ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಹಣ, ಆಹಾರ ವಿತರಣೆ ಸುದ್ದಿ: ಮುಂಬೈನಲ್ಲಿ ಮುಗಿಬಿದ್ದ ಜನ

|
Google Oneindia Kannada News

ಮುಂಬೈ, ಮೇ 22: ಬಾಲಿವುಡ್ ನಟ ಸಲ್ಮಾನ್ ಖಾನ್ ಉಚಿತವಾಗಿ ಆಹಾರ ಹಾಗೂ ಹಣವನ್ನು ನೀಡುತ್ತಾರೆ ಎಂಬ ಸುಳ್ಳು ವದಂತಿಯನ್ನು ನಂಬಿ ನೂರಾರು ಸಂಖ್ಯೆಯ ಜನರು ಬುಧವಾರ ಸಂಜೆ ಮುಂಬೈನ ಭಿವಾಂಡಿಯಲ್ಲಿ ಸೇರಿದ್ದರು.

Recommended Video

ಎಂ.ಎಸ್.ಧೋನಿ ಬಗ್ಗೆ ಸುದೀಪ್ ಅಭಿಪ್ರಾಯವೇನು? | Oneindia Kannada

ರಂಜಾನ್ ಮನೆಯಲ್ಲೇ ಆಚರಣೆ ಮಾಡಿ: ಸಚಿವ ಪ್ರಭು ಚವ್ಹಾಣ್ ರಂಜಾನ್ ಮನೆಯಲ್ಲೇ ಆಚರಣೆ ಮಾಡಿ: ಸಚಿವ ಪ್ರಭು ಚವ್ಹಾಣ್

ಬುಧವಾರ ಸಂಜೆ ಭಿವಾಂಡಿಯ ಖಂಡಪುಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಂಜಾನ್ ವಿಶೇಷವಾಗಿ, ಹಬ್ಬಕ್ಕೂ ಮುಂಚೆ ಸಲ್ಮಾನ್ ಖಾನ್ ಹಣ ಮತ್ತು ಆಹಾರವನ್ನು ವಿತರಿಸಲಿದ್ದಾರೆ ಎನ್ನುವ ಸುದ್ದಿವೊಂದು ಹರಿದಾಡಿತ್ತು. ಹೀಗಾಗಿ, ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಜನರ ಗುಂಪಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚಿದ್ದರು. ಕೊರೊನಾ ದೊಡ್ಡ ಮಟ್ಟಕ್ಕೆ ಏರಿಕೆ ಕಂಡರೂ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್‌ ಧರಿಸುವುದನ್ನು ಮರೆತ್ತಿದ್ದರು. ಕೊರೊನಾ ವೈರಸ್‌ ತಡೆಗಟ್ಟಲು ಇರುವ ನಿಯಮಗಳನ್ನು ಪಾಲನೆ ಮಾಡಲಿಲ್ಲ.

Salman Khan Was Distributing Money Rumour Thousands Of People Gathered On Bhiwandi

ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಜನರ ಗುಂಪನ್ನು ಚದುರಿಸಿದ್ದಾರೆ. ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಪತ್ರಕರ್ತರೊಬ್ಬರು ಅಲ್ಲಿನ ವಿಡಿಯೋ ಮಾಡಿದ್ದು, ಆ ವೇಳೆ ಮಹಿಳೆಯೊಬ್ಬರು ಸಲ್ಮಾನ್ ಹಣ, ಆಹಾರ ನೀಡುತ್ತಾರೆ ಎಂದರು ಅದಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

English summary
Actor Salman Khan was distributing free food and money rumour, thousands of people gathered on Bhiwandi, Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X