ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಪಕ್ಷ ನಮ್ಮನ್ನು ಸಂಪರ್ಕಿಸಿಲ್ಲ: ಯೂಟರ್ನ್‌ ಹೊಡೆದ ಏಕನಾಥ್ ಶಿಂಧೆ

|
Google Oneindia Kannada News

ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ತನ್ನ ಶಾಸಕರ ಗುಂಪಿಗೆ 'ಪ್ರಬಲ ರಾಷ್ಟ್ರೀಯ ಪಕ್ಷ'ವೊಂದು ಬೆಂಬಲ ನೀಡುತ್ತಿದೆ ಎಂದು ಗುರುವಾರ ಹೇಳಿಕೆ ನೀಡಿದ್ದ ಬಂಡಾಯ ಶಾಸಕರ ಗುಂಪಿನ ನಾಯಕ ಏನಕಾಥ್ ಶಿಂಧೆ ಶುಕ್ರವಾರ ಯೂ ಟರ್ನ್‌ ಹೊಡೆದಿದ್ದಾರೆ. ತಾವು ಯಾವುದೇ ರಾಷ್ಟ್ರೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ತನ್ನ ಬಂಡಾಯ ಶಾಸಕರಿಗೆ ಬೆಂಬಲ ನೀಡುತ್ತಿದೆಯೇ ಎಂಬ ಪ್ರಶ್ನೆಗೆ, ಶಿಂಧೆ ಪ್ರತಿಕ್ರಿಯೆ ನೀಡಿದ್ದು, "ದೊಡ್ಡ ಶಕ್ತಿಯು ನಮ್ಮನ್ನು ಬೆಂಬಲಿಸುತ್ತಿದೆ ಎಂದು ಹೇಳಿಕೆ ನೀಡಿದ್ದು, ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಶಕ್ತಿ ಎನ್ನುವ ಅರ್ಥದಲ್ಲಿ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ."

ಶಿವಸೈನಿಕರು ಇನ್ನೂ ಬೀದಿಗೆ ಇಳಿದಿಲ್ಲ, ಜೋಕೆ: ಮೋದಿ ಮತ್ತು ಶಾಗೆ ರಾವುತ್ ಎಚ್ಚರಿಕೆಶಿವಸೈನಿಕರು ಇನ್ನೂ ಬೀದಿಗೆ ಇಳಿದಿಲ್ಲ, ಜೋಕೆ: ಮೋದಿ ಮತ್ತು ಶಾಗೆ ರಾವುತ್ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಯಾವಾಗ ಕೊನೆಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ಕೆಲವೇ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

Shiv Sena Rebele Take U Turn Said No National Party Is In Contact With Them

"ಶಿವಸೇನೆಯ 55 ಶಾಸಕರಲ್ಲಿ 40 ಮಂದಿ ನನ್ನೊಂದಿಗೆ ಗುವಾಹಟಿಗೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಮತ್ತು ಸಂಖ್ಯೆಗಳು ಎಣಿಕೆಯಾಗುತ್ತವೆ. ಆದ್ದರಿಂದ ನಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ" ಎಂದು ಶಿಂಧೆ ಹೇಳಿದರು.

ರಾಷ್ಟ್ರೀಯ ಪಕ್ಷದ ಬೆಂಬಲದ ಬಗ್ಗೆ ಮಾತನಾಡಿದ್ದ ಶಿಂಧೆ

ಗುರುವಾರ ಸಂಜೆ ಶಿಂಧೆ ಅವರ ಸಹಾಯಕರು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅವರು ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. "ಏನೇ ಆಗಲಿ ನಾವು ಗೆಲ್ಲುತ್ತೇವೆ, ಸೂಪರ್ ಪವರ್ ರಾಷ್ಟ್ರೀಯ ಪಕ್ಷವೊಂದು ನಮ್ಮ ಬೆಂಬಲಕ್ಕೆ ಇದೆ, ಪಾಕಿಸ್ತಾನ ಏನಾಯಿತು ಎಂದು ನಿಮಗೆ ತಿಳಿದಿದೆ" ಎಂದು ಶಿಂಧೆ ಹೇಳಿದ್ದಾರೆ.

Shiv Sena Rebele Take U Turn Said No National Party Is In Contact With Them

"ನಾವು ತೆಗೆದುಕೊಂಡ ನಿರ್ಧಾರ ಐತಿಹಾಸಿಕ ಎಂದು ರಾಷ್ಟ್ರೀಯ ಪಕ್ಷದ ಮುಖಂಡರು ನನಗೆ ಹೇಳಿದ್ದಾರೆ, ನಮ್ಮ ಎಲ್ಲಾ ಶಕ್ತಿ ನಿಮ್ಮಲ್ಲಿದೆ, ನಿಮಗೆ ಏನಾದರೂ ಅಗತ್ಯವಿದ್ದರೆ, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ. ನಮಗೆ ಯಾವುದೇ ಸಹಾಯ ಬೇಕಾದಾಗ ಅವರು ಬರುತ್ತಾರೆ" ಎಂದು ಬಿಜೆಪಿ ಬೆಂಬಲ ಕುರಿತು ಶಿಂಧೆ ಪರೋಕ್ಷವಾಗಿ ಹೇಳಿದ್ದರು. ಆದರೆ ಈಗ ಬಿಜೆಪಿ ಬೆಂಬಲದ ಬಗ್ಗೆ ಯೂಟರ್ನ್‌ ಹೊಡೆದಿದ್ದಾರೆ.

ಬಂಡಾಯದ ಬಿಸಿ ತಗ್ಗಿಸಲು 12 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿದ ಸಿಎಂ ಠಾಕ್ರೆಬಂಡಾಯದ ಬಿಸಿ ತಗ್ಗಿಸಲು 12 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿದ ಸಿಎಂ ಠಾಕ್ರೆ

ಕೆಲವು ನಿಮಿಷಗಳ ನಂತರ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು, ಇದರಲ್ಲಿ ಅವರು ದೇಶದ ರಾಷ್ಟ್ರೀಯ ಪಕ್ಷವೆಂದರೆ ಬಿಜೆಪಿ ಹೊರತುಪಡಿಸಿ ಇನ್ಯಾವುದಿದೆ ಎಂದು ಕೇಳಿದರು.

"ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರದ ಬಹುಮತವನ್ನು ಹಾಜರಾತಿ ಪರೀಕ್ಷೆಯ ನಂತರ ನಿರ್ಧರಿಸಲಾಗುತ್ತದೆ ಮತ್ತು ಗುವಾಹಟಿಯಲ್ಲಿ ಅಲ್ಲ" ಎಂದು ಪವಾರ್ ಹೇಳಿದ್ದಾರೆ.

English summary
Shiv Sena rebel Eknath Shinde on Friday said no national party is in contact with them. Asked if BJP was backing his group, Shinde told, "When I said a big power is backing us, I meant the power of Balasaheb Thackeray and Anand Dighe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X