• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀನಾಬೋರಾ ಹತ್ಯೆ: ಜೈಲಿನಿಂದ ಹೊರಬಂದ ಪೀಟರ್ ಮುಖರ್ಜಿ

|

ಮುಂಬೈ, ಮಾರ್ಚ್ 21: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಮುಖರ್ಜಿ ನಾಲ್ಕುವರ್ಷಗಳ ಸೆರೆಮನೆ ವಾಸದ ಬಳಿಕ ಹೊರನಡೆದಿದ್ದಾರೆ.

ಫೆ. 06ರಂದು ಬಾಂಬೆ ಹೈಕೋರ್ಟಿನಿಂದ ಜಾಮೀನು ಮಂಜೂರಾಗಿತ್ತು. ಪೀಟರ್ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಜಾಮೀನು ಸಿಕ್ಕಿತ್ತು. ಆದರೆ, ಸಿಬಿಐ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ್ದರಿಂದ ಜೈಲಿನಲ್ಲೇ ಉಳಿದಿದ್ದರು. ಯಾವುದೇ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗದ ಕಾರಣ, ಆರ್ಥರ್ ರಸ್ತೆ ಜೈಲಿನಿಂದ ಶುಕ್ರವಾರ ಸಂಜೆ ವೇಳೆಗೆ ಹೊರ ಬಂದಿದ್ದಾರೆ.

2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.

ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!

ಶೀನಾ ಬೋರಾ ತಂದೆ ಪೀಟರ್ ಮುಖರ್ಜಿಯನ್ನು 2015ರಲ್ಲಿ ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಹಾಗೂ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ಜೈಲಿಗೆ ಕಳಿಸಲಾಗಿದೆ. ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಖುದ್ದು ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ವಿಚಾರಣೆ ನಡೆಸಿದ್ದರು.

ಮೇಲ್ಮನವಿ ಸಲ್ಲಿಸದ ಸಿಬಿಐ, ಪೀಟರ್ ಬಚಾವ್

ಮೇಲ್ಮನವಿ ಸಲ್ಲಿಸದ ಸಿಬಿಐ, ಪೀಟರ್ ಬಚಾವ್

ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ಮುಖರ್ಜಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದ್ದು, 2,00,000 ಲಕ್ಷ ರು ಶ್ಯೂರಿಟಿ ನೀಡಬೇಕು, ಕೋರ್ಟ್ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಪೀಟರ್ ಅವರು ತಮ್ಮ ಪುತ್ರಿ ವಿಧಿ(ದತ್ತು ಪುತ್ರಿ), ಪುತ್ರ ರಾಹುಲ್ ಮುಖರ್ಜಿ ಹಾಗೂ ಇನ್ನಿತರ ಸಾಕ್ಷಿಗಳ ಜೊತೆ ಸಂಪರ್ಕ ಸಾಧಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿತ್ತು. ಸದ್ಯ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಪೀಟರ್ ಗೆ ಜಾಮೀನು ಸಿಕ್ಕಿರುವ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿತ್ತು. ಆದರೆ, ಆರು ವಾರಗಳ ಕಾಲಾವಕಾಶ ಮೀರಿದರೂ ಸಿಬಿಐ ಮೇಲ್ಮನವಿ ಸಲ್ಲಿಸದ ಕಾರಣ ಕೋರ್ಟ್ ಆದೇಶದಂತೆ ಪೀಟರ್ ಜೈಲಿನಿಂದ ಹೊರ ಬಂದಿದ್ದಾರೆ

ಶೀನಾಳ ಜೈವಿಕ ಸೋದರ ಮಿಖೈಲ್ ನೀಡಿದ್ದ ಸುಳಿವು

ಶೀನಾಳ ಜೈವಿಕ ಸೋದರ ಮಿಖೈಲ್ ನೀಡಿದ್ದ ಸುಳಿವು

ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್​ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ ಬೊರಾಗೆ ಎಲ್ಲದರ ಬಗ್ಗೆ ಅರಿವಿದೆ. ಆತನ ವಿಚಾರಣೆಯಿಂದ ಕೊಲೆಯ ಕಾರಣ ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ವರದಿ ನೀಡಿದ್ದರು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿತ್ತು.

ಕೊಲೆಯ ಕಾರಣದ ಬಗ್ಗೆ ಹುಡುಕಾಟ

ಕೊಲೆಯ ಕಾರಣದ ಬಗ್ಗೆ ಹುಡುಕಾಟ

ಕೊಲೆಯ ಕಾರಣದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಇದು ಸೇಫ್ ಲಾಕರ್ ನಲ್ಲಿರಿಸಿದ್ದ 150 ಕೋಟಿ ರು ಗಾಗಿ ನಡೆದ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು. ಇಂದ್ರಾಣಿ ಮುಖರ್ಜಿ ಹಾಗೂ ಆಕೆ ಪತಿ ಪೀಟರ್ ಮುಖರ್ಜಿ ಅವರು ಐಎನ್ ಎಕ್ಸ್ ಮೀಡಿಯಾದಲ್ಲಿದ್ದ ತಮ್ಮ ಷೇರುಗಳನ್ನು 2008-2009ರಲ್ಲಿ ಮಾರಾಟ ಮಾಡಿದ್ದರು. ಇದರಿಂದ ಸುಮಾರು 400 ರಿಂದ 500 ಕೋಟಿ ರು ಸಂಗ್ರಹವಾಗಿತ್ತು. ಶೀನಾ ಬ್ಯಾಂಕ್ ಖಾತೆಯ ಸೇಫ್ ಲಾಕರ್ ನಲ್ಲಿ ಸುಮಾರು 150 ಕೋಟಿ ರು ಇರಿಸಲಾಗಿತ್ತು.

ಹಣ ರವಾನೆ ನಿರಾಕರಿಸಿದ್ದೇ ಮುಳುವಾಯಿತು

ಹಣ ರವಾನೆ ನಿರಾಕರಿಸಿದ್ದೇ ಮುಳುವಾಯಿತು

ತನ್ನ ಖಾತೆಯಲ್ಲಿ ಭಾರಿ ಮೊತ್ತದ ಹಣ ಇರುವುದು ಶೀನಾಗೆ ತಡವಾಗಿ ತಿಳಿದು ಬಂದಿದೆ. ಮಗಳ ಬಳಿ ಹಣ ಇದ್ದರೆ ಸೇಫ್ ಎಂದು ತಿಳಿದಿದ್ದ ಇಂದ್ರಾಣಿಗೆ ಶೀನಾ ಆಘಾತ ನೀಡಿದ್ದಾರೆ. ತಮ್ಮ ಬಳಿ ಇದ್ದ ಹಣವನ್ನು ರವಾನಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಇಂದ್ರಾಣಿ ಶೀನಾ ಹತ್ಯೆಗೆ ಮುಂದಾಗಿದ್ದಾರೆ. ಇದಕ್ಕೆ ಅಗತ್ಯ ನೆರವು ಒದಗಿಸುವಂತೆ ಪೀಟರ್ ಮುಖರ್ಜಿ ಕೋರಿದ್ದಾರೆ.

ಇಡೀ ದೇಶದ ಗಮನ ಸೆಳೆದ ಪ್ರಕರಣ

ಇಡೀ ದೇಶದ ಗಮನ ಸೆಳೆದ ಪ್ರಕರಣ

ಇಂದ್ರಾಣಿಗೆ ಆಕೆಯ ಕಾರು ಚಾಲಕ ಶ್ಯಾಮ್ ರಾಯ್,ಮಾಜಿ ಪತಿ ಸಂಜೀವ್ ಖನ್ನಾ ನೆರವಾಗಿದ್ದರು. 2012ರಲ್ಲಿ ಮುಂಬೈನಲ್ಲಿ ಕೊಲೆ ಮಾಡಿ ರಾಯ್ ಗಢದ ಕಾಡೊಂದರಲ್ಲಿ ಶವವನ್ನು ಸುಟ್ಟು ಹಾಕಿದ್ದರು. ಕೋಲ್ಕತ್ತಾ ಮೂಲದ ಸಿದ್ದಾರ್ಥ್ ದಾಸ್ ಅವರ ಪುತ್ರಿ ಶೀನಾ ಹತ್ಯೆ ನಂತರ ಅನೇಕ ಕಥೆಗಳು ಹುಟ್ಟಿಸಲಾಗಿತ್ತು. ಮೂರು ವರ್ಷಗಳ ನಂತರ ಪೊಲೀಸರಿಗೆ ಸ್ಕೈಪ್ ಮೂಲಕ ಬಂದ ಅನಾಮಿಕ ಕರೆಯಿಂದ ಇಂದ್ರಾಣಿ ಹಾಗೂ ಆಕೆಯ ಸಹಚರರ ಬಣ್ಣ ಬಯಲಾಗಿತ್ತು.

English summary
Sheena Bora murder:After spending more than four years behind the bars in the 2012 Sheena Bora murder case, former media baron Peter Mukerjea walked out of Arthur Road Prison in Central Mumbai on Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X