ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಡಿಕೆಯ ಬೆಳಗಾವಿ ಎರಡನೇ ರಾಜಧಾನಿ ಹೇಳಿಕೆಗೆ ಶಿವಸೇನೆ ತಕರಾರು

By Manjunatha
|
Google Oneindia Kannada News

ಮುಂಬೈ, ಆಗಸ್ಟ್‌ 02: ಉತ್ತರ ಕರ್ನಾಟಕಕ್ಕೆ ಅನ್ಯಾವಾಗಿದೆ ಎಂಬ ಕೂಗು ಶಮನ ಮಾಡಲು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದ ಕುಮಾರಸ್ವಾಮಿ ಹೇಳಿಕೆಗೆ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದೆ.

ಕುಮಾರಸ್ವಾಮಿ ಅವರ ಈ ಹೇಳಿಕೆಯ ವಿರುದ್ಧ ಮಹಾರಾಷ್ಟ್ರ ಸರ್ಕಾರವು ಹೈಕೋರ್ಟ್‌ ಮೆಟ್ಟಿಲೇರಬೇಕು ಎಂದಿರುವ ಶಿವಸೇನೆ ಪಕ್ಷ, ಕುಮಾರಸ್ವಾಮಿ ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದೆ.

ಎರಡನೇ ರಾಜಧಾನಿಯ ಸಿಎಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ ಎರಡನೇ ರಾಜಧಾನಿಯ ಸಿಎಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ

ಬೆಳಗಾವಿಯು ಈ ಮುಂಚೆ ಮುಂಬೈ ಪ್ರಾಂಥದ ಭಾಗವಾಗಿತ್ತು ಹಾಗಾಗಿ ಅದು ಮಹರಾಷ್ಟ್ರಕ್ಕೆ ಸೇರಬೇಕು ಎಂಬುದು ಶಿವಸೇನೆಯ ವಾದ.

Shiv sena party oppose to make Belgavi as second capital of karnataka

ಬೆಳಗಾವಿಯ ವಿಚಾರವು ನ್ಯಾಯಾಲಯದಲ್ಲಿದ್ದಾಗ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವ ಮಾಡಲು ಹೊರಟಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಶಿವಸೇನೆ ಹೇಳಿದೆ.

ಕುಮಾರಸ್ವಾಮಿ ಅವರು ಬೆಳಗಾವಿಯನ್ನು ರಾಜಧಾನಿ ಮಾಡಲು ಹೊರಟಲ್ಲಿ ಶಿವಸೇನೆ ಹೋರಾಟ ಮಾಡುತ್ತದೆ ಎಂದು ಶಿವಸೇನೆ ಹೇಳಿದ್ದು, ಕುಮಾರಸ್ವಾಮಿ ಅವರ ಈ ಹೇಳಿಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಬಯಸುವವರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದಿದೆ.

English summary
Shiv sena party oppose to CM Kumaraswamy statement about Belgavi. It said Kumaraswamy make Belgavi as second capital Karnataka Shiva Sena will protest against it. Shiva Sena fighting to join Belgavi to Maharashtra state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X