ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಂಖೆಡೆಗೆ ನೀಡಲು ಸ್ಯಾಮ್‌ಗೆ ಗೋಸಾವಿ 38 ಲಕ್ಷ ಕೊಟ್ಟರು- ಸೈಲ್ ಆರೋಪ

|
Google Oneindia Kannada News

ಮುಂಬೈ ನವೆಂಬರ್ 12: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಅವರು ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ಬಾಸ್ ಕಿರಣ್ ಗೋಸಾವಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಸಂಪರ್ಕಿಸಿದ್ದು ಇವರಿಬ್ಬರ ಮಧ್ಯೆ ಡ್ರಗ್ಸ್ ಪ್ರಕರಣದಿಂದ ಆರ್ಯನ್ ಖಾನ್‌ನನ್ನು ಕೈಬಿಡಲು ಹಣ ಸುಲಿಗೆ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಕಿರಣ್ ಗೋಸಾವಿ ಸಮೀರ್ ವಾಂಖೆಡೆಗೆ ಕರೆ ಮಾಡಿ ಸ್ಯಾಮ್ ಡಿಸೋಜಾಗೆ 38 ಲಕ್ಷ ಹಸ್ತಾಂತರಿಸಿದ್ದಕ್ಕೆ ನಾನೇ ಸಾಕ್ಷಿ ಎಂದು ಪ್ರಭಾಕರ್ ಸೈಲ್ ಹೇಳಿಕೊಂಡಿದ್ದಾರೆ.

ಸ್ಥಳೀಯ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಸೈಲ್, "ಗೋಸಾವಿ ಅವರು ಡಿಸೋಜಾಗೆ ಕರೆ ಮಾಡಿ 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ವ್ಯವಹಾರ ರೂ.18 ಕೋಟಿಗೆ ಇತ್ಯರ್ಥಗೊಂಡಿತ್ತು. ಅದರಲ್ಲಿ ರೂ.8 ಕೋಟಿಯನ್ನು ಸಮೀರ್ ವಾಂಖೆಡೆಗೆ ಪಾವತಿಸಬೇಕು ಮತ್ತು ಉಳಿದವುಗಳನ್ನು ವಿಭಜಿಸಲಾಗುವುದು ಎಂದು ಡಿಸೋಜಾ ಹೇಳಿದ್ದರು" ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಮತ್ತು ಅವರ ಉದ್ಯೋಗದಾತರ ನಡುವೆ ಸಭೆ ನಡೆದಿದೆಯೇ ಎಂಬ ಪ್ರಶ್ನೆಗೆ ಸೈಲ್, "ಕೆಪಿ ಗೋಸಾವಿ ಅವರನ್ನು ನಾನು ಭೇಟಿ ಮಾಡಿದಾಗ ಅವರು ಹಲವಾರು ಬಾರಿ ಸಮೀರ್ ವಾಂಖೆಡೆ ಜೊತೆ ಮಾತನಾಡಿದ್ದಾರೆ. ಅವರು ಸಮೀರ್ ವಾಂಖೆಡೆಯಿಂದ ಕರೆ ಸ್ವೀಕರಿಸುತ್ತಿದ್ದಾರೆಂದು ತೋರಿಸಲು ಅವರ ಸೂಚನೆಯಂತೆ ನಾನು ಕೂಡ ಕರೆ ಮಾಡಿದ್ದೇನೆ" ಎಂದರು.

Saw Kiran Gosavi call Sameer Wankhede, hand over Rs 38 lakh to Sam D’Souza: Prabhakar Sail

ಒಂದು ರಾತ್ರಿ ತಾನು ಮತ್ತು ಗೋಸಾವಿ ಅವರು ಸ್ಯಾಮ್ ಡಿಸೋಜಾ ಅವರನ್ನು ಭೇಟಿಯಾಗಲು ಕೊಲಾಬಾಗೆ ಹೋಗುತ್ತಿದ್ದಾಗ ಗೋಸಾವಿ ಸಮೀರ್ ವಾಂಖೆಡೆಗೆ ಕರೆ ಮಾಡುವುದನ್ನು ಗಮನಿಸಿದ್ದೇನೆ ಎಂದು ಅವರು ವಿವರಿಸಿದರು. "ನಂತರ ಅವರು 'ಸರ್, ದಯವಿಟ್ಟು ಸ್ವಲ್ಪ ಸಮಯ ಕಾಯಿರಿ, ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲವು ಸಂವಹನ ನಡೆಯುತ್ತಿದೆ ಮತ್ತು ನಾನು ನಿಮಗೆ ಮರಳಿ ಕರೆಮಾಡುತ್ತೇನೆ. ಅಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ' ಎಂದು ಅವರು ಹೇಳುವುದನ್ನು ನಾನು ಕೇಳಿದೆ," ಎಂದು ಸೈಲ್ ಹೇಳಿದರು.

"ಮರುದಿನ ಬೆಳಗ್ಗೆ ತುರ್ತಾಗಿ ಮಹಾಲಕ್ಷ್ಮಿ ಬಳಿ ಹೋಗಿ 50 ಲಕ್ಷ ಹಣ ವಸೂಲಿ ಮಾಡಲು ಗೋಸಾವಿ ನನಗೆ(ಸೈಲ್) ಕರೆ ಮಾಡಿದರು. ನಾನು ಈ ಹಣವನ್ನು ಕಲೆಕ್ಟ್ ಮಾಡಿದೆ. ಈ ಹಣದಲ್ಲಿ ದಕ್ಷಿಣ ಮುಂಬೈನ ಕಲ್ಬಾದೇವಿ ರಸ್ತೆಯಲ್ಲಿರುವ ಸೂರ್ತಿ ಹೋಟೆಲ್ ಬಳಿ ವ್ಯಕ್ತಿಯೊಬ್ಬರಿಗೆ 23 ಲಕ್ಷ ರೂಪಾಯಿ ನೀಡಲು ಸುನೀಲ್ ಪಾಟೀಲ್ ಅವರು ನನ್ನನ್ನು (ಸೈಲ್) ಸಂಪರ್ಕಿಸಿದ್ದರು. ಅದನ್ನು ನೀಡಿದ್ದೇನೆ. ನಂತರ ಸುನೀಲ್ ಪಾಟೀಲ್ ನನಗೆ ವ್ಯಕ್ತಿಯ ನಂಬರ್ ನೀಡಿದರು ಮತ್ತು ನಾನು ಅವರಿಗೆ ಕರೆ ಮಾಡಿದೆ. ಕರೆ ಮಾಡಿದ ವ್ಯಕ್ತಿ ತನ್ನ ಖಾತೆಗೆ 1 ಲಕ್ಷ ರೂ.ಗಳನ್ನು ವರ್ಗಾಯಿಸಲು ಹೇಳಿ ಅವರ ಚೆಕ್‌ನ ವಿವರಗಳನ್ನು ಕಳುಹಿಸಿದ್ದಾರೆ. 1 ಲಕ್ಷವನ್ನು ವರ್ಗಾಯಿಸಲು ಸೇವಾ ಶುಲ್ಕವನ್ನು ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ನಾನು 95,000 ರೂ.ಗಳನ್ನು ವರ್ಗಾಯಿಸಿದರೆ ಸರಿಯೇ ಎಂದು ಕೇಳಿದೆ ಮತ್ತು ಅವರು ಸರಿ ಎಂದು ಹೇಳಿದರು. ನಂತರ ಸಿದ್ಧಿವಿನಾಯಕ್ ಮನಿ ಟ್ರಾನ್ಸ್‌ಫರ್ ಶಾಪ್ ಅಲ್ಲಿಂದ ಅವರ ಖಾತೆಗೆ 95,000 ರೂ.ಗಳನ್ನು ವರ್ಗಾಯಿಸಿದ್ದೇನೆ ಮತ್ತು 1,000 ರೂ.ಗಳನ್ನು ಸೇವಾ ಶುಲ್ಕವಾಗಿ ಪಾವತಿಸಿದ್ದೇನೆ. ನಾನು(ಸೈಲ್) ಬಾಕಿ ಇರುವ 4,000 ರೂ.ಗೆ ಏನು ಮಾಡಬೇಕೆಂದು ಕೇಳಿದೆ, ಅದನ್ನು ಅವರು ನನ್ನ ಬಳಿ ಇಟ್ಟುಕೊಳ್ಳಲು ವ್ಯಕ್ತಿ ಹೇಳಿದರು" ಎಂದು (ಸೈಲ್) ಹೇಳಿದ್ದಾರೆ. ಉಳಿದ 26 ಲಕ್ಷ ರೂ ಹಣವನ್ನು ಗೋಸಾವಿಗೆ ನೀಡಿರುವುದಾಗಿ ಸೈಲ್ ಹೇಳಿಕೊಂಡಿದ್ದಾರೆ.

"ಅದೇ ಸಂಜೆ ಅಕ್ಟೋಬರ್ 3 ರಂದು, ಗೋಸಾವಿ ಅವರು ಅಡುಗೆಮನೆಯಲ್ಲಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ 5 ಲಕ್ಷ ರೂಪಾಯಿಯೊಂದಿಗೆ ವಾಶಿ ಸೇತುವೆಗೆ ಬರಲು ನನ್ನನ್ನು ಕರೆದರು. ನಾನು ಇನಾರ್ಬಿಟ್ ಮಾಲ್‌ಗೆ ಬರುವಂತೆ ಹೇಳಿದರು. ಗೋಸಾವಿ ಅಲ್ಲಿಗೆ ಬಂದರು. ನಂತರ ಚೀಲಕ್ಕೆ ಸ್ವಲ್ಪ(ಹತ್ತು ಲಕ್ಷ) ಹಣವನ್ನು ಸೇರಿಸಿದರು. ನಂತರ ನನಗೆ ಮತ್ತೊಬ್ಬ ವ್ಯಕ್ತಿಯಿಂದ 23 ಲಕ್ಷ ರೂಪಾಯಿ ವಸೂಲಿ ಮಾಡುವಂತೆಯೂ ಗೋಸಾವಿ ಹೇಳಿದ್ದರು. ಹಣ ವಸೂಲಿಯಾದ ಬಳಿಕ ನನಗೆ ಚರ್ಚ್‌ಗೇಟ್‌ಗೆ ಬರಲು ಹೇಳಿದರು. ನಾನು ಚರ್ಚ್‌ಗೇಟ್ ತಲುಪಿದಾಗ ಸ್ಯಾಮ್ ಡಿಸೋಜಾ ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಮತ್ತೊಬ್ಬನಿಂದ 23 ಲಕ್ಷ ರೂ. ನಂತರ 15 ಲಕ್ಷ ನಗದು ಸೇರಿದಂತೆ ಒಟ್ಟು 38 ಲಕ್ಷ ರೂ.ಗಳನ್ನು ಗೋಸಾವಿಯವರು ಸ್ಯಾಮ್ ಡಿಸೋಜಾ ಅವರಿಗೆ ಹಸ್ತಾಂತರಿಸಿದರು. ಹಣ ಹಸ್ತಾಂತರದ ವೇಳೆ ಗೋಸಾವಿ ಸಮೀರ್ ವಾಂಖೆಡೆ ಅವರಿಗೆ ಕರೆ ಮಾಡಿದ್ದರು. ಕರೆ ಬಳಿಕ ಡಿಸೋಜಾ ನಗದನ್ನು ತೆಗೆದುಕೊಂಡು ಹೋದರು" ಎಂದು ಸೈಲ್ ಹೇಳಿಕೊಂಡಿದ್ದಾರೆ.

ಕ್ರೂಸ್ ಡ್ರಗ್ಸ್ ಬಸ್ಟ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡುವಂತೆ ಮಾಡಲಾಗಿದೆ ಎಂದು ಸೈಲ್ ಹೇಳಿದ್ದಾರೆ. ಗೋಸಾವಿಯು ಆರ್ಯನ್ ಖಾನ್ ಜೊತೆಗಿದ್ದನೆಂದು ಮತ್ತು ನಂತರ ಅವನಿಗೆ ಕೆಲವು ಅನುಮಾನಗಳಿದ್ದಾಗಗೋಸಾವಿ ತನ್ನ ಫೋನ್ ಅನ್ನು ಬಳಸುತ್ತಿದ್ದ ಮತ್ತು ಆರ್ಯನ್ ಅನ್ನು ಯಾರೊಂದಿಗಾದರೂ ಮಾತನಾಡುವಂತೆ ಅಥವಾ ಅದನ್ನು ರೆಕಾರ್ಡ್ ಮಾಡುತ್ತಿದ್ದ ವೀಡಿಯೊವನ್ನು ಶೂಟ್ ಮಾಡಿದ್ದಾನೆ ಎಂದು ಸೈಲ್ ಉಲ್ಲೇಖಿಸಿದ್ದಾರೆ.

Recommended Video

ಪದ್ಮಶ್ರೀ ಪಡೆದ ಕನ್ನಡ ನೆಲದ ವೃಕ್ಷಮಾತೆ ತುಳಸಿ ಗೌಡ ಸರಳತೆಗೆ ಭಾರೀ ಮೆಚ್ಚುಗೆ | Oneindia Kannada

ಕಿರಣ್ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸ್ವತಂತ್ರ ಸಾಕ್ಷಿದಾರ ಎಂದು ಕರೆದಿದೆ. ಈತ ಆರ್ಯನ್ ಖಾನ್ ನೊಂದಿಗೆ ಘಟನೆ ವೇಳೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಆತನಿಂದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆಲು ಡೀಲ್ ಮಾಡಿಕೊಂಡಿದ್ದರು ಎಂದು ಆತನ(ಕಿರಣ್ ಗೋಸಾವಿ) ವೈಯಕ್ತಿಕ ಅಂಗರಕ್ಷಕ ಪ್ರಬಾಕರ್ ಆರೋಪಿಸಿದ್ದಾರೆ. 'ಸ್ಯಾಮ್ ಡಿಸೋಜಾ ಮಹಾರಾಷ್ಟ್ರದ ಮಾತ್ರವೇ ಅಲ್ಲ ಭಾರತದ ದೊಡ್ಡ ಅಕ್ರಮ ಹಣ ವರ್ಗಾವಣೆ ಮಾಡುವ ವ್ಯಕ್ತಿ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡುವುದೇ ಆತನ ಕಾರ್ಯ. ಆತನಿಗೆ ರಾಜಕಾರಣಿಗಳ, ಐಎಎಸ್-ಐಪಿಎಸ್ ಅಧಿಕಾರಿಗಳ ಸ್ನೇಹವಿದೆ. ಎನ್‌ಸಿಬಿ ಅಧಿಕಾರಿಗಳ ಸ್ನೇಹವೂ ಇವೆ. ಅವರೆಲ್ಲರ ಪರವಾಗಿ ಈತ ಅಕ್ರಮ ಹಣ ವಸೂಲಿ ಮಾಡಿ ಅದನ್ನು ವರ್ಗಾವಣೆ ಮಾಡುತ್ತಾನೆ. ಇದೇ ಅವನ ಕೆಲಸ. ಅಂಥ ವ್ಯಕ್ತಿ ಎನ್‌ಸಿಬಿ ಕಚೇರಿಯಲ್ಲಿ ಕುಳಿತಿದ್ದಾನೆ. ಇದೆಲ್ಲವೂ ಒಂದು ಚೈನ್ ಲಿಂಕ್ ಎನ್ನಲಾಗುತ್ತದೆ. ಕೆಪಿ ಗೋಸಾವಿಯವರ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್, ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಅವರು 25 ಕೋಟಿ ರೂ. ಡೀಲ್ ಆಗಿತ್ತು. ಮಾತುಕತೆಯ ಬಳಿಕ 18 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ 8 ಕೋಟಿ ರೂ. ಸೇರಲಿದೆ ಎಂದು ಅವರು ಚರ್ಚಿಸುತ್ತಿದ್ದರು ಎಂದು ಸೈಲ್ ಆರೋಪಿಸಿದ್ದಾರೆ.

English summary
Prabhakar Sail, a witness of the Narcotics Control Bureau, has made an explosive statement about the Mumbai Cruise Drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X