ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ಸಂಜಯ್ ರಾವತ್ ಬಂಧನ, ಶಿವಸೇನೆಯಿಂದ ಬೃಹತ್ ಪ್ರತಿಭಟನೆ

|
Google Oneindia Kannada News

ಮುಂಬೈ, ಆ.01: ಮುಂಬೈನ ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್‌ರನ್ನು ಅವರನ್ನು ಹಲವು ಗಂಟೆಗಳು ವಿಚಾರಣೆ ನಡೆಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಸಂಜಯ್ ರಾವತ್ ಬಂಧನ ಖಂಡಿಸಿ ಶಿವಸೇನೆ ಸೋಮವಾರ ಮುಂಬೈನಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದೆ.

60 ವರ್ಷದ ಸಂಜಯ್ ರಾವುತ್, ಉದ್ಧವ್ ಠಾಕ್ರೆ ತಂಡವನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರ ತನ್ನನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

"ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಅವರಿಂದ ಹೆದರಿದ ಕಾರಣ ಅವರನ್ನು ಬಂಧಿಸಲಾಗಿದೆ. ಅವರ ಬಂಧನಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ ಅವರನ್ನು ಬಂಧಿಸಲಾಗಿದೆ. ಅವರನ್ನು ಬೆಳಿಗ್ಗೆ 11.30 ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಸಹೋದರ ಸುನಿಲ್ ರಾವುತ್ ತಿಳಿಸಿದ್ದಾರೆ.

Shiv Sena has planned protests across Mumbai over Sanjay Raut arrest

ಸಂಜಯ್ ರಾವುತ್ ಬಂಧನವನ್ನು ವಿರೋಧಿಸಿ ಶಿವಸೇನೆ ಮುಂಬೈನಾದ್ಯಂತ ಪ್ರತಿಭಟನೆಗಳನ್ನು ಯೋಜಿಸಿದೆ. ಭಾನುವಾರ ಕೂಡ ಇಡಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಶಿವಸೇನೆಯ 7 ಕಾರ್ಯಕರ್ತರು ರಾವತ್ ಮನೆ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಬಿಜೆಪಿ ಮತ್ತು ಇಡಿ ವಿರುದ್ಧ ಘೋಷಣೆ ಕೂಗಿದ್ದರು.

ಎರಡು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾನುವಾರ ಸಂಜಯ್ ರಾವುತ್ ಮನೆ ಮೇಲೆ ದಾಳಿ ನಡೆಸಿ, ಶೋಧಿಸಿದ್ದರು. ತನಿಖಾ ಸಂಸ್ಥೆಯ ತಂಡ ಭಾನುವಾರ ಬೆಳಗ್ಗೆ 7 ಗಂಟೆಗೆ ರಾವತ್ ಮನೆಗೆ ತಲುಪಿತ್ತು. ಪೂರ್ತಿ ದಿನ ಶೋಧ ನಡೆಸಿದ ಅಧಿಕಾರಿಗಳು ರಾವತ್‌ರನ್ನು ಸಂಜೆಯ ವೇಳೆಗೆ ಬಂಧಿಸಿದ್ದರು.

ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶೀವಸೇನಾ ಗುಂಪಿನ ರಾಜ್ಯಸಭಾ ಸಂಸದರನ್ನು ಇಂದು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಅಲ್ಲಿ ಜಾರಿ ನಿರ್ದೇಶನಾಲಯವು ಅವರ ಕಸ್ಟಡಿಗೆ ಕೋರಲಿದೆ ಎಂದು ಪಿಟಿಐ ವರದಿ ಮಾಡಿದೆ.

Recommended Video

HD Kumaraswamy ಇಂದು ಸಾವಿನ ಮನೆಗೆ ಭೇಟಿ ನೀಡಿದರು | *Politics | OneIndia Kannada

ದಾಳಿ ಕುರಿತು ಟ್ವೀಟ್ ಮಾಡಿದ್ದ ಸಂಸದ, "ಸುಳ್ಳು ಕ್ರಮ..ಸುಳ್ಳು ಸಾಕ್ಷ್ಯ... ನಾನು ಶಿವಸೇನೆ ಬಿಡುವುದಿಲ್ಲ.. ನಾನು ಸತ್ತರೂ.. ನಾನು ಶರಣಾಗುವುದಿಲ್ಲ..ಜೈ ಮಹಾರಾಷ್ಟ್ರ" ಎಂದು ಹೇಳಿದ್ದರು. "ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ" ಎಂದು ಭಾನುವಾರ ಬೆಳಿಗ್ಗೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದರು.

English summary
ED arrested MP Sanjay Raut in Patra Chawl land scam case, Shiv Sena has planned big protest across Mumbai on Monday. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X