ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋದ ಶಿವಸೇನಾ

|
Google Oneindia Kannada News

ನವದೆಹಲಿ, ನವೆಂಬರ್ 12: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ, ಶಿವಸೇನಾಕ್ಕೆ ಕಡಿಮೆ ಅವಧಿ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟಿಗೆ ಮೊರೆ ಹೋಗಲಾಗಿದೆ.

ಸರ್ಕಾರ ರಚನೆಗೆ ಅಗತ್ಯ ಬೆಂಬಲವಿದೆ ಎಂದು 24 ಗಂಟೆಗಳಲ್ಲಿ ತೋರಿಸುವಂತೆ ಶಿವಸೇನಾಕ್ಕೆ ಸೂಚಿಸಲಾಗಿತ್ತು. ಆದರೆ ಬಿಜೆಪಿಗೆ 48 ಗಂಟೆಗಳನ್ನು ನೀಡಲಾಗಿದೆ, ಈ ರೀತಿಯ ತಾರತಮ್ಯ ನೀತಿಗೆ ಅಕ್ಷೇಪಿಸಿದರೂ ಫಲ ಸಿಗಲಿಲ್ಲ ಎಂದು ಶಿವಸೇನಾ ಆರೋಪಿಸಿದೆ.

Breaking ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೋವಿಂದ್ ಅಂಕಿತBreaking ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೋವಿಂದ್ ಅಂಕಿತ

ಶಿವಸೇನಾ ಪರವಾಗಿ ವಕೀಲ ಸುನಿಲ್ ಫರ್ನಾಂಡೀಸ್, ಹಿರಿಯ ವಕೀಲ ದೇವದತ್ ಕಾಮತ್ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಹಾಕಲಾಗಿದೆ. ಶಿವಸೇನಾ ಪರ ವಾದಿಸಲು ಹಿರಿಯ ಅಡ್ವೋಕೇಟ್ ಕಪಿಲ್ ಸಿಬಾಲ್ ರನ್ನು ಆಯ್ಕೆ ಮಾಡಲಾಗಿದೆ.

Sena moves SC over Governors refusal to extend time given to form govt

ಎನ್ಸಿಪಿ ಹಾಗೂ ಕಾಂಗ್ರೆಸ್ ಬೆಂಬಲವಿರುವ ಪತ್ರವನ್ನು ತಲುಪಿಸಲು ಸೂಕ್ತ ಕಾಲಾವಕಾಶವನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ನೀಡಲಿಲ್ಲ. ಹೆಚ್ಚುವರಿ 3 ದಿನಗಳ ಕಾಲಾವಕಾಶಕ್ಕೂ ಆಸ್ಪದ ನೀಡದೆ ರಾಜ್ಯಪಾಲರು ಅನ್ಯಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದೆ.

ವಿರೋಧಿಗಳ ನಡುವೆ ಮೈತ್ರಿ: ಶಿವಸೇನಾ-ಕಾಂಗ್ರೆಸ್ 'ಹಸ್ತಲಾಘವ' ಸಾಧ್ಯವೇ?ವಿರೋಧಿಗಳ ನಡುವೆ ಮೈತ್ರಿ: ಶಿವಸೇನಾ-ಕಾಂಗ್ರೆಸ್ 'ಹಸ್ತಲಾಘವ' ಸಾಧ್ಯವೇ?

ಈ ನಡುವೆಗೆ ಎನ್ಸಿಪಿಗೆ ಮಂಗಳವಾರ ಸಂಜೆ 8:30ರೊಳಗೆ ಅಗತ್ಯ ಬೆಂಬಲದೊಂದಿಗೆ ಸರ್ಕಾರ ರಚನೆ ಹಕ್ಕು ಪ್ರತಿಪಾದಿಸಲು ರಾಜ್ಯಪಾಲರು ಸಮಯ ನಿಗದಿ ಮಾಡಿದ್ದರು. ಆದರೆ ಇದಕ್ಕೂ ಮುನ್ನವೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಕಳಿಸಿದ್ದಾರೆ. ರಾಷ್ಟ್ರಪತಿಗಳು ಸಂಜೆ 5:30ರ ಸುಮಾರಿಗೆ ಪತ್ರಕ್ಕೆ ಅಂಕಿತ ಹಾಕಿದ್ದಾರೆ.

English summary
The Shiv Sena on Tuesday approached the Supreme Court over less time being given to them by the Maharashtra Governor to form the government as compared to the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X