ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿದ ರಾಜ್ಯಗಳೇನು ಪಾಕಿಸ್ತಾನವೇ?: ಬಿಜೆಪಿಗೆ ಶಿವಸೇನಾ ಪ್ರಶ್ನೆ

|
Google Oneindia Kannada News

ಮುಂಬೈ, ಅಕ್ಟೋಬರ್ 24: ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲರಿಗೂ ಉಚಿತ ಕೊರೊನಾ ವೈರಸ್ ಲಸಿಕೆಯನ್ನು ನೀಡುವುದಾಗಿ ಬಿಜೆಪ ಭರವಸೆ ನೀಡಿರುವುದು ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಚುನಾವಣೆ ವೇಳೆ ಬಿಜೆಪಿಯು ಕೊಳಕು ಹಾಗೂ ಕೆಳಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಶಿವಸೇನಾ, ಇತರೆ ರಾಜ್ಯಗಳೇನೂ ಪಾಕಿಸ್ತಾನವಲ್ಲ ಎಂದು ಹೇಳಿದೆ.

'ಬಿಹಾರಕ್ಕೆ ಲಸಿಕೆ ಸಿಗಬೇಕು. ಆದರೆ ನಮ್ಮ ದೇಶದ ಉಳಿದ ರಾಜ್ಯಗಳೇನೂ ಪಾಕಿಸ್ತಾನವಲ್ಲ. ಬಿಹಾರವಷ್ಟೇ ಅಲ್ಲ, ವೈರಸ್‌ನಿಂದ ಇಡೀ ದೇಶವೇ ಕೆಟ್ಟದಾಗಿ ಸಂಕಷ್ಟ ಅನುಭವಿಸುತ್ತಿರುವಾಗ ಕೊರೊನಾ ವೈರಸ್ ಲಸಿಕೆ ವಿಚಾರವಾಗಿ ರಾಜಕೀಯವೇಕೆ? ಲಸಿಕೆ ಪಡೆದುಕೊಳ್ಳುವ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ' ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದೆ.

ಬಿಹಾರದಲ್ಲಿ ಕೊವಿಡ್ ಲಸಿಕೆ ಉಚಿತ: ಪ್ರತಿಪಕ್ಷಗಳ ಪ್ರಶ್ನೆಗೆ ಬಿಜೆಪಿ ಉತ್ತರಬಿಹಾರದಲ್ಲಿ ಕೊವಿಡ್ ಲಸಿಕೆ ಉಚಿತ: ಪ್ರತಿಪಕ್ಷಗಳ ಪ್ರಶ್ನೆಗೆ ಬಿಜೆಪಿ ಉತ್ತರ

'ಕೊರೊನಾ ವೈರಸ್ ಲಸಿಕೆಯು ಅಭಿವೃದ್ಧಿಯಾದ ಬಳಿಕ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಲಾಗುತ್ತದೆಯೇ ಹೊರತು ಯಾವುದೇ ಜಾತಿ, ಧರ್ಮ ಅಥವಾ ರಾಜ್ಯದ ಆಧಾರದಲ್ಲಿ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಈಗ ಚುನಾವಣೆ ಹತ್ತಿರ ಬಂದಿರುವ ಬಿಹಾರದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ' ಎಂದು ಟೀಕಿಸಿದೆ.

 Shiv Sena Slams BJP Over Free Covid 19 Vaccine Promise In Bihar

'ಬಿಜೆಪಿ ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಿರುವವರು ಯಾರು? ಅವರ ನಾಯಕತ್ವದಲ್ಲಿ ಸಮಸ್ಯೆ ಏನಾಗಿದೆ? ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ಲಸಿಕೆ ನೀಡುವುದಾಗಿ ತಿಳಿಸಿದ್ದ ಬಿಜೆಪಿ ಬಿಹಾರ ಚುನಾವಣೆ ಪ್ರಣಾಳಿಕೆಯ ಘೋಷಣೆಯಲ್ಲಿ ವಿಚಿತ್ರವಾಗಿರುವುದು ಸಂಭವಿಸಿದೆ' ಎಂದು ವಾಗ್ದಾಳಿ ನಡೆಸಿದೆ.

ಕೊವಿಡ್-19 ಉಚಿತ ಲಸಿಕೆ ಬಿಹಾರಕ್ಕಷ್ಟೇ ಸೀಮಿತವೇ: ರಾಹುಲ್ ಗಾಂಧಿಕೊವಿಡ್-19 ಉಚಿತ ಲಸಿಕೆ ಬಿಹಾರಕ್ಕಷ್ಟೇ ಸೀಮಿತವೇ: ರಾಹುಲ್ ಗಾಂಧಿ

Recommended Video

Grama Panchayat ಚುನಾವಣೆಗೆ Green ಸಿಗ್ನಲ್!! | Oneindia Kannada

'ದೇಶದಲ್ಲಿ 75 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ. ಆದರೆ ಬಿಜೆಪಿ ಈಗ ಬಿಹಾರದ ಮೇಲೆ ಮಾತ್ರ ಗಮನಹರಿಸಲು ಬಯಸಿದೆ. ಈಗ ಎಲ್ಲಿಯೂ ವಿಕಾಸವಿಲ್ಲ. ನಿರುದ್ಯೋಗ, ಆಹಾರದಂತಹ ಸಮಸ್ಯೆಗಳು ತೀವ್ರಗೊಂಡಿದೆ. ಏಕೆಂದರೆ ಬಿಜೆಪಿಗೆ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಈ ಕೊರೊನಾ ವೈರಸ್ ಭೀತಿ ಬಿತ್ತುತ್ತಿದೆ' ಎಂದು ಆರೋಪಿಸಿದೆ.

English summary
Bihar Assembly Election 2020: Shiv Sena in its mouthpeice Saamana slammed BJP for promising free Covid-19 vaccine for Bihar in its election manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X