ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರದ್ ಪವಾರ್ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ

|
Google Oneindia Kannada News

ಮುಂಬೈ, ಜನವರಿ 24 : ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿ ನಿವಾಸಕ್ಕೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಕೇಂದ್ರದ ನಡೆ ರಾಜಕೀಯ ಆರೋಪ ಪ್ರತ್ಯಾರೋಗಳಿಗೆ ಕಾರಣವಾಗಿದ್ದು, ಎನ್‌ಪಿಬಿ ಬಿಜೆಪಿ ವಿರುದ್ಧ ರಾಜಕೀಯ ದ್ವೇಷದ ಆರೋಪ ಮಾಡಿದೆ.

ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್ ಈ ಕುರಿತು ಹೇಳಿಕೆ ನೀಡಿದ್ದು, "ಕೇಂದ್ರ ಸರ್ಕಾರದ ನಡೆಯಿಂದ ಎನ್‌ಸಿಪಿ ಆತಂಕಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧದ ನಮ್ಮ ಹೋರಾಟ ನಿಲ್ಲಿಸುವುದಿಲ್ಲ" ಎಂದು ಹೇಳಿದ್ದಾರೆ.

ಪನ್ನಿರ್ ಸೆಲ್ವಂ, ಸ್ಟಾಲಿನ್‌ಗೆ ವಿಐಪಿ ಭದ್ರತೆ ವಾಪಸ್ಪನ್ನಿರ್ ಸೆಲ್ವಂ, ಸ್ಟಾಲಿನ್‌ಗೆ ವಿಐಪಿ ಭದ್ರತೆ ವಾಪಸ್

ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಪವಾರ್‌ಗೆ 'ವೈ' ಶ್ರೇಣಿಯ ಭದ್ರತೆಯನ್ನು ನೀಡಲಾಗಿತ್ತು. 6ನೇ ಜನಪಥ್‌ನಲ್ಲಿನ ನಿವಾಸಕ್ಕೆ ನೀಡಲಾದ ಭದ್ರತೆಯನ್ನು ಜನವರಿ 20ರಿಂದ ಯಾವುದೇ ಸೂಚನೆ ನೀಡದೆ ವಾಪಸ್ ಪಡೆಯಲಾಗಿದೆ.

ಬಿಜೆಪಿ ಜೊತೆ ಅಜಿತ್ ಕೈಜೋಡಿಸುವುದು ಶರದ್ ಪವಾರ್‌ಗೆ ಗೊತ್ತಿತ್ತಾ? ಬಿಜೆಪಿ ಜೊತೆ ಅಜಿತ್ ಕೈಜೋಡಿಸುವುದು ಶರದ್ ಪವಾರ್‌ಗೆ ಗೊತ್ತಿತ್ತಾ?

Sharad Pawar Security Cover Withdrawn NCP Upset With BJP

ಕೇಂದ್ರ ಸರ್ಕಾರದ ನಡೆ ರಾಜಕೀಯ ದ್ವೇಷದಿಂದ ಕೂಡಿದೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿ, ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಎನ್‌ಸಿಪಿ ಕಿಡಿಕಾರಿದೆ.

ಕ್ರಿಕೆಟ್ ಶೈಲಿಯಲ್ಲೇ ನಿತಿನ್ ಗಡ್ಕರಿ ಕಾಲೆಳೆದ ಎನ್‌ಸಿಪಿಕ್ರಿಕೆಟ್ ಶೈಲಿಯಲ್ಲೇ ನಿತಿನ್ ಗಡ್ಕರಿ ಕಾಲೆಳೆದ ಎನ್‌ಸಿಪಿ

79 ವರ್ಷದ ಶರದ್ ಪವಾರ್‌ಗೆ ಮಹಾರಾಷ್ಟ್ರದಲ್ಲಿ 'ಝೆಡ್ ಪ್ಲಸ್' ಭದ್ರತೆ ಇದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಆದ್ದರಿಂದ, ಹೆಚ್ಚಿ ಭದ್ರತೆ ಇದೆ. ದೆಹಲಿಯ ಅವರ ನಿವಾಸಕ್ಕೆ 'ವೈ' ಶ್ರೇಣಿ ಭದ್ರತೆ ಇದೆ.

English summary
NCP accused the central government for withdrawing it's chief Sharad Pawar security at his official residence in New Delhi. Rajya Sabha MP and former Union minister had 'Y' category security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X