ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆ ಯಾರ ಬೆನ್ನಿಗೂ ಚೂರಿ ಹಾಕುವುದಿಲ್ಲ; ರಾವತ್

|
Google Oneindia Kannada News

ಮುಂಬೈ, ಸೆಪ್ಟೆಂಬರ್ 18: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಶಿವಸೇನೆ ಸಂಸದ ಸಂಜಯ್ ರಾವುತ್ ತಳ್ಳಿಹಾಕಿದ್ದು, 'ಶಿವಸೇನೆ ಯಾರ ಬೆನ್ನಿಗೂ ಚೂರಿ ಹಾಕುವ ಕೆಲಸ ಮಾಡುವುದಿಲ್ಲ ಹಾಗೂ ಪಕ್ಷ ತನ್ನ ಬದ್ಧತೆ ಮೇಲೆ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.

'ಮಹಾರಾಷ್ಟ್ರ ಐದು ವರ್ಷಗಳ ಕಾಲ ಅಧಿಕಾರದಲ್ಲಿರಲು ಬದ್ಧವಾಗಿದೆ. ಶಿವಸೇನೆ ತನ್ನ ಬದ್ಧತೆಗಳ ಮೇಲೆ ಕೆಲಸ ಮಾಡುತ್ತಿದೆ. ಸಿಎಂ (ಭಾವೀ ಸ್ನೇಹಿತ) ಹೇಳಿಕೆಯಿಂದ ಯಾರಿಗಾದರೂ ಸಂತೋಷವಾಗಿದ್ದರೆ, ಅದು ಮೂರು ವರ್ಷಗಳ ಕಾಲ ಹಾಗೇ ಇರಲಿ. ಶಿವಸೇನೆ ಯಾರ ಬೆನ್ನಿಗೂ ಚೂರಿ ಹಾಕುವುದಿಲ್ಲ' ಎಂಬುದನ್ನು ಪುನರುಚ್ಚರಿಸಿದ್ದಾರೆ.

 ಸೋನು ಸೂದ್‌ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್‌ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶ ಸೋನು ಸೂದ್‌ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್‌ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ರಾವ್‌ಸಾಹೇಬ್ ದಾನ್ವೆ ಉದ್ದೇಶಿಸಿ ಹೇಳಿಕೆ ನೀಡಿದ್ದು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿತ್ತು.

Shiv Sena Doesnt Backstab Anyone Says Sanjay Raut

'ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಏನು ಹೇಳಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು' ಎಂದು ಸಂಜಯ್ ರಾವತ್ ಹೇಳಿದ್ದು, ಠಾಕ್ರೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟ ಹೇಳಿಕೆ: ಸಿಎಂ "ಭವಿಷ್ಯದ ಸ್ನೇಹಿತರು' ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಹೇಳಿಕೆ ನೀಡಿರುವುದು ರಾಜಕೀಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸಿಎಂ ಉದ್ಧವ್ ಠಾಕ್ರೆ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಭವಿಷ್ಯದ ಸ್ನೇಹಿತರು ಅಥವಾ ಮುಂದಿನ ಸಂಭಾವ್ಯ ಸ್ನೇಹಿತರು ಎಂದು ಕರೆದಿದ್ದು ರಾಜಕೀಯ ಊಹಾಪೋಹಗಳಿಗೆ ಅನುವು ಮಾಡಿಕೊಟ್ಟಿದೆ.

 'ತಾಲಿಬಾನ್‌ ಜೊತೆ ಹಿಂದುತ್ವದ ಹೋಲಿಕೆ ಹಿಂದೂ ಸಂಸ್ಕೃತಿಗೆ ತೋರಿದ ಅಗೌರವ': ಶಿವಸೇನೆ 'ತಾಲಿಬಾನ್‌ ಜೊತೆ ಹಿಂದುತ್ವದ ಹೋಲಿಕೆ ಹಿಂದೂ ಸಂಸ್ಕೃತಿಗೆ ತೋರಿದ ಅಗೌರವ': ಶಿವಸೇನೆ

ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯಾಗಲಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 2019ರ ವಿಧಾನಸಭಾ ಚುನಾವಣೆ ನಂತರ ಬಿಜೆಪಿಯೊಂದಿಗೆ ಬೇರ್ಪಟ್ಟು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದೆ.

Shiv Sena Doesnt Backstab Anyone Says Sanjay Raut

ಇದರೊಂದಿಗೆ ಶುಕ್ರವಾರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಠಾಕ್ರೆ, 'ಪ್ರಧಾನಿ ಮೋದಿ ಬಿಜೆಪಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಹಾಗೂ ಅವರಿಗೆ ಸಮನಾದ ಬೇರೆ ನಾಯಕರಿಲ್ಲ' ಎಂದು ಹೊಗಳಿದ್ದಾರೆ.

'ಭಾರತದಲ್ಲಿ ಜನರ ನಡುವಿನ ನಾಯಕನಾಗಿ ಪ್ರಧಾನಿ ಮೋದಿ ಜನಪ್ರಿಯರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ನಂತರ ಬಿಜೆಪಿಯನ್ನು ಬೇರೆಯದೇ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮೋದಿ ಆಡಳಿತದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಕಾಯ್ದುಕೊಂಡಿದೆ' ಎಂದು ರಾವತ್ ಕೂಡ ಹೊಗಳಿದ್ದಾರೆ.

English summary
‘Shiv Sena doesn’t backstab anyone’ says Sanjay Raut rules out alliance with BJP after CM's 'future friend' remark,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X