ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೆರೆ.. 37 ಶಾಸಕರ ಬೆಂಬಲ ಪಡೆದುಬಿಟ್ಟರಾ ಏಕನಾಥ್ ಶಿಂಧೆ!?

|
Google Oneindia Kannada News

ಮುಂಬೈ, ಜೂನ್ 22: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತೊಡೆ ತಟ್ಟಿರುವ ಏಕನಾಥ್ ಶಿಂಧೆ ತಮ್ಮ ಪರ ಬಹುಮತವಿದೆ ಎನ್ನುವ ವಾದ ಮಂಡಿಸಿದ್ದಾರೆ.

ಶಿವಸೇನೆಯ 55 ಶಾಸಕರ ಪೈಕಿ ಮೂರರ ಎರಡರಷ್ಟು ಶಾಸಕರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಏಕನಾಥ್ ಶಿಂಧೆ ಹೇಳುತ್ತಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Maharashtra Political Crisis : ಠಾಕ್ರೆ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದು ಹೇಗೆ ಏಕನಾಥ್ ಶಿಂಧೆ? Maharashtra Political Crisis : ಠಾಕ್ರೆ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದು ಹೇಗೆ ಏಕನಾಥ್ ಶಿಂಧೆ?

ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಬೆಳವಣಿಗೆಗಳ ಮಧ್ಯೆ ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕೊಂದಿಗೆ ಗುಜರಾತ್‌ನಿಂದ ಅಸ್ಸಾಂನ ಗುವಾಹಟಿ ಕಡೆಗೆ ಹೊರಟಿದ್ದಾರೆ. ಗುವಾಹಟಿಗೆ ತೆರಳುವುದಕ್ಕೂ ಪೂರ್ವದಲ್ಲೇ ಶಿಂಧೆ ತಂಡವನ್ನು ಮತ್ತಿಬ್ಬರು ಶಾಸಕರು ಸೇರ್ಪಡೆ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂರರ ಎರಡರಷ್ಟು ಬೆಂಬಲದ ಹಿಂದಿನ ರಾಜಕೀಯ ಲೆಕ್ಕಾಚಾರವನ್ನು ಓದಿ ತಿಳಿಯಿರಿ.

ಏಕನಾಥ್ ಶಿಂಧೆಗೆ ಕಮಲ ವಲಯವೇ ಅಚ್ಚುಮೆಚ್ಚು

ಏಕನಾಥ್ ಶಿಂಧೆಗೆ ಕಮಲ ವಲಯವೇ ಅಚ್ಚುಮೆಚ್ಚು

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿರುವ ಏಕನಾಥ್ ಶಿಂಧೆಗೆ ಕಮಲಯ ವಲಯ ಎಂದರೆ ಬಲು ಅಚ್ಚುಮೆಚ್ಚು. ಆದ್ದರಿಂದಲೇ ಬಿಜೆಪಿಯ ಜೊತೆಗೆ ಸೇರಿಕೊಂಡು ಸರ್ಕಾರವನ್ನು ಮುನ್ನೆಡೆಸಬೇಕು ಎನ್ನುವುದು ಅವರ ಪ್ರಸ್ತಾಪವಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿಯ ಪರವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಃ ಶಿವಸೇನೆ ಶಾಸಕರೇ ಅಡ್ಡ ಮತದಾನ ಮಾಡಿದ್ದಾರೆ.

ಏಕನಾಥ್ ಶಿಂಧೆ ಪರ 26 ಶಾಸಕರ ಬೆಂಬಲ

ಏಕನಾಥ್ ಶಿಂಧೆ ಪರ 26 ಶಾಸಕರ ಬೆಂಬಲ

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆಗೆ ಬೆಂಬಲ ವ್ಯಕ್ತಪಡಿಸಿರುವ 26 ಶಾಸಕರು ಯಾರು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ತಿಳಿದುಕೊಳ್ಳೋಣ.

* ಏಕನಾಶ್ ಶಿಂಧೆ

* ತಾನಾಜಿ ಸಾವಂತ್

* ಬಾಲಾಜಿ ಕಲ್ಯಾಣ್ಕರ್

* ಪ್ರಕಾಶ್ ಆನಂದರಾವ್ ಅಬಿತ್ಕರ್

* ಅಬ್ದುಲ್ ಸತ್ತಾರ್

* ಸಂಜಯ್ ಪಾಂಡುರಂಗ

* ಶ್ರೀನಿವಾಸ್ ಒನೆಗಾ

* ಮಹೇಶ್ ಶಿಂಧೆ

* ಸಂಜಯ್ ರೈಮುಲ್ಕರ್

* ವಿಶ್ವನಾಥ್ ಭೋರ್

* ಸಂದೀಪನ್ ರಾವ್ ಭೂಮ್ರೆ

* ರಮೇಶ್ ಬೋರ್ನಾರೆ

* ಅನಿಲ್ ಬಾಬರ್

* ಚಿನ್ಮನರಾವ್ ಪಾಟೀಲ್

* ಶಂಭುರಾಜ್ ದೇಸಾಯಿ

* ಮಹೇಂದ್ರ ದಳವಿ

* ಶಹಾಜಿ ಪಾಟೀಲ್

* ಪ್ರದೀಪ್ ಜೈಸ್ವಾಲ್

* ಮಹೇಂದ್ರ ಥೋರ್ವೆ

* ಕಿಶೋರ್ ಪಾಟೀಲ್

* ಜ್ಞಾನರಾಜ್ ಚೌಗುಲೆ

* ಸಂಜಯ್ ಗಾಯಕವಾಡ್

* ಸುಹಾಸ್ ಕಾಂಡೆ

ಏಕನಾಥ್ ಶಿಂಧೆಗೆ ಯಾಕೆ ಬೇಕು 37 ಶಾಸಕರ ಬೆಂಬಲ?

ಏಕನಾಥ್ ಶಿಂಧೆಗೆ ಯಾಕೆ ಬೇಕು 37 ಶಾಸಕರ ಬೆಂಬಲ?

ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 55 ಶಾಸಕರಿದ್ದಾರೆ. ವಾಸ್ತವದಲ್ಲಿ ಏಕನಾಥ್ ಶಿಂಧೆ ಪರವಾಗಿ 26 ಶಾಸಕರ ಬೆಂಬಲವಿದೆ. ಅದಾಗ್ಯೂ, 37 ಶಾಸಕರು ತಮ್ಮ ಬೆಂಬಲಿದ್ದಾರೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಏಕೆಂದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಶಿವಸೇನೆಯಲ್ಲಿನ ಒಟ್ಟು ಶಾಸಕರಲ್ಲಿ ಮೂರರ ಎರಡರಷ್ಟು ಮಂದಿ ಬೆಂಬಲ ಪಡೆದಿರಬೇಕಾಗುತ್ತದೆ. ಅಂದರೆ ಒಟ್ಟು 55 ಶಾಸಕರಲ್ಲಿ ಕನಿಷ್ಠ 37 ಶಾಸಕರು ಬಿಜೆಪಿಯ ಜೊತೆ ಹೋಗುವುದಕ್ಕೆ ಸಹಮತ ಬೇಕಾಗುತ್ತದೆ.

ಸಾಮಾನ್ಯವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಪಕ್ಷದ ವಿರುದ್ಧ ಚಟುವಟಿಕೆಗಳಿಗೆ ಅನರ್ಹತೆಯ ಶಿಕ್ಷೆ ನೀಡಲಾಗುತ್ತದೆ. ಇಂಥ ಅನರ್ಹತೆಯ ಶಿಕ್ಷೆಯಿಂದ ಬಚಾವ್ ಆಗುವುದಕ್ಕೆ ಏಕನಾಥ್ ಶಿಂಧಗೆ 37 ಶಾಸಕರ ಬೆಂಬಲದ ಅನಿವಾರ್ಯವಾಗಿರುತ್ತದೆ. ಅಂದರೆ 37 ಮಂದಿ ಶಾಸಕರು ಒಮ್ಮತವನ್ನು ವ್ಯಕ್ತಪಡಿಸಿದರೆ, ಆಗ ಎಲ್ಲಾ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ.

ಮಹಾರಾಷ್ಟ್ರದಲ್ಲಿ ಶಾಸಕರ ನಂಬರ್ ಗೇಮ್ ಹೇಗಿದೆ?

ಮಹಾರಾಷ್ಟ್ರದಲ್ಲಿ ಶಾಸಕರ ನಂಬರ್ ಗೇಮ್ ಹೇಗಿದೆ?

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಯಾವ ಪಕ್ಷವು ಎಷ್ಟು ಶಾಸಕರನ್ನು ಹೊಂದಿದೆ ಎಂಬುದರ ಮೇಲೆ ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಶಿವಸೇನೆ 55, NCP 53, ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ. ಈ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಮಹಾ ವಿಕಾಸ ಅಗಾಢಿಯು ಒಟ್ಟು 152 ಶಾಸಕರ ಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಇತರೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಸಂಖ್ಯೆಯು 29 ಆಗಿದೆ.

Recommended Video

Uddhav Thackeray ಅವರ ಸುದ್ದಿಗೋಷ್ಠಿಯ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ | *India | OneIndia Kannada

English summary
Maharashtra Political Crisis: Shiv Sena Rebel Leader Eknath Shinde Claims 2/3rd MLA's With Him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X