ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥರ್ ರಸ್ತೆ ಜೈಲಿನಲ್ಲಿ ಕಿಂಗ್ ಖಾನ್- ಆರ್ಯನ್ ಖಾನ್ ಮೊದಲ ಭೇಟಿ!

|
Google Oneindia Kannada News

ಮುಂಬೈ ಅಕ್ಟೋಬರ್ 21: ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್‌ಗೆ ಅ.20ರಂದು ಜಾಮೀನು ಸಿಗದೆ ಮತ್ತೆ ಜೈಲುಪಾಲಾಗಿದ್ದಾರೆ. ಅಕ್ಟೋಬರ್ 8 ರಿಂದ ಜೈಲಿನಲ್ಲಿರುವ ತನ್ನ ಮಗ ಆರ್ಯನ್ ಖಾನ್ ಕಾಣಲು ಶಾರುಖ್ ಖಾನ್ ಇಂದು ಮುಂಬೈನ ಆರ್ಥರ್ ರಸ್ತೆ ಜೈಲಿಗೆ ಭೇಟಿ ನೀಡಿದರು.

ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿದ ಬಳಿಕ ಬಂಧನಕ್ಕೊಳಗಾದ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಮೊದಲ ಭೇಟಿ ಇದಾಗಿದೆ.

ಶಾರುಖ್ ಖಾನ್ (55) ಜೈಲಿನ ಮೀಟಿಂಗ್ ಹಾಲ್‌ನಲ್ಲಿ ಕ್ಯೂಬಿಕಲ್‌ನಲ್ಲಿ ಇಂಟರ್‌ಕಾಮ್ ಮೂಲಕ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು. ಆರ್ಯನ್ ಕಳೆದ ಶುಕ್ರವಾರ ತಮ್ಮ ಹೆತ್ತವರಾದ ಎಸ್‌ಆರ್‌ಕೆ ಮತ್ತು ಗೌರಿ ಖಾನ್‌ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು.

ಶಾರುಖ್ ಖಾನ್ ಮನೆ ಮೇಲೆ ಎನ್‌ಸಿಬಿ ದಾಳಿ

ಶಾರುಖ್ ಖಾನ್ ಮನೆ ಮೇಲೆ ಎನ್‌ಸಿಬಿ ದಾಳಿ

ಪುತ್ರನ ಚಿಂತೆಯಲ್ಲಿಇರುವ ಶಾರುಖ್ ದಂಪತಿಗಳಿಗೆ ಎನ್‌ಸಿಬಿ ಮತ್ತೊಂದು ಶಾಕ್ ಕೊಟ್ಟಿದೆ. ಆರ್ಯನ್ ಖಾನ್ ಮಾದಕ ದ್ರವ್ಯ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ನ ತನಿಖಾ ಅಧಿಕಾರಿಗಳ ತಂಡ ಮುಂಬೈನಲ್ಲಿ ಬಾಲಿವುಡ್​ ನಟ, ನಟಿಯರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಬಾಲಿವುಡ್​ ನಟ ಶಾರುಖ್​ ಖಾನ್​ ಮನೆ ಮನ್ನತ್ ಮೇಲೆ ದಾಳಿ ಮಾಡಲಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್​ ಖಾನ್ ನಿವಾಸ 'ಮನ್ನತ್'ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಆರ್ಯನ್ ಜಾಮೀನು ಅರ್ಜಿ ವಜಾ

ಆರ್ಯನ್ ಜಾಮೀನು ಅರ್ಜಿ ವಜಾ

ಆರ್ಯನ್ ಖಾನ್ ಗೆ ಈಗಾಗಲೇ ಎರಡು ಬಾರಿ ಜಾಮೀನು ನಿರಾಕರಿಸಲಾಗಿದೆ. ಬಾಂಬೆ ಹೈಕೋರ್ಟ್ ಮಂಗಳವಾರ ಆತನ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ನಿನ್ನೆ ತಿರಸ್ಕರಿಸಿದೆ. ಮಾತ್ರವಲ್ಲದೆ ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ.

ಆರ್ಯನ್ ಗೆ ಮುಳುವಾದ ವಾಟ್ಸಾಪ್ ಚಾಟ್

ಆರ್ಯನ್ ಗೆ ಮುಳುವಾದ ವಾಟ್ಸಾಪ್ ಚಾಟ್

ಕ್ರೂಸ್ ಹಡಗಿಲ್ಲಿ ಆರ್ಯನ್ ಬಳಿ ಮಾದಕವಸ್ತುಗಳು ಸಿಗದೇ ಹೋದರೂ ಆತನ ವಾಟ್ಸಾಪ್ ಚಾಟ್ ಗಳೇ ಆತನಿಗೆ ಮುಳುವಾಗಿವೆ. ಹೀಗಾಗಿ ವಾಟ್ಸಾಪ್ ಚಾಟ್‌ಗಳು ಆತನ ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ತೋರಿಸುತ್ತಿರುವುದರಿಂದ ನಿನ್ನೆ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ನಿರಾಕರಿಸಿದೆ.

"ವಾಟ್ಸಾಪ್ ಚಾಟ್ಸ್ ಪ್ರೈಮ ಫೇಸಿ ಆರೋಪಿತ ಆರ್ಯನ್ ಖಾನ್ ನಿಯಮಿತವಾಗಿ ಕಾನೂನುಬಾಹಿರ ಮಾದಕವಸ್ತು ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ ಜಾಮೀನಿನ ಮೇಲೆ ಖಾನ್ ಇದೇ ರೀತಿಯ ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುವುದಿಲ್ಲ" ಎಂದು ನ್ಯಾಯಾಧೀಶ ವಿ.ವಿ.ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ದಾಖಲೆಯಲ್ಲಿ ಇರಿಸಲಾಗಿರುವ ವಸ್ತು ಆರ್ಯನ್ ಖಾನ್ ಮತ್ತು ಪೂರೈಕೆದಾರರು ಮತ್ತು ಪೆಡ್ಲರ್‌ಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆರ್ಯನ್ ಖಾನ್ ಬಳಿ ಯಾವುದೇ ಔಷಧಗಳು ಕಂಡುಬಂದಿಲ್ಲವಾದರೂ, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಶೂನಲ್ಲಿ ಅಡಗಿರುವ ಆರು ಗ್ರಾಂ ಚರಸ್ ಬಗ್ಗೆ ಆರ್ಯನ್ ಗೆ ತಿಳಿದಿತ್ತು. ಆದರೂ ಇದನ್ನು ಆರ್ಯನ್ ಬಹಿರಂಗಪಡಿಸಿಲ್ಲ. ಜೊತೆಗೆ ಆತ ಅದನ್ನು ನಿರಾಕರಿಸಿಲ್ಲ. ಇದು ಪ್ರಜ್ಞಾಪೂರ್ವಕ ಸ್ವಾಧೀನಕ್ಕೆ ಸಮಾನವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸ್ನೇಹಿತರಿಗೆ ಸಹಾಯ

ಸ್ನೇಹಿತರಿಗೆ ಸಹಾಯ

ಆರೋಪಿ 1 ಮತ್ತು 2 ಬಹಳ ಹಿಂದಿನಿಂದಲೂ ಆರ್ಯನ್‌ಗೆ ಸ್ನೇಹಿತರು. ಅವರು ಒಟ್ಟಿಗೆ ಪ್ರಯಾಣಿಸಿದ್ದಾರೆ. ನಂತರ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಅವರನ್ನು ಒಟ್ಟಿಗೆ ಬಂಧಿಸಲಾಯಿತು. ಇದಲ್ಲದೆ ತಮ್ಮ ಸ್ವಯಂಪ್ರೇರಿತ ಹೇಳಿಕೆಗಳಲ್ಲಿ ಇಬ್ಬರೂ ಆರೋಪಿಗಳು ತಮ್ಮ ಆನಂದಕ್ಕಾಗಿ ಮಾದಕ ವಸ್ತುವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಈ ಎಲ್ಲಾ ಸಂಗತಿಗಳಲ್ಲಿ ಆರ್ಯನ್ ಖಾನ್ ಸ್ನೇಹಿತರ ಶೂಗಳಲ್ಲಿ ಮಾದಕ ವಸ್ತು ಮುಚ್ಚಿಟ್ಟಿರುವ ಕಳ್ಳತನದ ಜ್ಞಾನವನ್ನು ಹೊಂದಿರುವುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬಾಲಿವುಡ್ ಸ್ಟಾರ್ಸ್ ಬೆಂಬಲ

ಬಾಲಿವುಡ್ ಸ್ಟಾರ್ಸ್ ಬೆಂಬಲ

ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಮತ್ತು ನಿರ್ದೇಶಕ ಫರಾ ಖಾನ್ ಅವರಂತಹ ತಾರೆಯರು ಎಸ್‌ಆರ್‌ಕೆ ಮತ್ತು ಅವರ ಪುತ್ರನ ಬೆಂಬಲಕ್ಕೆ ಬಂದಿದ್ದರೆ, ಚಿತ್ರೋದ್ಯಮವು ಪ್ರಕರಣದ ಪ್ರತಿಕ್ರಿಯೆಯಲ್ಲಿ ಮೌನ ತಾಳಿದೆ. ಶಾರುಖ್ ಖಾನ್ ನ ಹಲವಾರು ಅಭಿಮಾನಿಗಳು ಶಾರುಖ್ ಪುತ್ರನಿಗೆ ಬೆಂಬಲ ನೀಡಿದ್ದಾರೆ. ಪುತ್ರನ ಚಿಂತೆಯಲ್ಲಿರುವ ಶಾರುಖ್‌ಗೆ ಧೈರ್ಯ ತುಂಬಿದ್ದಾರೆ.

ಎನ್‌ಸಿಬಿ ಕಳೆದ ವರ್ಷ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ಒಂದು ಭಾಗವಾಗಿ ಹೊರಹೊಮ್ಮಿದ "ಬಾಲಿವುಡ್-ಡ್ರಗ್ಸ್" ನಂಟು ಈವರೆಗೆ ಹಲವಾರು ಸೆಲೆಬ್ರಿಟಿಗಳನ್ನು ಬಂಧಿಸಿ ಪ್ರಶ್ನಿಸಿದೆ.

English summary
Shah Rukh Khan today visited Mumbai's Arthur Road Jail to meet with his son Aryan Khan, who was denied bail yesterday and has been in jail since October 8 in the drugs-on-cruise case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X