ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ಗೆ ಶಿವಸೇನೆ ಪತ್ರ

|
Google Oneindia Kannada News

ಮುಂಬೈ, ನವೆಂಬರ್ 5: ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ಗೆ ಶಿವಸೇನೆ ಪತ್ರ ಬರೆದಿದೆ. ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ 50:50 ಅಧಿಕಾರ ಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಆದರೆ ಬಿಜೆಪಿಯ ಅರ್ಧದಷ್ಟು ಸೀಟು ಕೂಡ ಗೆದ್ದಿಲ್ಲ ಹೇಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಎನ್ನುವುದು ಬಿಜೆಪಿಯ ಪ್ರಶ್ನೆಯಾಗಿದೆ.

ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ: ಸೋನಿಯಾ ಗಾಂಧಿ ಹೇಳಿದ್ದೇನು?ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ: ಸೋನಿಯಾ ಗಾಂಧಿ ಹೇಳಿದ್ದೇನು?

ಹೀಗಿರುವಾಗ ಚುನಾವಣೆ ಫಲಿತಾಂಶ ಹೊರಬಿದ್ದು ತಿಂಗಳಿಗೆ ಬಂದರೂ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಗೊಂದಲ ಇನ್ನೂ ಮುಮದುವರೆದಿದೆ. ಹೀಗಾಗಿ ಈ ವಿಚಾರದಲ್ಲಿ ಆರ್‌ಎಸ್‌ಎಸ್‌ ಮಧ್ಯಸ್ಥಿಕೆವಹಿಸುವಂತೆ ಶಿವಸೇನೆಯು ಮೋಹನ್ ಭಾಗವತ್‌ಗೆ ಪತ್ರ ಬರೆದಿದೆ.

Shiv Sena Letter To Mohan Bhagwat

ಬರೆದ ಪತ್ರದಲ್ಲಿ ಬಿಜೆಪಿ-ಶಿವಸೇನಾ ಸೇರಿ ಸರ್ಕಾರವನ್ನು ರಚನೆ ಮಾಡುವ ಕುರಿತು ಎಲ್ಲಾ ಮಾತುಕತೆ ನಡೆದಿತ್ತು. ಆದರೆ ಇದೀಗ ಮೈತ್ರಿ ಧರ್ಮವನ್ನು ಬಿಜೆಪಿ ಮರೆತಿದೆ ಎಂದು ತಿವಾರಿ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಇದುವರೆಗೂ ಆರ್‌ಎಸ್‌ಎಸ್‌ನಿಂದ ಯಾವುದೇ ಪ್ರತಿಕ್ರಿಯೆ ಶಿವಸೇನೆಗೆ ಲಭ್ಯವಾಗಿಲ್ಲ. ಒಂದೆಡೆ ಶಿವಸೇನೆಯು ಶರದ್ ಪವಾರ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ದೇವೇಂದ್ರ ಫಡ್ನವಿಸ್, ಅಮಿತ್ ಶಾ ಹಾಗೂ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
The Shiv Sena, following the results in the Maharashtra assembly election, has claimed that the BJP had agreed to a 50:50 power share in the state ahead of the general elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X