ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸರಣಿ ಸ್ಫೋಟ ಅಪರಾಧಿ ಜಾಲಿಸ್ ಅನ್ಸಾರಿ ನಾಪತ್ತೆ

|
Google Oneindia Kannada News

ಮುಂಬೈ, ಜನವರಿ 17: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಡಾ. ಬಾಂಬ್ ಎಂದು ಕುಖ್ಯಾತಿಯಾಗಿದ್ದ ಜಾಲಿಸ್ ಅನ್ಸಾರಿ ನಾಪತ್ತೆಯಾಗಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಪೆರೋಲ್ ಮೇಲೆ ಜೈಲಿನಿಂದ ಆತ ಹೊರಬಂದಿದ್ದ, ಅನ್ಸಾರಿ (68) ನಾಪತ್ತೆಯಾದ ಬಗ್ಗೆ ಆತನ ಕುಟುಂಬದವರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನ್ಸಾರಿ ನಮಾಜ್​ ಮಾಡಿ ಬರುತ್ತೇನೆ ಎಂದು ಹೇಳಿ ಗುರುವಾರ ಬೆಳಗ್ಗೆ ಹೋದವರು ವಾಪಸ್​ ಮನೆಗೆ ಬಂದಿಲ್ಲ ಎಂದು ಆತನ 35 ವರ್ಷದ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉಗ್ರರ ತನಿಖೆ ವೇಳೆ ಬಯಲಾಯ್ತು 'ಬೆಂಗಳೂರು ಸ್ಫೋಟ' ಕುರಿತ ಮಾಹಿತಿಉಗ್ರರ ತನಿಖೆ ವೇಳೆ ಬಯಲಾಯ್ತು 'ಬೆಂಗಳೂರು ಸ್ಫೋಟ' ಕುರಿತ ಮಾಹಿತಿ

ರಾಜಸ್ಥಾನದ ಅಜ್ಮೇರ್​ ಸೆಂಟ್ರಲ್​ ಜೈಲಿನಲ್ಲಿದ್ದ ಅನ್ಸಾರಿ 21ದಿನಗಳ ಪೆರೋಲ್​ ಪಡೆದು ಹೊರಬಂದಿದ್ದರು. ಗುರುವಾರ ಬೆಳಗ್ಗೆ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 1993ರ ಮಾರ್ಚ್​ 12ರಂದು ಮುಂಬೈನಲ್ಲಿ ನಡೆದ ಭೀಕರ ಸರಣಿ ಸ್ಫೋಟದ ಮುಖ್ಯ ರೂವಾರಿ ಈ ಜಾಲಿಸ್​ ಅನ್ಸಾರಿ. ಬಾಂಬ್​ ಬ್ಲಾಸ್ಟ್​ನಲ್ಲಿ 250 ಮಂದಿ ಮೃತಪಟ್ಟಿದ್ದರು.

Serial Blasts Convict Dr Bomb Goes Missing

713 ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ 2008ರಲ್ಲಿ ನಡೆದ ಜೈಪುರ ಬಾಂಬ್​ ಬ್ಲಾಸ್ಟ್​ನಲ್ಲೂ ಅನ್ಸಾರಿಯದೇ ಕೈವಾಡವಿದ್ದು ಅಪರಾಧಿ ಎಂದು ಸಾಬೀತಾಗಿದ್ದ. ಒಟ್ಟಾರೆ 60ಕ್ಕೂ ಹೆಚ್ಚು ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಈತ ಡಾ. ಬಾಂಬ್​ ಎಂದೇ ಕುಖ್ಯಾತಿ ಗಳಿಸಿದ್ದ.

ಪೊಲೀಸರು ತಪ್ಪಿಸಿಕೊಂಡ ಅಪರಾಧಿಗಾಗಿ ಹುಡುಕುತ್ತಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್​ಗಳಲ್ಲಿನ ಸಿಸಿಟಿವಿ ಕ್ಯಾಮರಾಗಳ ಫೂಟೇಜ್​ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಹಲವು ತಂಡಗಳು ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಅನ್ಸಾರಿಗಾಗಿ ಹುಡುಕಾಟ ನಡೆಸಿದೆ.

English summary
The Mumbai Police and Maharashtra ATS have launched a manhunt to trace one of the most wanted terrorists in the country. Dr Jalees Ansari, also known as Dr Bomb
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X