ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಶಿವಸೇನಾ ಸಂಸದ ಸಂಜಯ್ ಜಾಧವ್ ರಾಜೀನಾಮೆ

|
Google Oneindia Kannada News

ಮುಂಬೈ, ಆ. 27: ಮಹಾರಾಷ್ಟ್ರದ ಶಿವಸೇನಾ ವರಿಷ್ಠ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೈಗೆ ಪಕ್ಷದ ಸಂಸದ ಸಂಜಯ್ ಹರಿಭಾವ್ ಜಾಧವ್ ಅವರು ಕಳಿಸಿರುವ ರಾಜೀನಾಮೆ ಪತ್ರ ತಲುಪಿದೆ.

Recommended Video

ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? | Oneindia Kannada

ಶಿವಸೇನಾ ಸಂಸದ ಸಂಜಯ್ ಜಾಧವ್ ಅವರು ಬುಧವಾರದಂದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ದೂರಿದ್ದಾರೆ. ಶಿವಸೇನೆಯನ್ನು ಎನ್ ಸಿಪಿ ಆವರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

Shiv Sena MP Sanjay Jadhav resigns

ಪರ್ಭಾನಿ ಲೋಕಸಭಾ ಕ್ಷೇತ್ರದಲ್ಲಿ 16 ಹಾಗೂ 17ನೇ ಲೋಕಸಭೆಗೆ ಆಯ್ಕೆಯಾದ ಸಂಜಯ್ ಅವರು ಬಂಧು ಜಾಧವ್ ಎಂದೇ ಜನಪ್ರಿಯರಾಗಿದ್ದಾರೆ. ಇದಲ್ಲದೆ 2009-2014ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಗೂ ಶಿವಸೇನೆಯಿಂದ ಆಯ್ಕೆಯಾಗಿದ್ದರು.

ಪರ್ಭಾನಿ ಕ್ಷೇತ್ರದ ಜಿಂತೂರ್ ಎಪಿಎಂಸಿ ಆಡಳಿತಾಧಿಕಾರಿಗಳ ನೇಮಕಾತಿಯಲ್ಲಿ ಎನ್ ಸಿಪಿ ನಾಯಕರ ಹಸ್ತಕ್ಷೇಪದ ಬಗ್ಗೆ ಸಂಜಯ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಶಿವಸೇನೆಯ ನಿಷ್ಠರನ್ನು ಬದಿಗೊತ್ತಿ, ಎನ್ಸಿಪಿ ಬೆಂಬಲಿತ ವ್ಯಕ್ತಿಯನ್ನು ನೇಮಿಸಿರುವುದಕ್ಕೆ ಸಂಜಯ್ ಬೇಸರ ವ್ಯಕ್ತಪಡಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿಯಿದೆ.

English summary
Maharashtra: Shiv Sena MP Sanjay Haribhau Jadhav resigned on Wednesday(Aug 26). Bandu Jadhav is member a of 16th & 17th Lok Sabha from Parbhani constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X