ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಸ್ವೀಕರಿಸಬಹುದು: ಸಂಜಯ್ ರಾವತ್‌

|
Google Oneindia Kannada News

ಮುಂಬೈ: ದಕ್ಷಿಣ ಭಾರತದಲ್ಲಿ ಹಿಂದೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ರಂಗದಲ್ಲೂ ವಾದ-ವಿವಾದಗಳು ಜರುತ್ತಿವೆ. ಇದರ ಮಧ್ಯ ಶಿವಸೇನಾ ಮುಖಂಡ ಸಂಜಯ್ ರಾವತ್‌ 'ಒಂದು ದೇಶ, ಒಂದು ಭಾಷೆ' ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಹಿಂದಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದ್ದು, ಅದನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸಬಹುದು ಎಂದು ಶನಿವಾರ ಹೇಳಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವಾ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳಲ್ಲಿ, ಒಂದು ಭಾಷೆಯ ಸವಾಲನ್ನು ಸ್ವೀಕರಿಸಬೇಕೆಂದು ತಿಳಿಸಿದ್ದಾರೆ.

ಹಿಂದಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ; ತಮಿಳುನಾಡು ಸಚಿವ ಕೆ.ಪೊನ್ಮುಡಿಹಿಂದಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ; ತಮಿಳುನಾಡು ಸಚಿವ ಕೆ.ಪೊನ್ಮುಡಿ

ಹಿಂದಿ ರಾಷ್ಟ್ರೀಯ ಭಾಷೆಯಾಗಬೇಕೆಂದಿದ್ದ ಶಾ
ತಿಂಗಳ ಹಿಂದೆ ಗೃಹ ಸಚಿವಾ ಅಮಿತ್‌ ಶಾ ಒಂದು ದೇಶ, ಒಂದು ಭಾಷೆ ಯನ್ನು ಪ್ರತಿಪಾದಿಸಿ ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸಬೇಕು ಎಂದು ಹೇಳಿದ್ದರು. ನಂತರ ಸ್ಯಾಂಡಲ್‌ವುಡ್‌ ನಟ ಸುದೀಪ್ ಮತ್ತು ಬಾಲಿವುಡ್‌ ನಟ ಅಜಯ್ ದೇವಗನ್ ನಡುವೆ ರಾಷ್ಟ್ರೀಯ ವಿಷಯವಾಗಿ ನಡೆದಿದ್ದ ವಾದ ದೇಶವ್ಯಾಪಿ ಚರ್ಚೆಯಾಗಿತ್ತು. ಇದೀಗ ರಾವತ್‌ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬಹುದು ಎಂದು ಹೇಳಿಕೆ ನೀಡಿ ಮತ್ತೆ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

Sanjay Raut bats for one country, one language: says Hindi is spoken across India and has acceptability

ಪಾನೀಪುರಿ ಮಾರುವವರು ಹಿಂದಿ ಮಾತನಾಡ್ತಾರೆ

ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹಿಂದೆ ಏರಿಕೆ ಬಗ್ಗೆ ಮಾತನಾಡಿದ್ದ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಹಿಂದಿ ಕಲಿತವರು ಕೊಯಮತ್ತೂರಿನಲ್ಲಿ ಪಾನೀಪುರಿ ಮಾರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್‌ ಹಿಂದಿ ಭಾಷೆಗಿಂತಲೂ ಹೆಚ್ಚು ಮೌಲ್ಯಯುತವಾಗಿದೆ . ಹಿಂದಿ ಕಲಿಯಲು ತಮಿಳುನಾಡು ವಿದ್ಯಾರ್ಥಿಗಳು ಸಿದ್ಧರಿದ್ದಾರೆ. ಆದರು ಅದು ಐಚ್ಛಿಕವಾಗಿರಬೇಕೆ ಹೊರತು, ಕಡ್ಡಾಯವಾಗಿರಬಾರದು ಎಂದು ಅವರು ತಿಳಿಸಿದ್ದರು.

ಸುದೀಪ್ vs ದೇವಗನ್ ವಾಗ್ಯುದ್ಧ: ಕಿಚ್ಚನಿಗೆ ಆರ್‌ಜಿವಿ ಬೆಂಬಲಸುದೀಪ್ vs ದೇವಗನ್ ವಾಗ್ಯುದ್ಧ: ಕಿಚ್ಚನಿಗೆ ಆರ್‌ಜಿವಿ ಬೆಂಬಲ

ಇಡೀ ದೇಶ ಒಪ್ಪಿಕೊಳ್ಳಬಹುದಾ ಒಂದೇ ಭಾಷೆ ಹಿಂದಿ ಮಾತ್ರ
ತಮಿಳುನಾಡಿನ ಸಚಿವರ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿರುವ ಮೂಲತಃ ಮರಾಠಿಗರಾಗಿರು ರಾವತ್‌, ತಾವು ಮತ್ತು ತಮ್ಮ ಪಕ್ಷ ಹಿಂದಿ ಭಾಷೆಗೆ ಸದಾ ಗೌರವ ನೀಡುವುದಾಗಿ ತಿಳಿಸಿದ್ದಾರೆ. " ಹಿಂದಿಯಲ್ಲಿ ಮಾತನಾಡುವ ಅವಕಾಶ ಯಾವಾಗ ಸಿಕ್ಕರೂ ನಾನು ಹಿಂದಿಯಲ್ಲಿ ಮಾತನಾಡಲು ಬಯಸುತ್ತೇನೆ. ಏಕೆಂದರೆ ದೇಶದ ಜನತೆ ನಾನು ಮಾತನಾಡುವುದನ್ನು ಕೇಳಬೇಕೆಂದು ನಾನು ಬಯಸುತ್ತೇನೆ. ಇಡೀ ದೇಶ ಒಪ್ಪಿಕೊಳ್ಳಬಹುದಾದ ಏಕೈಕ ಭಾಷೆ ಎಂದರೆ ಹಿಂದಿ ಮಾತ್ರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Sanjay Raut bats for one country, one language: says Hindi is spoken across India and has acceptability

ಎಲ್ಲಾ ರಾಜ್ಯಗಳಲ್ಲೂ ಒಂದೇ ಭಾಷೆ ಇರಬೇಕು

ನಾನು ಯಾವುದೇ ಭಾಷೆಯನ್ನು ಅವಮಾನಿಸುತ್ತಿಲ್ಲ. ಆದರೆ ಒಂದು ದೇಶ, ಒಂದು ಸಂವಿಧಾನ, ಒಂದು ಲಾಂಛನ ಹೇಗಿ ಇದಿಯೋ, ಹಾಗೆ ದೇಶದಲ್ಲಿ ಒಂದು ಭಾಷೆ ಇರಬೇಕು. ಎಲ್ಲಾ ರಾಜ್ಯಗಳಲ್ಲಿ ಒಂದೇ ಭಾಷೆ ಇರಬೇಕು ಎಂಬ ಈ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವೀಕರಿಸಬೇಕು ಎಂದು ಶಿವಸೇನಾ ಮುಖಂಡ ತಿಳಿಸಿದ್ದಾರೆ.

English summary
Making a pitch for "one country, one language", Shiv Sena leader Sanjay Raut on Saturday said Hindi is spoken across India and has acceptability, and added that Union minister Amit Shah should accept the challenge that there should be one language in all the states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X