ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರದ್ ಪವಾರ್ ಶಾಕಿಂಗ್ ಹೇಳಿಕೆಗೆ ಕಾಂಗ್ರೆಸ್ ಕನಸು ನುಚ್ಚುನೂರು?!

|
Google Oneindia Kannada News

Recommended Video

ಒಡೆದು ಹೋಗಲಿದ್ಯಾ ಮಹಾಘಟಬಂಧನ..? | Oneindia Kannada

ಮುಂಬೈ, ಏಪ್ರಿಲ್ 27: ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ನೀಡಿದ ಅಚ್ಚರಿಯ ಹೇಳಿಕೆಗೆ ಕಾಂಗ್ರೆಸ್ ನ ಮಹಾಘಟಬಂಧನದ ಕನಸು ನುಚ್ಚುನೂರಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.

ದೇಶದಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ, ಶರದ್ ಪವಾರ್ ಅವರು, "ರಾಹುಲ್ ಗಾಂಧಿ ಅವರಿಗಿಂತ ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು ಉತ್ತಮ ಪ್ರಧಾನಿಯಾಗಬಲ್ಲರು" ಎಂಬ ಹೇಳಿಕೆ ನೀಡಿದ್ದಾರೆ.

ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ

Sharad Pawars shocking statement hurts Congress

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ 78 ವರ್ಷ ವಯಸ್ಸಿನ ಪವಾರ್, "ಎನ್ ಡಿಎಯೇತರ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಯೋಚಿಸುವುದಕ್ಕೆ ಹೋದರೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರಿಗಿಂತ ಉತ್ತಮ ಅಭ್ಯರ್ಥಿಗಳು ಎಂಬುದು ನನ್ನ ಭಾವನೆ" ಎಂದರು.

'ಪವಾರ್, ಮಾಯಾವತಿ ಸ್ಪರ್ಧಿಸದಿರುವುದು ಎನ್ ಡಿಎ ಗೆಲುವಿನ ಸೂಚನೆ''ಪವಾರ್, ಮಾಯಾವತಿ ಸ್ಪರ್ಧಿಸದಿರುವುದು ಎನ್ ಡಿಎ ಗೆಲುವಿನ ಸೂಚನೆ'

ಎನ್ ಡಿಎಯೇತರ ಮೈತ್ರಿಕೂಟ, ಅಥವಾ ಮಹಾಘಟಬಂಧನ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಮಹಾಘಟಬಂಧನ ಅಸ್ತಿತ್ವದಲ್ಲಿದೆ. ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ಮಾತು ಆಧಾರ ರಹಿತವಾದುದು. ಪ್ರಧಾನಿ ಯಾರು ಎಂಬುದನ್ನು ಫಲಿತಾಂಶದ ನಂತರ ನಿರ್ಧರಿಸಬೇಕು. ಈಗಲೇ ಹೆಸರು ಸೂಚಿಸುವುದು ಸೂಕ್ತವಲ್ಲ. ಏಕೆಂದರೆ ಆ ಹುದ್ದೆಗೆ ಸಮರ್ಥರು ಬಹಳ ಜನರಿದ್ದಾರೆ" ಎಂದು ಅವರು ಹೇಳಿದರು.

English summary
Nationalist Congress Party chief Sharad Pawar gives a shock to Congress party after telling Mamata Banerjee, Mayawati or Chandrababu Naidu better PM options than Rahul Gandhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X