ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ, ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ!

|
Google Oneindia Kannada News

ಮುಂಬೈ, ಜೂನ್ 29: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಬಹುತೇಕ ಶಮನಗೊಂಡಿದ್ದು, ವಿಶ್ವಾಸಮತ ಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನವನ್ನು ಉದ್ದವ್ ಠಾಕ್ರೆ ತೊರೆದಿದ್ದಾರೆ. ಈ ಮೂಲಕ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ ಶಿವಸೇನಾ ಬಂಡಾಯ ಶಾಸಕರ ಹಾದಿ ಸುಗಮಗೊಳಿಸಿದ್ದಾರೆ. ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ ಬಳಿಕ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸಂವೇದನಾಶೀಲ, ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದ್ದೇನೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ, ಸಂಜಯ್ ರಾವತ್ ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, "ನಾವು ಸೂಕ್ಷ್ಮ ಮತ್ತು ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದ್ದೇವೆ" ಎಂದು ಹೇಳಿದರು. ಜೊತೆಗೆ ತಮ್ಮ ನೋವನ್ನು ಟ್ವೀಟ್ ಮೂಲಕ ತೋಡಿಕೊಂಡಿದ್ದಾರೆ.

"ವಂಚನೆಯ ಅಂತ್ಯ ಒಳ್ಳೆಯದಲ್ಲ ಎಂದು ಇತಿಹಾಸ ಹೇಳುತ್ತದೆ. ಠಾಕ್ರೆ ಗೆದ್ದರು, ಜನರೂ ಗೆದ್ದರು. ಇದು ಶಿವಸೇನೆಯ ಮಹಾ ವಿಜಯದ ಆರಂಭ. ಲಾಠಿ ಏಟು ತಿನ್ನೋಣ. ಜೈಲಿಗೆ ಹೋಗೋಣ. ಆದರೆ ಬಾಳಾಸಾಹೇಬರ ಶಿವಸೇನೆ ಪ್ರಜ್ವಲಿಸುತ್ತಿರಲಿ!" ಎಂದಿದ್ದಾರೆ.

Shiv Sena Leader Sanjay Raut First Reaction After Uddhav Thackeray Resignation Shiv Sena Leader

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಬಲಾಬಲ: (ಜೂನ್ 29 ರಾತ್ರಿ 23:00 ಗಂಟೆ)
ಒಟ್ಟು ಸ್ಥಾನ: 287
ಮ್ಯಾಜಿಕ್ ನಂಬರ್: 144
ಶಿವಸೇನಾ: 16
ಎನ್ ಸಿ ಪಿ: 53
ಕಾಂಗ್ರೆಸ್: 44
ಬಿಜೆಪಿ: 106
ಬಂಡಾಯ ಶಾಸಕರು: 49

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ. 49ಕ್ಕೂ ಅಧಿಕ ಶಾಸಕರನ್ನು ತಮ್ಮ ಬಳಿ ಹೊಂದಿರುವುದಾಗಿ ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ. ಬಹುತೇಕ ಎನ್ಡಿಎ ಬಳಿ 155 ಕ್ಕೂ ಅಧಿಕ ಶಾಸಕರ ಬಲ ಇರಲಿದೆ. ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿತ್ತು.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
Shiv Sena leader Sanjay Raut first reaction after Uddhav Thackeray Resignation as Maharashtra Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X