ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಮೋದಿಯನ್ನು ದೂಷಿಸಿದ ರಾವತ್

|
Google Oneindia Kannada News

ಮುಂಬೈ, ಏಪ್ರಿಲ್ 12: ಮಹಾರಾಷ್ಟ್ರ, ಪಂಜಾಬ್ ಹಾಗೂ ಛತ್ತೀಸ್‌ಗಢದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದನ್ನು ಶಿವಸೇನೆಯ ಸಂಜಯ್ ರಾವತ್ ಪ್ರಧಾನಿ ಮೋದಿಯನ್ನು ದೂಷಿಸಿದ್ದಾರೆ.

ರಾಜ್ಯದ ವರ್ಚಸ್ಸನ್ನು ಕೆಡಿಸುವ ಪ್ರಯತ್ನವನ್ನು ಮಹಾರಾಷ್ಟ್ರ ಬಿಜೆಪಿ ನಾಯಕರು ಖಂಡಿಸಬೇಕು, ಇಲ್ಲದಿದ್ದರೆ ಅವರು ರಾಜ್ಯದಲ್ಲಿನ ರಾಜಕೀಯದಲ್ಲಿ ವ್ಯವಹಾರ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಕೊರೊನಾ ಹೆಚ್ಚಳ: ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್, ಸಿಎಂ ಏನಂತಾರೆ?ಕೊರೊನಾ ಹೆಚ್ಚಳ: ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್, ಸಿಎಂ ಏನಂತಾರೆ?

ಕೇಂದ್ರ ಹೊರಡಿಸಿದ ಪ್ರತಿಯೊಂದು ಸೂಚನೆಗಳನ್ನು ಮಹಾರಾಷ್ಟ್ರ ಅನುಸರಿಸಿದೆ. ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ವರ್ತಿಸಬೇಕು ಮತ್ತು ರಾಜ್ಯಗಳನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದರು.

Sanjay Raut Blames Centre For Rising Covid-19 Cases In Maharashtra, Chhattisgarh, Punjab

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್ ಗಢ, ಕರ್ನಾಟಕ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ದಿನನಿತ್ಯ ಏರಿಕೆಯಾಗುತ್ತಿದ್ದು, ಹೊಸ ಸೋಂಕುಗಳಲ್ಲಿ ಶೇಕಡಾ 83.02 ರಷ್ಟು , ಈ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.ಗುಜರಾತ್‌ನ ಬಿಜೆಪಿ ಕಚೇರಿಗಳಲ್ಲಿ ರೆಮ್‌ಡೆಸಿವಿರ್ ಹೇಗೆ ಲಭ್ಯವಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ ಆದರೆ ಅದು ಮಹಾರಾಷ್ಟ್ರಕ್ಕೆ ಲಭ್ಯವಾಗುತ್ತಿಲ್ಲ ಎಂದು ರಾವತ್ ಹೇಳಿದರು.

ಕೊರೊನಾ ನಿಯಂತ್ರಣದಲ್ಲಿ ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್ ಗಢ ಮಾತ್ರ ವಿಫಲವಾದರೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೊರೊನಾವೈರಸ್ ವಿರುದ್ಧದ ಹೋರಾಟ ಆರಂಭವಾದಾಗಿನಿಂದಲೂ ಕೇಂದ್ರ ಸರ್ಕಾರ ಮೊದಲು ವೈಫಲ್ಯಕ್ಕೊಳಗಾಗಿದೆ ಎಂದಿದ್ದಾರೆ.

English summary
Shiv Sena MP Sanjay Raut on Monday blamed the Centre for the rise in coronavirus positive cases in Maharashtra, Chhattisgarh and Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X