ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೇಸಾ ಬಗ್ಗೆ ಭಾಗ್ವತ್ ಹೇಳಿಕೆಗೆ ಶಿವಸೇನೆ ಬೆಂಬಲ

By Mahesh
|
Google Oneindia Kannada News

ಮುಂಬೈ, ಫೆ.25: ನೊಬೆಲ್ ಶಾಂತಿ ಪಾರಿತೋಷಕ ಪುರಸ್ಕೃತೆ ಮದರ್ ತೆರೇಸಾ ಅವರ ನಿಸ್ವಾರ್ಥ ಸೇವೆ ಹಿಂದೆ ಮತಾಂತರ ಹುನ್ನಾರವಿತ್ತು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ನೀಡಿದ ವಿವಾದಿತ ಹೇಳಿಕೆಗೆ ಶಿವಸೇನೆ ಬುಧವಾರ ಬೆಂಬಲ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ರ ವಿವಾದಾತ್ಮಕ ಹೇಳಿಕೆಯನ್ನು ಸಮರ್ಧಿಸಿಕೊಂಡಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.

Shiv Sena defends RSS chief's Mother Teresa remarks

ಮದರ್ ತೆರೇಸಾ ಅಷ್ಟೇ ಅಲ್ಲ ಭಾರತಕ್ಕೆ ಬಂದಿರುವ ಎಲ್ಲಾ ಮಿಷನರಿಗಳ ಉದ್ದೇಶ ಮತಾಂತರವೇ ಆಗಿದೆ. ಹೀಗಾಗಿ ಮೋಹನ್ ಭಾಗ್ವತ್ ಅವರ ಹೇಳಿಕೆ ಸರಿಯಾಗಿದೆ. ಮುಸ್ಲಿಮರು ಕತ್ತಿ ಹಿಡಿದು ಬಲವಂತವಾಗಿ ಮತಾಂತರ ಮಾಡಿದರೆ, ಕ್ರೈಸ್ತ ಮಿಷನರಿಗಳು ಹಣದ ಆಮಿಷವೊಡ್ಡಿ ಈ ಕೆಲಸ ಪೂರೈಸಿಕೊಂಡಿವೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]

ರಾಜಸ್ಥಾನದ ಭರತ್‌ಪುರ್‌ ದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಮದರ್ ತೆರೇಸಾ ಅವರ ಸೇವೆ ನಿಸ್ವಾರ್ಥವಾಗಿತ್ತು. ಆದರೆ, ಆ ಸೇವೆಯ ಹಿಂದಿನ ಉದ್ದೇಶ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಆಗಿತ್ತು ಎಂದಿದ್ದರು.

ಮೋಹನ್ ಭಾಗ್ವತ್ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆ ನಡೆದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಭಾಗ್ವತ್ ಹೇಳಿಕೆ ಖಂಡಿಸಿದ್ದಾರೆ. (ಪಿಟಿಐ)

English summary
Defending RSS chief Mohan Bhagwat's remarks about Mother Teresa, Shiv Sena on Wednesday said he had spoken the "bitter truth".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X