ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರೇ ಎಚ್ಚರ... ಪ್ಯಾಕೇಜ್ಡ್ ನೀರು ಆರೋಗ್ಯಕರವಲ್ಲ

By Kiran B Hegde
|
Google Oneindia Kannada News

ಮುಂಬೈ, ಜ. 12: ಗ್ರಾಹಕರೇ ಎಚ್ಚರ, ಶುದ್ಧ ನೀರು ಎಂದು ಹೇಳಿಕೊಂಡು ಹತ್ತಾರು ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಿನರಲ್ ವಾಟರ್ ಶುದ್ಧವಾಗಿಲ್ಲ. ಅವುಗಳಲ್ಲಿರುವ ರಾಸಾಯನಿಕ ಪದಾರ್ಥಗಳು ದೇಹದ ಮೇಲೆ ನಿಧಾನವಾಗಿ ದುಷ್ಪರಿಣಾಮ ಬೀರುತ್ತವೆ...!

ಹೀಗೆಂದು ಮುಂಬೈಯ ಖ್ಯಾತ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ (BARC)ನ ಪರಿಸರ ಪರಿವೀಕ್ಷಣೆ ಮತ್ತು ಮೌಲ್ಯಮಾಪನ ವಿಭಾಗವು ಎಚ್ಚರಿಕೆ ನೀಡಿದೆ. ಹಲವು ಕಂಪನಿಗಳ ಮಿನರಲ್ ವಾಟರ್‌ಗಳನ್ನು ಮಾರುಕಟ್ಟೆಯಿಂದ ತಂದು ಪರೀಕ್ಷಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. [ಕುಡಿಯುವ ನೀರು, ಔಷಧ ಮಳಿಗೆ]

ಬ್ಯಾಕ್ಟೀರಿಯಾ ಹೋಯ್ತು, ರಾಸಾಯನಿಕ ಬಂತು : ಜೈವಿಕ ಬ್ಯಾಕ್ಟೀರಿಯಾಗಳು ತುಂಬಿದ ಅಶುದ್ಧ ನೀರನ್ನು ಶುದ್ಧೀಕರಿಸುವಾಗ ಹಲವು ರಾಸಾಯನಿಕಗಳನ್ನು ಹಾಕಲಾಗುತ್ತದೆ. ಆದರೆ, ಶುದ್ಧೀಕರಣ ಪ್ರಕ್ರಿಯೆ ಮುಗಿದ ಮೇಲೆ ಬ್ಯಾಕ್ಟೀರಿಯಾ ನಾಶವಾಗಿದ್ದರೂ ರಾಸಾಯನಿಕ ಪದಾರ್ಥಗಳು ಹಾಗೆಯೇ ಉಳಿದಿರುತ್ತವೆ. [ಕುಡಿಯುವ ನೀರಿಗಾಗಿ ಬಿಜೆಪಿ ಪಾದಯಾತ್ರೆ]

water

ಹೆಚ್ಚಾಗಿ ಕ್ಲೋರೈಟಿ, ಬ್ರೋಮೇಟ್ ಮತ್ತು ಕ್ಲೋರೇಟ್ ರಾಸಾಯನಿಕಗಳು ಪರಿಶುದ್ಧ ಎಂಬ ಹಣೆಪಟ್ಟಿ ಹಚ್ಚಿಕೊಂಡ ಮಿನರಲ್ ವಾಟರ್‌ನಲ್ಲಿ ಕಂಡುಬಂದಿವೆ. ಇಂತಹ ರಾಸಾಯನಿಕಗಳು ಶುದ್ಧೀಕರಿಸದ ನೀರಿನಲ್ಲಿಯೂ ಕಂಡುಬರುವುದಿಲ್ಲ ಎಂದು ಸಂಶೋಧನೆ ತಂಡದ ನೇತೃತ್ವ ವಹಿಸಿರುವ ಡಾ. ಜಿ.ಜಿ. ಪಂಡಿತ್ ತಿಳಿಸಿದ್ದಾರೆ. [ಏರಿದೆ ನೀರಿನ ಬೆಲೆ, ಇಲ್ಲಿದೆ ವಿವರ]

ಆದರೆ, ಇದುವರೆಗೂ ಪ್ಯಾಕೇಜ್ಡ್ ನೀರಲ್ಲಿ ಇರಬಹುದಾದ ರಾಸಾಯನಿಕಗಳ ಪ್ರಮಾಣ ಕುರಿತು ಯಾವುದೇ ನಿಯಮ ರೂಪಿಸಲಾಗಿಲ್ಲ. ಆದ್ದರಿಂದ ಪ್ಯಾಕೇಜ್ಡ್ ನೀರನ್ನು ಪೂರೈಸುವ ಕಂಪನಿಗಳೂ ತಲೆಕೆಡಿಸಿಕೊಂಡಿಲ್ಲ.

ನಿಧಾನ ದುಷ್ಪರಿಣಾಮ : ಪ್ಯಾಕೇಜ್ಡ್ ನೀರಿನಲ್ಲಿ ಕಂಡುಬಂದಿರುವ ರಾಸಾಯನಿಕಗಳು ಆರೋಗ್ಯದ ಮೇಲೆ ನಿಧಾನವಾಗಿ ದುಷ್ಪರಿಣಾಮ ಬೀರುತ್ತವೆ. ಧೀರ್ಘ ಕಾಲ ಇಂತಹ ನೀರನ್ನು ಉಪಯೋಗಿಸಿದ ಮೇಲೆ ದೇಹದ ಮೇಲಿನ ದುಷ್ಪರಿಣಾಮ ತಿಳಿಯುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. [ವಿಧಾನಸೌಧದಲ್ಲಿ 2 ರು.ಗೆ 20 ಲೀ. ನೀರು]

ಆದ್ದರಿಂದ ಮಿನರಲ್ ವಾಟರ್‌ ಖರೀದಿಸಿ ಕುಡಿಯುವುದಕ್ಕಿಂತ ಮನೆಯಿಂದ ಕಾಯಿಸಿ ಆರಿಸಿದ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಒಯ್ಯುವುದೇ ಹೆಚ್ಚು ಸುರಕ್ಷಿತ ಎಂದು ವಿಜ್ಞಾನಿಗಳು ಹೇಳಿದ್ದಾರೆ.

English summary
A study by scientists from the Environmental Monitoring and Assessment Section of Bhabha Atomic Research Center (BARC) tells there are plenty of chemicals in the bottled water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X