• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಜಯ್ ದತ್‌ಗೆ ಕ್ಷಮಾದಾನ ಏಕೆ ಸಿಗಲಿಲ್ಲ?

By ವಿಕಾಸ್ ನಂಜಪ್ಪ
|

ಮುಂಬೈ, ಸೆಪ್ಟೆಂಬರ್ 24 : ಬಾಲಿವುಡ್ ನಟ ಸಂಜಯ್ ದತ್ ಕ್ಷಮಾದಾನ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್ ತಿರಸ್ಕರಿಸಿದ್ದಾರೆ. ಪದೇ-ಪದೇ ಪೆರೋಲ್ ಪಡೆದು ಹೊರಬರುತ್ತಿದ್ದ ಮುನ್ನಾಭಾಯಿಗೆ ಅದೇ ಸಂಕಷ್ಟ ತಂದೊಡ್ಡಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಸಂಜಯ್ ದತ್ ಅಪರಾಧಿ ಎಂದು ಸಾಬೀತಾಗಿದ್ದು, 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ದತ್‌ ಯರವಾಡ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಸದ್ಯ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದಾರೆ. [ಮಹಾರಾಷ್ಟ್ರಕ್ಕೆ ತಲೆನೋವಾದ ದತ್]

ಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಮಹಾರಾಷ್ಟ್ರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ರಾಜ್ಯಪಾಲ ವಿದ್ಯಾಸಾಗರ ರಾವ್ ಗುರುವಾರ ತಿರಸ್ಕರಿಸಿದ್ದಾರೆ. [ಹೆಂಡ್ತೀನ್ನ ನೋಡ್ಕೋಬೇಕು; ಪೆರೋಲ್ ಕೊಡಿ]

ಸರ್ಕಾರದ ವರದಿ : ಕ್ಷಮಾದಾನ ಅರ್ಜಿಯನ್ನು ರಾಜ್ಯಪಾಲರು ಪರಿಶೀಲನೆ ನಡೆಸುವಾಗ ಮಹಾರಾಷ್ಟ್ರ ಗೃಹ ಸಚಿವಾಲಯದ ವರದಿಯನ್ನು ತರಿಸಿಕೊಂಡಿದ್ದಾರೆ. ಕ್ಷಮಾದಾನ ನೀಡುವುದು ಸರಿಯಲ್ಲ ಎಂದು ತನ್ನ ವರದಿಯಲ್ಲಿ ಸಚಿವಾಲಯ ಸ್ಪಷ್ಟಪಡಿಸಿತ್ತು. [ಟಾಡಾ ಕೋರ್ಟಿಗೆ ಶರಣಾದ ಸಂಜಯ್ ದತ್]

1996ರಲ್ಲಿ ಜೈಲು ಪಾಲಾಗಿದ್ದ ದತ್‌, 18 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. 2013ರಲ್ಲಿ ಸುಪ್ರೀಂಕೋರ್ಟ್‌ ಸಂಜಯ್ ದತ್‌ ಪೂರ್ಣ ಶಿಕ್ಷೆಯನ್ನು ಅನುಭವಿಸಬೇಕು ಎಂದು ಮತ್ತೆ ಜೈಲಿಗೆ ಕಳುಹಿಸಿತ್ತು. ಈ ಅಂಶವನ್ನು ಪರಿಗಣಿಸಿ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಸಂಜತ್ ದತ್ ಜೈಲಿಗೆ ಹೋದ ದಿನದಿಂದ ವಿವಾದಗಳು ಹುಟ್ಟಿಕೊಳ್ಳುತ್ತಿದ್ದು ಇವುಗಳನ್ನು ರಾಜ್ಯಪಾಲರು ಪರಿಗಣಿಸಿದ್ದಾರೆ. ದತ್ ಜೈಲಿನ ಅವಧಿ 2016ರ ಫೆಬ್ರವರಿಗೆ ಕೊನೆಗೊಳ್ಳಲಿದೆ. ಆದರೆ, ಈಗಾಗಲೇ ದತ್ 118 ದಿನಗಳ ಪೆರೋಲ್ ಪಡೆದಿದ್ದಾರೆ. ದತ್‌ಗೆ ಹಲವು ಬಾರಿ ಹೇಗೆ ಪೆರೋಲ್ ಸಿಕ್ಕಿದೆ? ಎಂಬುದು ಇನ್ನೂ ನಿಗೂಢ.

ದತ್‌ಗೆ ಪದೇ ಪದೇ ಪೆರೋಲ್ ಸಿಗುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪೆರೋಲ್ ಬಗ್ಗೆ ಪುಣೆಯ ಯರವಾಡ ಜೈಲಿನಿಂದ ವರದಿ ತರಿಸಿಕೊಂಡಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ದತ್ ಕ್ಷಮಾದಾನ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sanjay Dutt’s repeated outings on parole and furlough may have gone against him when the Governor of Maharashtra decided on his pardon plea. The actor who has been convicted in an arms case relating to the 1993 Mumbai serial blasts has already spent 118 days out of jail either on parole or furlough.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more