ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟು ಹಂಚಿಕೆ ವಿವಾದ, ಬಿಜೆಪಿ ಜೊತೆ ಮೈತ್ರಿಗೆ ಒಲ್ಲೆ ಎಂದ ಶಿವಸೇನೆ?

|
Google Oneindia Kannada News

ಮುಂಬೈ, ಸೆಪ್ಟೆಂಬರ್ 16: ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ತಯಾರಿ ನಡೆಸಿಕೊಳ್ಳಿ ಎಂದು ಶಿವಸೇನೆ ಅಧ್ಯಕ್ಷ ಉದ್ದವ್ ಠಾಕ್ರೆ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.

ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಜೊತೆ ಸೂಕ್ತ ಒಪ್ಪಂದಕ್ಕೆ ಬರಲಾಗದ ಕಾರಣ ಏಕಾಂಗಿಯಾಗಿಯೇ ಚುನಾವಣೆ ಎದುರಿಸಲು ಶಿವಸೇನೆ ನಿರ್ಧರಿಸಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಶಿವಸೇನೆಯಾಗಲೀ, ಬಿಜೆಪಿಯಾಗಲೀ ಇದುವರೆಗೆ ಮಾಡಿಲ್ಲ.

ಮಹಾರಾಷ್ಟ್ರದಲ್ಲಿ ಶುರುವಾಯ್ತು ಶಿವಸೇನೆ-ಬಿಜೆಪಿ ಸೀಟು ಹಂಚಿಕೆ ಚೌಕಾಸಿಮಹಾರಾಷ್ಟ್ರದಲ್ಲಿ ಶುರುವಾಯ್ತು ಶಿವಸೇನೆ-ಬಿಜೆಪಿ ಸೀಟು ಹಂಚಿಕೆ ಚೌಕಾಸಿ

ಮೂಲಗಳ ಪ್ರಕಾರ ಸ್ವತಂತ್ರವಾಗಿ ಚುವಾಣೆ ಎದುರಿಸಲು ಸ್ವತಃ ಶಿವಸೇನೆಯೂ ಸಿದ್ಧವಿಲ್ಲ. ಆದರೆ ಸೀಟು ಹಂಚಿಕೆಯ ವಿಷಯದಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದಕ್ಕೂ ಶಸಿವಸೇನೆ ಒಪ್ಪುತ್ತಿಲ್ಲ!

ಕೊನೇ ಕ್ಷಣದಲ್ಲಿ ಬದಲಾವಣೆ ಹೊರತುಪಡಿಸಿ..!

ಕೊನೇ ಕ್ಷಣದಲ್ಲಿ ಬದಲಾವಣೆ ಹೊರತುಪಡಿಸಿ..!

"ಲೋಕಸಭೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮತದಾರರಿಗೂ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ. ನಮಗೂ ಸ್ವತಂತ್ರವಾಗಿ ಸ್ಪರ್ಧಿಸುವುದು ಇಷ್ಟವಿಲ್ಲ. ಆದರೆ ಬಿಜೆಪಿ ಸೀಟು ಹಂಚಿಕೆಯ ವಿಷಯದಲ್ಲಿ ಶಿವಸೇನೆಯ ಬೇಡಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ನಿರ್ಧಾರವನ್ನು ಸಡಿಲಿಸಬಹುದು ಎಂಬ ವಿಶ್ವಾಸವಿದೆ. ಅದಿಲ್ಲವೆಂದರೆ ನಾವು ಸ್ವತಂತ್ರವಾಗಿಯೇ ಸ್ಪರ್ಧಿಸಬೇಕಾಗುತ್ತದೆ" ಎಂದು ಶಿವಸೇನೆ ಹೇಳಿದೆ.

ಶಿವಸೇನೆಗೆ 106 ಸೀಟಿನ ಆಫರ್!

ಶಿವಸೇನೆಗೆ 106 ಸೀಟಿನ ಆಫರ್!

ಮಹಾರಾಷ್ಟ್ರದ ಒಟ್ಟು 288 ವಿಧಾನಸಭೆ ಕ್ಷೇತ್ರಗಳಲ್ಲಿ 106 ಕ್ಷೇತ್ರಗಳನ್ನು ಶಿವಸೇನೆಗೆ ಬಿಟ್ತುಕೊಡುವುದಾಗಿ ಬಿಜೆಪಿ ಹೇಳಿದೆ. ಆದರೆ ಶಿವಸೇನೆ ಮೊದಲಿಗೆ 144 ಅಂದರೆ 50:50 ಸೀಟು ಹಂಚಿಕೆಯ ಬೇಡಿಕೆಯನ್ನಿಟ್ಟಿತ್ತು. ಅದಕ್ಕೆ ಬಿಜೆಪಿ ಸುತಾರಾಂ ಒಬ್ಬದ ಕಾರಣ ಕನಿಷ್ಠ ಪಕ್ಷ 120 ಕ್ಷೇತ್ರಗಳನ್ನದರೂ ತನಗೆ ಬಿಟ್ಟುಕೊಡುವಂತೆ ಶಿವಸೇನೆ ಕೇಳಿದೆ. ಆದರೆ ಅದಕ್ಕೂ ಬಿಜೆಪಿ ಸಿದ್ಧವಿಲ್ಲ!

ಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ -ಎನ್ಸಿಪಿ ಸೀಟು ಹಂಚಿಕೆ ಅಂತಿಮಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ -ಎನ್ಸಿಪಿ ಸೀಟು ಹಂಚಿಕೆ ಅಂತಿಮ

2014 ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ

2014 ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ

2014 ರಲ್ಲೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಸ್ತಂತ್ರವಾಗಿ ಸ್ಪರ್ಧಿಸಿತ್ತು. ಆ ನಂತರ ಬಿಜೆಪಿ 122(288), ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕೆಲವು ತಿಂಗಳ ನಂತರ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದವು.

ಬಿಜೆಪಿ ಲೆಕ್ಕಾಚಾರ

ಬಿಜೆಪಿ ಲೆಕ್ಕಾಚಾರ

ಕೆಲವು ಮೂಲಗಳ ಪ್ರಕಾರ ಬಿಜೆಪಿ 170 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಶಿವಸೇನೆ 118 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಶಿವಸೇನೆ ಕೆಲವು ತಿಂಗಳುಗಳಿಂದಲೂ, ಈ ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯ ಪಟ್ಟ ಶಿವಸೇನೆಯ ನಾಯಕರಿಗೇ ಸಿಗಬೇಕು ಎಂದು ಪಟ್ಟು ಹಿಡಿದಿರುವುದರಿಂದ ಶಿವಸೇನೆಗೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ತನ್ನ ಪ್ರಾಬಲ್ಯ ತಪ್ಪಿಹೋಗಬಹುದು ಎಂಬ ಆತಂಕದಲ್ಲಿ ಬಿಜೆಪಿ ಇದ್ದು, ಶಿವಸೇನೆ ಸ್ವತಂತಗ್ರ ಸ್ಪರ್ಧೆಗೆ ಮುಂದಾದರೆ ಹೆಚ್ಚು ಚೌಕಾಸಿಗೂ ಹೋಗದೆ ಇದ್ದರೆ ಅಚ್ಚರಿಯಿಲ್ಲ!

English summary
After Seat sharing difference, Shiv Sena preparing to face Maharashtra Assembly elections without joining hands with BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X