ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಹರಡಲು 'ನಮಸ್ತೆ ಟ್ರಂಪ್' ಕಾರಣ: ಶಿವಸೇನಾ ಆರೋಪ

|
Google Oneindia Kannada News

ಮುಂಬೈ, ಮೇ 31: ದೇಶದಲ್ಲಿ ಕೊರೊನಾ ವೈರಸ್ ಹರಡಲು 'ನಮಸ್ತೆ ಟ್ರಂಪ್' ಕಾರ್ಯಕ್ರಮ ಪ್ರಮುಖ ಕಾರಣ ಎಂದು ಶಿವಸೇನಾ ನಾಯಕರು ಆರೋಪಿಸಿದ್ದಾರೆ.

ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದರು. ಟ್ರಂಪ್ ಸ್ವಾಗತಕ್ಕಾಗಿ ಅಹಮದಬಾದ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತರ ಮುಂಬೈ, ದೆಹಲಿಗೆ ಟ್ರಂಪ್ ಭೇಟಿ ಮಾಡಿದ್ದರು. ಈ ಕಾರ್ಯಕ್ರಮಗಳಿಂದಲೇ ಕೊರೊನಾ ವೈರಸ್ ಹರಡಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 91 ಪೊಲೀಸರಿಗೆ ಕೊರೊನಾ, 26 ಮಂದಿ ಸಾವುಮಹಾರಾಷ್ಟ್ರದಲ್ಲಿ ಹೊಸದಾಗಿ 91 ಪೊಲೀಸರಿಗೆ ಕೊರೊನಾ, 26 ಮಂದಿ ಸಾವು

ಲಾಕ್‌ಡೌನ್‌ ಜಾರಿ ಮಾಡುವ ವೇಳೆಯಲ್ಲಿ ಕೇಂದ್ರ ಸರ್ಕಾರವೂ ಯಾವುದೇ ಪೂರ್ವ ಯೋಜನೆ ಇಲ್ಲದೆ ಕ್ರಮ ಕೈಗೊಂಡಿದ್ದರು. ಈಗ ಲಾಕ್‌ಡೌನ್‌ ತೆರವುಗೊಳಿಸುವ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರಿ ನೀಡಲಾಗಿದೆ ಎಂದು ಟೀಕಿಸಿದ್ದಾರೆ.

Shiv Sena Blames Namaste Trump Event For Coronavirus Spread In State

''ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಪ್ರಯತ್ನ ಪಡ್ತಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಅಡಿಯಲ್ಲಿ ಶಿವಸೇನಾ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಸರ್ಕಾರ ರಚನೆ ಮಾಡಿದೆ. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ'' ಎಂದು ಸಂಜಯ್ ರಾವತ್ ಹೇಳಿದ್ದಾರೆ.

Shiv Sena Blames Namaste Trump Event For Coronavirus Spread In State

ಫೆಬ್ರವರಿ 24ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದರು. ಟ್ರಂಪ್ ಜೊತೆ ಕಲವು ಗಣ್ಯರು ಬಂದಿದ್ದರು. ಟ್ರಂಪ್ ಸ್ವಾಗತಿಸಲು ಅಹಮದಬಾದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಒಂದು ಲಕ್ಷ ಜನರು ಭಾಗವಹಿಸಿದ್ದರು. ಗುಜರಾತ್‌ನಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಫೆಬ್ರವರಿ 20 ರಂದು ವರದಿಯಾಗಿತ್ತು ಎಂದು ಶಿವಸೇನಾ ಆರೋಪಿಸಿದೆ.

English summary
Shiv sena Mp sanjay raut blames Namaste Trump event is main reason for coronavirus spread in mumbai, ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X