ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ರಕ್ತದೋಕುಳಿಗೆ ಕೇಂದ್ರ ಸರ್ಕಾರವೇ ಕಾರಣ: ಶಿವಸೇನಾ

|
Google Oneindia Kannada News

ಮುಂಬೈ, ಜೂನ್ 16: "ಕಾಶ್ಮೀರದಲ್ಲಿ ಪವಿತ್ರ ರಂಜಾನ್ ಸಮಯದಲ್ಲಿ ನಡೆಯುತ್ತಿರುವ ರಕ್ತದೋಕುಳಿಗೆ ಕೇಮದ್ರ ಸರ್ಕಾರವೇ ಕಾರಣ" ಎಂದು ಶಿವಸೇನೆ ದೂರಿದೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಈ ಅಭಿಪ್ರಾಯ ಹೊರಬಂದಿದೆ. "ರಂಜಾನ್ ನ ಪವಿತ್ರ ಮಾಸವನ್ನು ಪಾಕಿಸ್ತಾನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಮ್ಮ ಕೇಂದ್ರದ ಎನ್ ಡಿಎ ಸರ್ಕಾರ ಮಾತ್ರವೇ ರಂಜಾನ್ ಮಾಸಕ್ಕೆ ಗೌರವ ನೀಡುವಂತೆ ಹಿಂಸೆಯಲ್ಲಿ ಭಾಗಿಯಾಗದೆ ಸುಮ್ಮನಿದೆ. ಆದರೆ ಪಾಕಿಸ್ತಾನ ಮಾತ್ರ ಈ ಯಾವ ನಿಯಮವನ್ನೂ ಪಾಲಿಸುತ್ತಿಲ್ಲ. ಆದ್ದರಿಂದ ಕಾಶ್ಮೀರಿ ಕಣಿವೆಯಲ್ಲಿ ನಡೆಯುತ್ತಿರುವ ರಕ್ತದೋಕುಳಿಗೆ ಕೇಂದ್ರ ಸರ್ಕಾರವೇ ಕಾರಣವಾಗಿದೆ" ಎಮದು ಈ ಸಂಪಾದಕೀಯದಲ್ಲಿ ದೂರಲಾಗಿದೆ.

Shiv Sena accuses Center of bloodbath in Kashmir valley

"ಕಾಶ್ಮೀರ ಕಣಿವೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿರುವುದು ಅನರ್ಥವಾದುದು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವಕ್ಕೆ ಪೆಟ್ಟು ನೀಡಿದೆ" ಎಂದು ಇದರಲ್ಲಿ ಬರೆಯಲಾಗಿದೆ.

ದೇಶದ ವಿಷಯ ಬಂದಾಗ ನಾವು ಕೇಂದ್ರ ಸರ್ಕಾರದ ಪರ: ಓವೈಸಿದೇಶದ ವಿಷಯ ಬಂದಾಗ ನಾವು ಕೇಂದ್ರ ಸರ್ಕಾರದ ಪರ: ಓವೈಸಿ

ಮಾಜಿ ಪ್ರಧಾನಿ ದಿ.ಜವಹರಲಾಲ್ ನೆಹರು ಅವರ ಕಾಲದಲ್ಲಿ ಇದ್ದ ಪರಿಸ್ಥಿತಿಗಿಂತಲೂ ಹೀನಾಯ ಪರಿಸ್ಥಿತಿಯಲ್ಲಿ ಈಗ ಕಾಶ್ಮಿರವಿದೆ ಎಂದು ಅವರು ದೂರಿದ್ದಾರೆ.

ಜೂನ್ 15 ರಂದು ರೈಸಿಂಗ್ ಕಾಶ್ಮೀರ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಗುಂಡಿಕ್ಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಅದೇ ದಿನ ಸೈನಿಕ ಔರಂಗಜೇಬ್ ರನ್ನು ಅಪಹರಿಸಿ ಕೊಲ್ಲಲಾಗಿತ್ತು.

English summary
The Shiv Sena on Saturday raised serious concern on the recent incidents of killing in Jammu and Kashmir and accused the ruling National Democratic Party (NDA) of the bloodbath in the valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X