ಶಿವಸೇನೆಯು ಕೇಂದ್ರದ ಒತ್ತಡ ರಾಜಕೀಯಕ್ಕೆ ಹೆದರುವುದಿಲ್ಲ: ಸಂಜಯ್ ರಾವತ್
ಮುಂಬೈ, ನವೆಂಬರ್ 28: ಶಿವಸೇನೆಯು ಕೇಂದ್ರದ ಒತ್ತಡ ರಾಜಕೀಯಕ್ಕೆ ಹೆದರುವುದಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರವು ಕೇಂದ್ರದ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರದ ಏಜೆನ್ಸಿಗಳ ನಡವಳಿಕೆ, ಕಾರ್ಯವನ್ನು ಶಿವಸೇನೆ ಗಮನಿಸುತ್ತಿದೆ.
ನಮ್ಮ ಹಿಂದುತ್ವ ಬದಲಾಗಿಲ್ಲ, ಶಿವಸೇನೆಯು ಹಿಂದುತ್ವವನ್ನು ತೊರೆದಿದೆ: ದೇವೇಂದ್ರ ಫಡ್ನವಿಸ್
ಸರ್ಕಾರಕ್ಕೆ ಜನರ ಆಶೀರ್ವಾದವಿದೆ. ಸರ್ಕಾರವನ್ನು ಇಡಿ, ಸಿಬಿಐಯಂತಹ ತನಿಖೆಗಳಿಂದ ಬೆದರಿಸಲು, ಕುಗ್ಗಿಸುವಂತಹ ಕೀಳು ರಾಜಕೀಯವನ್ನು ತೋರಿಸುವ ಅಗತ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
"ಮಹಾರಾಷ್ಟ್ರದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಯೋಜನೆ" ಬಿಜೆಪಿ ಹಗೆತನದ ರಾಜಕೀಯದಲ್ಲಿ ತೊಡಗಿದ್ದು, ಮಹಾ ವಿಕಾಸ ಅಘಡಿ(ಎಂವಿಎ) ಸರ್ಕಾರವನ್ನು ಜಾರಿ ನಿರ್ದೇಶನಾಲಯ, ಸಿಬಿಐಯಂತಹ ತನಿಖೆಗಳಿಂದ ಬೆದರಿಸಲು ಸಾಧ್ಯವಿಲ್ಲ ಎಂದರು.
ಮಹಾರಾಷ್ಟ್ರ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಿದ್ದು ಈ ಸಂದರ್ಭದಲ್ಲಿ ಶಿವಸೇನೆ ಮುಖವಾಣಿ ಸಾಮ್ನಾಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು
ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
ಇತ್ತೀಚೆಗೆ ಶಿವಸೇನೆ ಸಂಸದ ಪ್ರತಾಪ್ ಸರ್ನೈಕ್ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ನಡೆದ ದಾಳಿಯಿದು.
ಇದೇ ಸಂದರ್ಭದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ತಮ್ಮ ಸರ್ಕಾರ ಪೂರ್ಣ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ತಮಗೆ ಯಾವ ಸರ್ಕಾರ ಬೇಕು ಎಂದು ಜನತೆ ತೀರ್ಮಾನ ಮಾಡುತ್ತಾರೆ ಎಂದರು.