ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಶಾಲೆಗಳ ಪ್ರಾರಂಭ ಕುರಿತು ಉದ್ಧವ್ ಠಾಕ್ರೆ ನಿರ್ಧಾರ

|
Google Oneindia Kannada News

ಮುಂಬೈ, ಜೂನ್ 1: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಅಟ್ಟಹಾಸ ಜೋರಾಗಿಯೇ ಇದೆ. ಇದರ ನಡುವೆ ಬೇರೆ ರಾಜ್ಯಗಳಂತೆ ನಿರ್ಧಾರ ತೆಗೆದುಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಮುಂದಾಗಿದ್ದಾರೆ. ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾಸೋಂಕು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಜೂನ್ ತಿಂಗಳಿನಿಂದಲೇ ಶಾಲೆಗಳು ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ.

ಆನ್‌ಲೈನ್ ತರಗತಿಗಳಿಗೂ ಒಪ್ಪಿಗೆ ಸೂಚಿಸಿದ್ದಾರೆ. ಗೂಗಲ್ ಕ್ಲಾಸ್‌ ರೂಮ್ ಕ್ಲಾಸ್‌ ರೂಮ್ ಸೇರಿದಂತೆ ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳನ್ನು ಆರಂಭಿಸಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ. ಜೂನ್ ಮೊದಲ ವಾರದಲ್ಲೇ ಶಾಲೆಗಳು ಆರಂಭವಾಗಲಿವೆ. ಜೂನ್ 15ರಿಂದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತದೆ. ರೇಡಿಯೋ, ಟಿವಿ, ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

ಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಮಹಾರಾಷ್ಟ್ರ ಸರ್ಕಾರ ಅನುಮತಿಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಮಹಾರಾಷ್ಟ್ರ ಸರ್ಕಾರ ಅನುಮತಿ

ಆನ್‌ಲೈನ್ ತರಗತಿ ನಡೆಸಲು ಗೂಗಲ್ ಕೂಡ ಒಪ್ಪಿಕೊಂಡಿದೆ. ಹಂತ ಹಂತವಾಗಿ ಮಹಾರಾಷ್ಟ್ರದಲ್ಲಿ ಶಾಲೆಗಳು ತೆರೆಯಲಿವೆ. ಹಬ್ಬ ಹರಿದಿನಗಳ ರಜೆಯನ್ನು ಕಡಿತಗೊಳಿಸಲಾಗುತ್ತದೆ. ಮೇವರೆಗೆ ಪ್ರಸಕ್ತ ವರ್ಷವನ್ನು ವಿಸ್ತರಿಸಲಾಗುತ್ತದೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಶಾಲೆಗಳು ಜೂನ್‌ನಿಂದ ಪ್ರಾರಂಭ

ಶಾಲೆಗಳು ಜೂನ್‌ನಿಂದ ಪ್ರಾರಂಭ

ಈ ಪ್ರಸಕ್ತ ವರ್ಷ ಜೂನ್ ನಿಂದ ಆರಂಭವಾಗಲಿದೆ. ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶಾಲಾ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗುತ್ತದೆ. ಆನ್‌ಲೈನ್ ಶಿಕ್ಷಣಕ್ಕೂ ಮಹತ್ವ ನೀಡಲಾಗುತ್ತದೆ ಎಂದು ಠಾಕ್ರೆ ತಿಳಿಸಿದ್ದಾರೆ.

ಗೂಗಲ್ ಕ್ಲಾಸ್‌ರೂಮ್ ಬಳಕೆ ಮಾಡಿ

ಗೂಗಲ್ ಕ್ಲಾಸ್‌ರೂಮ್ ಬಳಕೆ ಮಾಡಿ

ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡದೆ ಬೇರೆ ದಾರಿ ಇಲ್ಲ. ಗೂಗಲ್ ಕ್ಲಾಸ್‌ರೂಮ್ ಹೆಚ್ಚು ಬಳಕೆ ಮಾಡಿ. ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಶೀಘ್ರವೇ ಅಭಿವೃದ್ಧಿಪಡಿಸಲಾಗುವುದು. ಯಾವ ಯಾವ ರೀತಿಯಿಂದ ಶಿಕ್ಷಣವನ್ನು ನೀಡಲು ಸಾಧ್ಯವೋ ಆ ಎಲ್ಲಾ ವಿಧಗಳನ್ನು ಪರಿಶೀಲಿಸಲಾಗುತ್ತದೆ. ಕೊರೊನಾವೈರಸ್ ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮೊದಲು ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಅನ್ ಲಾಕ್: ಬಟ್ಟೆ ಅಂಗಡಿಗಳ ಟ್ರಯಲ್ ರೂಮ್ ನಿಷೇಧಮಹಾರಾಷ್ಟ್ರದಲ್ಲಿ ಅನ್ ಲಾಕ್: ಬಟ್ಟೆ ಅಂಗಡಿಗಳ ಟ್ರಯಲ್ ರೂಮ್ ನಿಷೇಧ

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಕಷ್ಟು ಪ್ರದೇಶಗಳಲ್ಲಿ ಶಾಲೆಗಳನ್ನು ಆರಂಭಿಸುವುದು ಕಷ್ಟವಾಗಿದೆ. ಅಂತಹ ಪ್ರದೇಶದಲ್ಲಿ ಬೇರೆ ಮಾರ್ಗಗಳಲ್ಲಿ ಶಿಕ್ಷಣ ನೀಡಬೇಕಾಗಿದೆ. ಆದರೆ ಶಿಕ್ಷಣ ಮಾತ್ರ ನಿಲ್ಲುವುದಿಲ್ಲ.. ಶಿಕ್ಷಣ ಸಚಿವ ವಿಜಯ್ ಗಾಯಕ್‌ವಾಡ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದನಾ ಕೃಷ್ಣ, ವಿಜ್ಞಾನಿ ರಘುನಾಥ್ ಮಶೇಲ್ಕರ್ ಹಾಗೂ ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ

ಮಹಾರಾಷ್ಟ್ರದಲ್ಲಿ 68ಸಾವಿರಕ್ಕಿಂತ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಇದುವರೆಗೆ 2,296 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

English summary
Maharashtra Chief Minister Uddhav Thackeray on Sunday said the academic year for schools in the state will commence in June and both offline and online options should be used for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X