ್ಷಗಳಿಗೆ ಅಸ್ತ್ರವಾಗಿ ದೊರಕಿದೆ.

ವೈರಲ್ ಆದ ವಿಡಿಯೋದ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

 ಮುಂಬೈ ಕುರಿತ ಸವದಿ ಹೇಳಿಕೆಗೆ ತಿರುಗಿಬಿದ್ದ ಶಿವಸೇನೆ ಮುಖಂಡ ಮುಂಬೈ ಕುರಿತ ಸವದಿ ಹೇಳಿಕೆಗೆ ತಿರುಗಿಬಿದ್ದ ಶಿವಸೇನೆ ಮುಖಂಡ

'ಇದು ಮಹಾರಾಷ್ಟ್ರದ ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇದಲ್ಲಿನ ವಿಡಿಯೋ. ಆ ವಾಹನದಲ್ಲಿರುವ ಚಿಹ್ನೆಯೇ ಎಲ್ಲವನ್ನೂ ಹೇಳುತ್ತದೆ. ಶಿವಸೈನಿಕರು ಶುಕ್ರವಾರ ರಾತ್ರಿ ತಮ್ಮ ವಾಹನಕ್ಕೆ ದಾರಿ ಮಾಡಿಸಿಕೊಳ್ಳಲು ರಿವಾಲ್ವರ್‌ಗಳನ್ನು ತೋರಿಸಿದ್ದಾರೆ. ಗೃಹ ಸಚಿವರು ಅಥವಾ ಪೊಲೀಸರು ಈ ಕಾನೂನು ವಿರೋಧಿ ಕೃತ್ಯವನ್ನು ಗಮನಿಸುತ್ತಾರೆಯೇ?' ಎಂದು ಔರಂಗಾಬಾದ್‌ನ ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಟ್ವೀಟ್ ಮಾಡಿದ್ದಾರೆ.

Shiv Sena Workers Seen Brandishing Guns In Mumbai-Pune Expressway: Viral Video

ಬಿಜೆಪಿ ಕೂಡ ಶಿವಸೇನಾ ವಿರುದ್ಧ ಕಿಡಿಕಾರಲು ಈ ಅವಕಾಶವನ್ನು ಬಳಸಿಕೊಂಡಿದೆ. 'ರಾಜ್ಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ. ಸೇನಾದ ಕಾರ್ಯಕರ್ತರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿರುವುದು ಕಾಣಿಸುತ್ತದೆ ಎಂದು ಬಿಜೆಪಿ ನಾಯಕ ರಾಮ್ ಕದಂ ಟೀಕಿಸಿದ್ದಾರೆ.

'ಸಾಧುಗಳಿರಲಿ, ಸೈನಿಕರಿರಲಿ. ರಾಜ್ಯದಲ್ಲಿ ಯಾರೂ ಸುರಕ್ಷಿತರಾಗಿಲ್ಲ. ಹೈವೇಯಲ್ಲಿ ಈಗ ಸೇನಾ ಕಾರ್ಯಕರ್ತರು ಗನ್ ಹಿಡಿದು ಜನರನ್ನು ಬೆದರಿಸುತ್ತಿದ್ದಾರೆ. ಈ ಸರ್ಕಾರ ಪ್ರಗತಿಪರ ಅಲ್ಲ, ಆದರೆ ಗೂಂಡಾಗಳ ಪಡೆಯಾಗಿದೆ' ಎಂದು ರಾಮ್ ಕದಂ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಶಿವಸೇನಾ ನಾಯಕರು ನಿರಾಕರಿಸಿದ್ದಾರೆ.

English summary
A Viral video clip alleged Shiv Sainiks brandishing a gun to make way for them while riding a vehicle along Mumbai-Pune Expressway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X