ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರಾಚಿ ಬೇಕರಿ' ಹೆಸರನ್ನು ಮರಾಠಿಗೆ ಬದಲಾಯಿಸಲು ಶಿವಸೇನೆಯಿಂದ ಒತ್ತಡ

|
Google Oneindia Kannada News

ಮುಂಬೈ, ನವೆಂಬರ್ 19: ಕರಾಚಿ ಬೇಕರಿ ಹೆಸರನ್ನು ಮರಾಠಿಗೆ ಬದಲಾಯಿಸುವಂತೆ ಶಿವಸೇನೆ ಒತ್ತಡ ಹಾಕಿದೆ.

ಈ ಕುರಿತು ಶಿವಸೇನಾ ನಾಯಕ ನಿತಿನ್ ನಂದಗಾಂವ್‌ಕರ್ ಎಂಬುವವರು ಕರಾಚಿ ಬೇಕರಿಗೆ ಬಂದು ಹೆಸರು ಬದಲಿಸುವಂತೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾವು ನಿಮಗೆ ಕಾಲಾವಕಾಶ ಕೊಡುತ್ತೇವೆ, ಅಷ್ಟೊರೊಳಗೆ ನೀವು ಕರಾಚಿ ಬೇಕರಿ ಹೆಸರನ್ನು ಬದಲಿಸಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shiv Sena Allegedly Asking To Change Karachi Name To Marathi

2019ರಲ್ಲಿ ಬೆಂಗಳೂರಿನಲ್ಲಿ ಕರಾಚಿ ಬೇಕರಿ ಮಾಲೀಕರೊಬ್ಬರಿಗೆ 24 ಗಂಟೆಯಲ್ಲಿ ಬೇಕರಿ ಹೆಸರು ಬದಲಾಯಿಸುವಂತೆ ಭೂಗತ ಪಾತಕಿ ಮಿಕ್ಕಿಶೆಟ್ಟಿ ಎಂಬ ಹೆಸರಿನಲ್ಲಿ ಬೆದರಿಕೆ ಕರೆ ಬಂದಿತ್ತು.1953ರಲ್ಲಿ ಖಾನ್‌ಚಂದ್ ರಮ್ನಾನಿ ಎಂಬ ಸಿಂಧಿ ವಲಸಿಗ ಉದ್ಯಮಿ ಹೈದರಾಬಾದ್‌ನಲ್ಲಿ ಕರಾಚಿ ಬೇಕರಿಯನ್ನು ಆರಂಭಿಸಿದರು.

1947 ರ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಹೈದರಾಬಾದ್‌ಗೆ ವಲಸೆ ಬಂದ ಖಾನ್‌ಚಂದ್ ರಮ್ನಾನಿ ಆರಂಭಿಸಿದ ಪ್ರಸಿದ್ಧ ಕರಾಚಿ ಬೇಕರಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ.

ಸದ್ಯ ಕರಾಚಿ ಬೇಕರಿ ಭಾರತದ ಐದು ಪ್ರಮುಖ ನಗರಗಳಾದ ಹೈದರಾಬಾದ್, ಬೆಂಗಳೂರು, ಮುಂಬಯಿ, ದೆಹಲಿ ಹಾಗೂ ಚೆನ್ನೆ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.

ಕರಾಚಿ ಸ್ವೀಟ್ಸ್ ಹೆಸರು ಬದಲಿಸಿ ಮರಾಠಿ ಭಾಷೆಯಲ್ಲಿ ಬೇರೆ ಹೆಸರು ಇಡುವಂತೆ ನಿತಿನ್ ನಂದಗಾಂವ್ಕರ್ ಒತ್ತಾಯಿಸಿದ್ದಾರೆ.

ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪಾಕಿಸ್ತಾನದ ಕರಾಚಿ ನಗರದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿತಿನ್ ನಂದಗಾಂವ್ಕರ್ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

English summary
Mumbai: Video of Shiv Sena leader Nitin Nandgaokar goes viral, where he's allegedly asking Karachi Sweets shop owner in Bandra West to change the name 'Karachi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X