ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜೊತೆ ಅಜಿತ್ ಕೈಜೋಡಿಸುವುದು ಶರದ್ ಪವಾರ್‌ಗೆ ಗೊತ್ತಿತ್ತಾ?

|
Google Oneindia Kannada News

ಮುಂಬೈ, ಡಿಸೆಂಬರ್ 4: ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಆಫರ್ ಕುರಿತು ಬಹಿರಂಗ ಪಡಿಸಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇದೀಗ ಇನ್ನೊಂದು ಸತ್ಯ ಬಿಚ್ಚಿಟ್ಟಿದ್ದಾರೆ.

ಇಷ್ಟು ದಿನ ಅಜಿತ್ ಪವಾರ್ ಬಿಜೆಪಿ ಜೊತೆಗೆ ಕೈಜೋಡಿಸುತ್ತಾರೆ ಎಂದು ನನಗೆ ಗೊತ್ತೇ ಇರಲಿಲ್ಲ ಎಂದು ಹೇಳುತ್ತಿದ್ದ ಪವಾರ್ ಇದೀಗ ಇಲ್ಲ ಫಡ್ನವಿಸ್ ಜೊತೆಗೆ ಅಜಿತ್ ಹೋಗುತ್ತಾರೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ನೀಡಿದ್ದ ಬಿಗ್ ಆಫರ್ ಸತ್ಯ ಬಿಚ್ಚಿಟ್ಟ ಶರದ್ ಪವಾರ್ಪ್ರಧಾನಿ ಮೋದಿ ನೀಡಿದ್ದ ಬಿಗ್ ಆಫರ್ ಸತ್ಯ ಬಿಚ್ಚಿಟ್ಟ ಶರದ್ ಪವಾರ್

ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ತಮ್ಮ ನಡುವೆ ವಾಗ್ವಾದ ನಡೆದಿದೆ.

ಆ ಸಭೆಯಲ್ಲಿ ಭಾಗವಹಿಸಬಾರುದು, ಮಾತುಕತೆಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಅನ್ನಿಸಿತು. ಅಜಿತ್ ಅಸಮಾಧಾನಗೊಂಡಿದ್ದಾನೆ. ಹೇಗೆ ಕಾಂಗ್ರೆಸ್ ಜೊತೆಗೆ ಕೆಲಸ ಮಾಡುವುದು ಎಂದು ಇತರ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾನೆ.

ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದೆ ಎಂದು ತಿಳಿಸಿದರು. ಸುಪ್ರಿಯಾಗೆ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಮೋದಿ ಶರದ್‌ಗೆ ಆಫರ್ ಒಂದನ್ನು ನೀಡಿದ್ದರು.

ದೇವೇಂದ್ರಗೆ ಅಜಿತ್ ಬೆಂಬಲ ನೀಡಿದ ಸುದ್ದಿ ತಿಳಿದ ತಕ್ಷಣ ಉದ್ಧವ್ ಗೆ ಕರೆ ಮಾಡಿ, ಧೈರ್ಯದಿಂದ ಇರುವಂತೆ ಹೇಳಿದೆ. ಎನ್ಸಿಪಿ ಬೆಂಬಲ ಶಿವಸೇನಾಗೆ ನೀಡುವ ಬಗ್ಗೆ ದೃಢಪಡಿಸಿದೆ.

ಅಜಿತ್ ಮಾಡಿದ ಕೃತ್ಯದ ಬಗ್ಗೆ ಕುಟುಂಬದಲ್ಲಿ ಭಾರಿ ಬೇಸರ ವ್ಯಕ್ತವಾಗಿತ್ತು. ಅಜಿತ್ ಮೇಲೂ ಒತ್ತಡ ಇತ್ತು, 8-10 ಶಾಸಕರ ಬೆಂಬಲ ಪಡೆದು ಬಿಜೆಪಿಗೆ ಬೆಂಬಲ ಎಂದು ಹೋಗಿಬಿಟ್ಟಿದ್ದ.

ಆದರೆ ಎನ್ಸಿಪಿಗೆ ಮರಳುವ ಬಗ್ಗೆ ಅನೇಕರಲ್ಲಿ ನಂಬಿಕೆ ಇತ್ತು. ಅದೇ ನಂಬಿಕೆ ಇಂದು ಸರ್ಕಾರ ರಚನೆ ಹಾಗೂ ಅಜಿತ್ ವಾಪಸ್ ಬರಲು ಕಾರಣವಾಗಿದೆ ಎಂದು ಹೇಳಿದರು.

ಏಕಾಏಕಿ ಬಿಜೆಪಿ ಜೊತೆ ಕೈಜೋಡಿಸಿದ್ದ ಅಜಿತ್ ಪವಾರ್

ಏಕಾಏಕಿ ಬಿಜೆಪಿ ಜೊತೆ ಕೈಜೋಡಿಸಿದ್ದ ಅಜಿತ್ ಪವಾರ್

ನವೆಂಬರ್ 23 ರಂದು ಇದ್ದಕ್ಕಿದ್ದಂತೆ ಬಿಜೆಪಿ ಜೊತೆಗೆ ಕೈ ಜೋಡಿಸಿದ ಎನ್ ಸಿಪಿ ಮುಖಂಡ ಅಜಿತ್ ಪವಾರ್ , ಸರ್ಕಾರ ರಚನೆ ಸಂಬಂಧ ದೇವೇಂದ್ರ ಫಡ್ನವೀಸ್ ಜೊತೆಗಿನ ಸಂಪರ್ಕ ಹಾಗೂ ಅವರ ಮಾತುಕತೆಗಳ ಬಗ್ಗೆ ತಮ್ಮಗೆ ಗೊತಿತ್ತು ಎಂದಿದ್ದಾರೆ.

 ಅಜಿತ್ ರಾಜಕೀಯ ನಡೆ ತಪ್ಪು

ಅಜಿತ್ ರಾಜಕೀಯ ನಡೆ ತಪ್ಪು

ಫಡ್ನವೀಸ್ ಹಾಗೂ ಅಜಿತ್ ಪವಾರ್ ನಡುವಿನ ಮಾತುಕತೆ ಬಗ್ಗೆ ತಿಳಿದಿತ್ತು. ಆದರೆ, ಅಜಿತ್ ರಾಜಕೀಯ ನಡೆ ತಪ್ಪಿನಿಂದ ಕೂಡಿದೆ ಎಂಬುದು ನನಗೆ ಮನವರಿಕೆಯಾಗಿತ್ತು ಎಂದು ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಉದ್ಧವ್ ಠಾಕ್ರೆ ಸಂಪುಟ ಸೇರಲಿರುವ ಅಜಿತ್

ಉದ್ಧವ್ ಠಾಕ್ರೆ ಸಂಪುಟ ಸೇರಲಿರುವ ಅಜಿತ್

ಉದ್ಧವ್ ಠಾಕ್ರೆ ಸಂಪುಟಕ್ಕೆ ಅಜಿತ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮುಂಬರುವ ರಾಜ್ಯ ಚಳಿಗಾಲದ ಅಧಿವೇಶನದ ಬಳಿಕ ಈ ಬಗ್ಗೆ ಮಾತುಕತೆ ನಡೆಸಲಾಗುವುದು, ಮಹಾ ಅಘಾಡಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ತಿಳಿಸಿದರು. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧಾರದ ಮೇಲೆ ಸರ್ಕಾರ ರಚನೆಯಾಗಿರುವುದಾಗಿ ಶರದ್ ಪವಾರ್ ಹೇಳಿದರು.

ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮನಸ್ಸಿರಲಿಲ್ಲ

ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮನಸ್ಸಿರಲಿಲ್ಲ

ಹಿಂದುತ್ವ ಪ್ರತಿಪಾದಕರಾದ ಶಿವಸೇನೆ ಜೊತೆಗೆ ಮೈತ್ರಿಗೆ ಮನಸ್ಸಿರಲಿಲ್ಲ.ಚುನಾವಣೆ ನಂತರ ಬಿಜೆಪಿ ಹಾಗೂ ಶಿವಸೇನೆ ನಡುವಿನ ಭಿನ್ನಾಭಿಪ್ರಾಯ ತಿಳಿದಿತ್ತು. ಈ ಬೆಳವಣಿಗೆಯನ್ನು ಗಮನಿಸುತ್ತಿದ್ದೆವು. ಆದರೆ, ಅಜಿತ್ ಆ ರೀತಿ ಮಾಡುತ್ತಾರೆ ಎಂದು ನಿರೀಕ್ಷಿರಲಿಲ್ಲ ಎಂದರು.

English summary
Sharad Pawar was aware that party leader Ajit Pawar was in touch with Devendra Fadnavis even as he distanced himself from his nephew's sudden political move to join hands with the BJP on November 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X