ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಿರಡಿ ಸಾಯಿಬಾಬಾ ದೇವರಲ್ಲ; ಅವರನ್ನು ನಂಬಬೇಡಿ'

By Srinath
|
Google Oneindia Kannada News

shiradi-sai-baba-not-a-god-dwarka-peeth-swamy-swarupananda
ಮುಂಬೈ, ಜೂನ್ 23: ಅಪಾರ ಸಂಖ್ಯೆಯಲ್ಲಿರುವ ಶಿರಡಿ ಸಾಯಿಬಾಬಾ ಅವರ ಭಕ್ತರಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾದೀತು. ಏನಪ್ಪಾ ಅಂದರೆ ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಅವರು 'ಶಿರಡಿಯ ಸಾಯಿ ಬಾಬಾ ಒಬ್ಬ ಸಾಮಾನ್ಯ ಮನುಷ್ಯ; ಆತ ದೇವರಲ್ಲ. ಅವರನ್ನು ನಂಬಬೇಡಿ' ಎಂದೆಲ್ಲಾ ಪುಕ್ಕಟೆ ಸಲಹೆ ನೀಡಿದ್ದಾರೆ.

'ಶಿರಡಿಯ ಸಾಯಿ ಬಾಬಾ ದೇವರಲ್ಲ. ಆದ್ದರಿಂದ ಅವರಿಗೆ ದೇವಸ್ಥಾನ ನಿರ್ಮಿಸುವ ಅಗತ್ಯ ಇಲ್ಲ' ಎಂದೂ ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಅಪ್ಪಣೆ ಕೊಡಿಸಿದ್ದಾರೆ.

'ವಿದೇಶೀ ಸಂಸ್ಥೆಗಳು ದುಡ್ಡು ಮಾಡುವುದಕ್ಕಾಗಿ ಇಂಥಾ ಪಿತೂರಿ ನಡೆಸುತ್ತವೆ. ಹಿಂದೂಗಳು ಒಗ್ಗಟ್ಟಾಗಿ ಇರುವುದು ಅವರಿಗೆ ಇಷ್ಟವಿಲ್ಲ' ಎಂದು ಸ್ವರೂಪಾನಂದ ಸ್ವಾಮಿ ಹೇಳಿರುವುದಾಗಿ ಟಿವಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
(ಮೈಸೂರಿನಿಂದ ಶಿರಡಿಗೆ ನೇರ ಏಕ್ಸ್ ಪ್ರೆಸ್ ರೈಲು)

'ಸನಾತನ ಧರ್ಮದಲ್ಲಿ ಭಗವಾನ್ ವಿಷ್ಣು 34 ಅವತಾರಗಳನ್ನೆತ್ತಿದ್ದಾನೆ ಎಂಬುದು ನಂಬಿಕೆ. ಕಲಿಯುಗದಲ್ಲಿ ಕಲ್ಕಿ ಮತ್ತು ಬುದ್ಧನ ನಂತರ ಯಾವುದೇ ಅವತಾರ ಇಲ್ಲ. ಹಾಗಿರುವಾಗ ಸಾಯಿಬಾಬಾ ಅವತಾರ ಪುರುಷ ಅಲ್ಲ' ಎಂಬುದು ಶಂಕರಾಚಾರ್ಯ ಸ್ವರೂಪಾನಂದ ಸ್ವಾಮಿಯ ವಾದವಾಗಿದೆ.

'ಸಾಯಿಬಾಬಾ ಅವರನ್ನು ಗುರು ಎಂದು ನಂಬಬಹುದೇ ವಿನಹ. ಆತನನ್ನು ದೇವ ಎಂದು ನಂಬಲು ಸಾಧ್ಯವಿಲ್ಲ. ಆದಾಗ್ಯೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾವು ಏರುವ ಹೊತ್ತಲ್ಲಿ ದೇಶದ ಚಿಂತನೆಯ ದಿಕ್ಕನ್ನು ಬದಲಿಸುವ ಸಲುವಾಗಿ ಸಾಯಿ ಬಾಬಾ ಅವರನ್ನು ದೇವಾಲಯದಲ್ಲಿ ಪೂಜಿಸಲಾಗಿತ್ತು' ಎಂದು ಶಂಕರಾಚಾರ್ಯ ಸ್ವರೂಪಾನಂದ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Dwarakapeeth Shankaracharya Swami Swaroopanand on Monday sparked a controversy when he said that Sai Baba should not be worshipped as he was a human being and not a God, adding his temples should not be built.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X