ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರನ್ನು ಭೇಟಿಯಾಗಲಿರುವ ಸೇನೆ, ಕಾಂಗ್ರೆಸ್, ಎನ್‌ಸಿಪಿ ನಾಯಕರು

By ಮಧುಕರ್ ಶೆಟ್ಟಿ
|
Google Oneindia Kannada News

ಮಹಾರಾಷ್ಟ್ರ ನವೆಂಬರ್ 16 : ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಗೊಂದಲ ಮುಂದುವರೆದಿದೆ. ಇವತ್ತು ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 4ಗಂಟೆಯ ವೇಳೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲಿದ್ದಾರೆ.

ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳಿಗೆ ಆಹ್ವಾನ ನೀಡಿದರೂ ಬಹುಮತ ಸಾಭೀತು ಪಡಿಸಲು ಯಾವುದೇ ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಹೀಗಾಗಿ ಇವತ್ತಿನ ರಾಜ್ಯಪಾಲರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ಮಧ್ಯಂತರ ಚುನಾವಣೆ ಇಲ್ಲ: ಸ್ಥಿರ ಸರ್ಕಾರದ ಭರವಸೆ ನೀಡಿದ ಪವಾರ್ಮಧ್ಯಂತರ ಚುನಾವಣೆ ಇಲ್ಲ: ಸ್ಥಿರ ಸರ್ಕಾರದ ಭರವಸೆ ನೀಡಿದ ಪವಾರ್

ರಾಜ್ಯಪಾಲರನ್ನು ಮೂರೂ ಪಕ್ಷಗಳ ನಿಯೋಗ ಭೇಟಿಯಾಗುತ್ತಿದ್ದರೂ ಬೇರೆಯದೇ ಕಾರಣವನ್ನು ನೀಡುತ್ತಿದ್ದಾರೆ. ಭಾರೀ ಮಳೆಯಿಂದ ನಿರಾಶ್ರಿತರಾದವರಿಗೆ ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರುವ ಹಿನ್ನೆಲೆಯಲ್ಲಿ ಈ ಭೇಟಿ ಎಂದು ಈ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

Sena-NCP-Congress Delegation to meet Maharashtra Governor today

ಮತ್ತೊಂದೆಡೆ ಮೈತ್ರಿಗೆ ಎನ್‌ಸಿಪಿ ಶಿವಸೇನೆ ಕಾಂಗ್ರೆಸ್‌ ಸಾಕಷ್ಟು ಸಿದ್ಧತೆಗಳು ನಡೆಯುತ್ತದೆ. ಗುರುವಾರ ಮೂರೂ ಪಕ್ಷಗಳ ನಾಯಕರು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಸಾಮಾನ್ಯಾ ಕನಿ‍ಷ್ಠ ಕಾರ್ಯಕ್ರಮಗಳ ಕರುಡು ಪ್ರತಿಯೂ ಸಿದ್ಧಪಡಿಸಲಾಯಿತು. ಅನುಮೋದನೆಗಾಗಿ ಮೂರೂ ಪಕ್ಷಗಳ ನಾಯಕರಿಗೆ ಕರುಡು ಪ್ರತಿ ಕಳುಹಿಸಲಾಗಿದೆ. ಶಿವಸೇನೆ ಮೈತ್ರಿಯ ನೇತೃತ್ವವಹಿಸಿಕೊಳ್ಳಲಿದೆ ಎಂದು ಎನ್‌ಸಿಪಿ ವಕ್ತಾರ ಹೇಳಿಕೆಯನ್ನು ನೀಡಿದ್ದಾರೆ. ಮೈತ್ರಿ ಸರ್ಕಾರ ರಚನೆಯ ವಿಶ್ವಾಸವನ್ನು ಎನ್‌ಸಿಪಿ ನಾಯಕ ಶರದ್ ಪವಾರ್ ವ್ಯಕ್ತಪಡಿಸಿದ್ದರು.

ಶಿವಸೇನಾ ಬಹುಕಾಲದ ಬೇಡಿಕೆಗೆ ಅಸ್ತು ಎಂದ ಎನ್ಸಿಪಿಶಿವಸೇನಾ ಬಹುಕಾಲದ ಬೇಡಿಕೆಗೆ ಅಸ್ತು ಎಂದ ಎನ್ಸಿಪಿ

ಕಳೆದ 24ನೇ ತಾರೀಕಿನಂದು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಮೈತ್ರಿಯೂ ಸಾಧ್ಯವಾಗದ ಕಾರಣ ರಾಜ್ಯಪಾಲರು ಕಳೆದೆಡು ದಿನಗಳ ಹಿಂದೆಯಷ್ಟೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸನ್ನು ಮಾಡಿದ್ದರು.

English summary
The first-of-its-kind alliance among the Shiv Sena, the Nationalist Congress Party (NCP) and the Congress in Maharashtra appeared to be taking shape after Sharad Pawar on Friday expressed confidence that the government formed by the three parties will last a full term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X