ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀರ್ ವಾಂಖೆಡೆ ಹಿಂದೂ: ದಾಖಲೆ ಪುರಾವೆ ತೋರಿಸಿದ ಪತ್ನಿ ಕ್ರಾಂತಿ

|
Google Oneindia Kannada News

ಮುಂಬೈ ಅಕ್ಟೋಬರ್ 27: ಮುಂಬೈ ಡ್ರಗ್ ಕೇಸ್ ವಿಚಾರಣೆ ಆರಂಭಿಸಿದಾಗಿನಿಂದಲೂ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಈ ಮಧ್ಯೆ ಮರಾಠಿ ನಟಿ ಆಗಿರುವ ಅವರ ಪತ್ನಿ ಕ್ರಾಂತಿ ರೆಡ್ಕರ್ ವಾಂಖೆಡೆ ಅವರ ಮೇಲಿರುವ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ವಾಂಖೆಡೆ ಹುಟ್ಟಿನಿಂದಲೇ ಮುಸ್ಲಿಂ ಮತ್ತು ಆತನ ನಿಜವಾದ ಹೆಸರು 'ಸಮೀರ್ ದಾವೂದ್ ವಾಂಖೆಡೆ' ಎಂದು ಹೇಳಿದ್ದಾರೆ. ಜೊತೆಗೆ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮಾಡಿದ ಆರೋಪಗಳಿಗೆ ಕ್ರಾಂತಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸುಳ್ಳು ಹೇಳಿಕೆ ಸಮೀರ್ ವಾಂಖೆಡೆ ಹುಟ್ಟು ಹಿಂದೂ.ಆ ಬಗ್ಗೆ ನಮ್ಮ ಬಳಿ ದಾಖಲಾತಿಗಳಿವೆ ಎಂದು ಪತ್ನಿ ಕ್ರಾಂತಿ ಹೇಳಿದ್ದಾರೆ.

ಮಲಿಕ್ ಅವರು ಸಮೀರ್ ವಾಂಖೆಡೆ ಅವರ ಜನ್ಮ ಪ್ರಮಾಣಪತ್ರ ಎಂದು ಹೇಳಿಕೊಂಡು ಪತ್ರವೊಂದನ್ನು ಟ್ವೀಟ್ ಮಾಡಿದ್ದರು. ಇದನ್ನು ನಕಲಿ ಎಂದು ಕರೆದ ಕ್ರಾಂತಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Sameer Wankhede is a Hindu: wife Kranti shows document proof

ಸಮೀರ್ ಹಿಂದೂ ಅಲ್ಲ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಕ್ರಾಂತಿ ಅವರು, ನಾವು ಎಂದಿಗೂ ಸುಳ್ಳುಗಳನ್ನು ಸಹಿಸಲು ಸಾಧ್ಯವಿಲ್ಲ. ಮೊದಲನೇ ಪತ್ನಿ ಸಮೀರ್ ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರು. ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾದರು. ನಮ್ಮ ಬಳಿ ಕಾನೂನು ದಾಖಲೆಗಳಿವೆ. ಆದರೆ ಮಲಿಕ್ ಅವರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ನಮ್ಮ ಬಳಿ ಇರುವ ದಾಖಲೆಗಳಲ್ಲಿ ಆತ ಹಿಂದೂ ಎಂದು ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪತ್ನಿ ಕ್ರಾಂತಿ ಹೇಳಿಕೊಂಡಿದ್ದಾರೆ.

ಆದಾಗ್ಯೂ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮಲಿಕ್ ಸಮೀರ್ ದಾವೂದ್ ವಾಂಖೆಡೆ ಮತ್ತು ಸಬಾನಾ ಖುರೇಷಿ ನಡುವಿನ 'ನಿಕಾಹ್' ಅನ್ನು ಡಿಸೆಂಬರ್ 7, 2006 ರಂದು ಮುಂಬೈನ ಅಂಧೇರಿ (ಪಶ್ಚಿಮ) ದಲ್ಲಿರುವ ಲೋಖಂಡ್ ವಾಲಾ ಸಂಕೀರ್ಣದಲ್ಲಿ ನಡೆಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ನಿಕಾಹ್ ಕಾರ್ಡ್‌ನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Sameer Wankhede is a Hindu: wife Kranti shows document proof

ಮತ್ತೊಂದೆಡೆ, ವಾಂಖೆಡೆ ಅವರ ತಂದೆ ನವಾಬ್ ಮಲಿಕ್ ಅವರ ಧರ್ಮದ ಬಗ್ಗೆ ಆರೋಪಗಳನ್ನು ನಿರಾಕರಿಸಿದರು. "ನನಗೆ ಉರ್ದು ಅರ್ಥವಾಗುವುದಿಲ್ಲ. ಆದ್ದರಿಂದ ಅವರ ದಾಖಲೆಗಳಲ್ಲಿ (ನಿಕಾಹ್ ನಾಮ) ನನ್ನ ಹೆಸರನ್ನು ಬರೆಯಲಾಗಿದೆ ಎಂದು ನನಗೆ ತಿಳಿದಿಲ್ಲ. ಅವಳು (ನನ್ನ ದಿವಂಗತ ಪತ್ನಿ) ನನ್ನ ಹೆಸರನ್ನು ದಾವೂದ್ ಎಂದು ಪ್ರೀತಿಯಿಂದ ಉಲ್ಲೇಖಿಸಿರಬಹುದು. ಜನರು ಪರಸ್ಪರ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ" ಹಾಗಂತ ಅದೇ ಹೆಸರು ನಮ್ಮ ನಿಜವಾದ ಹೆಸರು ಆಗುವುದಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಅವರ ಹೆಸರನ್ನು ಜ್ಞಾನದೇವ್ ವಾಂಖೆಡೆ ಎಂದು ನಮೂದಿಸಲಾಗಿದೆ ಎಂದು ಅವರು ಹೇಳಿದರು. "ರಾಜ್ಯ ಸರ್ಕಾರ ಅವರನ್ನು ನೇಮಕ ಮಾಡುವಾಗ ಕೆಲವು ಪರಿಶೀಲನೆಯನ್ನೂ ಮಾಡಿರಬೇಕು" ಎಂದು ಅವರು ಹೇಳಿದರು.

ನಾನು ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಹಾಗೇ, ರಾಜ್ಯ ಸರ್ಕಾರದ ಇಲಾಖೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದೇನೆ. ನನ್ನ ಹೆಸರು ಜ್ಞಾನದೇವ್ ಅಲ್ಲ ಮತ್ತು ದಾವೂದ್ ವಾಂಖೆಡೆ ಎಂದಾಗಿದ್ದರೆ ಇದುವರೆಗೂ ಯಾರೊಬ್ಬರಿಗಾದರೂ ಆ ವಿಷಯ ಗೊತ್ತಿರಬೇಕಿತ್ತಲ್ಲ. ಯಾರಿಗೂ ಗೊತ್ತಿಲ್ಲದ ವಿಷಯ ನವಾಬ್ ಮಲಿಕ್ ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ? ಮಲಿಕ್‌ಗೆ ಮಾತ್ರ ಅನುಮಾನಾಸ್ಪದ ದಾಖಲೆ ಸಿಕ್ಕಿದ್ದು ಹೇಗೆ? ಎಂದು ಜ್ಞಾನದೇವ್ ವಾಂಖೆಡೆ ಪ್ರಶ್ನಿಸಿದ್ದಾರೆ.

ಇನ್ನು, ಆರು ವರ್ಷಗಳ ಹಿಂದೆ ನಿಧನರಾದ ನನ್ನ ಪತ್ನಿ ಒಮ್ಮೆ ಅಫಿಡವಿಟ್ ಮಾಡಿದ್ದು, ಅದರಲ್ಲಿ ನನ್ನ ಹೆಸರು ಜ್ಞಾನದೇವ್ ವಾಂಖೆಡೆ ಎಂದು ಉಲ್ಲೇಖಿಸಲಾಗಿದೆ. ನನ್ನ ಬಳಿ ಮಾನ್ಯವಾದ ಜಾತಿ ಪ್ರಮಾಣಪತ್ರವೂ ಇದೆ. ನಾನು ಮಾತ್ರವಲ್ಲ, ನನ್ನ ಸಂಬಂಧಿಕರ ಬಳಿಯೂ ಇದೇ ರೀತಿಯ ದಾಖಲೆಗಳಿವೆ ಎಂದಿದ್ದಾರೆ. ಎಲ್ಲಾ ಆರೋಪಗಳು ಸುಳ್ಳು ಮತ್ತು ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ತನ್ನ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧ ಎಂದು ವಾಂಖೆಡೆ ಹೇಳಿದ್ದಾರೆ.

English summary
In the midst of a huge controversy around Narcotics Control Bureau (NCB) Zonal Director Sameer Wankhede, his wife, Kranti Redkar Wankhede, who is also a Marathi actress, hits back at all the allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X