• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಫ್ಯಾನ್' ಪರ ನಿಂತ ಸಲ್ಮಾನ್, ಬಾಡಿಗಾರ್ಡ್ ಕೆನ್ನೆಗೆ ಬಾರಿಸಿದ

|

ಮುಂಬೈ, ಜೂನ್ 06: ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತೆ ಬೇಡದ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ಸಲ್ಮಾನ್ ಅವರು ತಮ್ಮ ಬಾಡಿಗಾರ್ಡ್ ಕೆನ್ನೆಗೆ ಬಾರಿಸಿದ ವಿಡಿಯೋ ವೈರಲಾಗುತ್ತಿದೆ.

ಈದ್ ಸಂಭ್ರಮದಲ್ಲಿ ತೆರೆ ಕಂಡ 'ಭಾರತ್ 'ಚಿತ್ರದ ಪ್ರಚಾರಕ್ಕಾಗಿ ಮುಂಬೈನ ಚಿತ್ರಮಂದಿರಕ್ಕೆ ತೆರಳಿ ಹೊರ ಬರುವಾಗ ಈ ಘಟನೆ ನಡೆದಿದೆ. ಅಪಾರ ಅಭಿಮಾನಿಗಳ ಸಮೂಹದಲ್ಲಿದ್ದ ಪುಟ್ಟ ಅಭಿಮಾನಿಯೊಬ್ಬಳನ್ನು ಬಾಡಿಗಾರ್ಡ್ ತಳ್ಳಾಡಿದ್ದೇ ಸಲ್ಮಾನ್ ಸಿಟ್ಟಿಗೇಳಲು ಕಾರಣ, ಅಭಿಮಾನಿಯ ಜೊತೆ ಬಾಡಿಗಾರ್ಡ್ ನಡೆದುಕೊಂಡ ರೀತಿಗೆ ಪೆಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ.

ತಬು, ಸೈಫ್, ನೀಲಂ, ಸೋನಾಲಿಗೆ ಕೋರ್ಟಿನಿಂದ ನೋಟಿಸ್

ಸಲ್ಮಾನ್ ಖಾನ್ ಅವರು ಹಲ್ಲೆ ಮಾಡಿದ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಬಾಡಿಗಾರ್ಡ್ ಶೇರಾ, ಇದು ಭಾಯ್ ಸಹಜವಾಗಿ ಪ್ರತಿಕ್ರಿಯೆ ಇದನ್ನು ಸುಮ್ಮನೆ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ವಿರುದ್ಧ ದೂರು ನೀಡಿದ ಪತ್ರಕರ್ತ

ವಿಡಿಯೊದಲ್ಲೇನಿದೆ?: ಸಲ್ಮಾನ್ ಅವರು ತಮ್ಮ ವಾಹನವಿದ್ದ ಕಡೆಗೆ ನಡೆದುಕೊಂಡು ಬರುವಾಗ ಬಾಡಿಗಾರ್ಡ್ ಗಳು ಜನಸಂದಣಿಯನ್ನು ತೆರವುಗೊಳಿಸಲು ತೊಡಗುತ್ತಾರೆ. ಈ ಸಂದರ್ಭದಲ್ಲಿ ಪುಟ್ಟ ಮಕ್ಕಳು, ಯುವತಿಯರಿದ್ದ ಗುಂಪನ್ನು ಒರಟಾಗಿ ಚದುರಿಸುತ್ತಾರೆ. ಇದರಿಂದ ಕೋಪಗೊಂಡ ಸಲ್ಮಾನ್ ಆ ಬಾಡಿಗಾರ್ಡಿಗೆ ಕೆನ್ನೆಗೆ ಬಾರಿಸಿ ತೆರಳುತ್ತಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಲ್ಮಾನ್ ಪರ ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ.

ಸಮೀನಾ ಶೇಖ್ ಟ್ವೀಟ್ ಮಾಡಿ

ಬಾಂಬೆ ಟೈಮ್ಸ್ ಆನ್ ಲೈನ್ ನ ಸಂಪಾದಕಿ ಸಮೀನಾ ಶೇಖ್ ಟ್ವೀಟ್ ಮಾಡಿ, ಸಲ್ಮಾನ್ ಅವರು ಮಾಡಿದ್ದು ಸರಿಯಾಗಿದೆ. ಸಲ್ಮಾನ್ ಕಂಡರೆ ಆಗದವರು ನೆಗಟಿವ್ ಸ್ಟೋರಿಸ್ ಮಾಡಿ, ಬೇಕಾದ ಕಥೆ ಕಟ್ಟಲಿ, ಜನಸಂದಣಿಯಲ್ಲಿ ಮಕ್ಕಳನ್ನು ಸರಿಯಾಗಿ ನಿಭಾಯಿಸಲು ಆಗದಿದ್ದಕ್ಕೆ ಸಲ್ಮಾನ್ ಅವರು ತಮ್ಮ ಬಾಡಿಗಾರ್ಡ್ ಮೇಲೆ ಹಲ್ಲೆ ಮಾಡಿದ್ದು ಎಂಬುದು ಸ್ಪಷ್ಟವಾಗಿದೆ, ಇಷ್ಟು ಸಾಕು. ಸಲ್ಮಾನ್ ಖಾನ್ ಅವರು ಮಕ್ಕಳ ಮೇಲಿನ ಪ್ರೀತಿಯನ್ನು ಇಲ್ಲಿ ವಿವರಿಸಬೇಕಾಗಿಲ್ಲ

ಸಲ್ಮಾನ್ ಖಾನ್ ಗೆ ಮಾತ್ರ ಈ ರೀತಿ ಮಾಡಲು ಸಾಧ್ಯ

ಫ್ಯಾನ್ಸ್ ಪರ ನಿಂತು ತನ್ನ ಕಾಯುವ ಬಾಡಿಗಾರ್ಡ್ ಗಳಿಗೆ ಪೆಟ್ಟು ಕೊಡಲು ಸಲ್ಮಾನ್ ಖಾನ್ ಗೆ ಮಾತ್ರ ಸಾಧ್ಯ. ಸಲ್ಮಾನ್ ಖಾನ್ ಅಂದರೆ ಹಾಗೆ, ಅರ್ಥ ಮಾಡಿಕೊಂಡವರಿಗೆ ಮಾತ್ರ ಈ ಘಟನೆ ಬಗ್ಗೆ ತಿಳಿಯುತ್ತದೆ. ಇಲ್ಲಾಂದ್ರೆ ಬರಿ ಕತೆಗಳು ಹುಟ್ಟುತ್ತವೆ ಎಂದು ಸಲ್ಮಾನ್ ಪರ ಮತ್ತೊಂದು ಟ್ವೀಟ್.

ಕೆನ್ನೆಗೆ ಹೊಡೆದ ಸಲ್ಮಾನ್ ಖಾನ್ ನ ಮತ್ತೆ ಜೈಲಿಗೆ ತಳ್ಳಿ

ಕೆನ್ನೆಗೆ ಹೊಡೆದ ಸಲ್ಮಾನ್ ಖಾನ್ ನ ಮತ್ತೆ ಜೈಲಿಗೆ ತಳ್ಳಿ, ಸಾರ್ವಜನಿಕ ಸ್ಥಳದಲ್ಲಿ ಸೆಲೆಬ್ರಿಟಿಗಳು ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನವಿಲ್ಲ ಈ ನಟನಿಗೆ, ಇಂಥ ದುರ್ವತನೆ ಸಹಿಸಲು ಸಾಧ್ಯವಿಲ್ಲ, ಸಲ್ಮಾನ್ ವಿರುದ್ಧ ಆ ಬಾಡಿಗಾರ್ಡ್ ಮಾನನಷ್ಟ ಮೊಕದ್ದಮೆ ಹಾಕಬೇಕು. ಜನಸಂದಣಿ ಕ್ಲಿಯರ್ ಮಾಡುವುದೇ ಬಾಡಿಗಾರ್ಡ್ ಕೆಲಸ, ತಪ್ಪು ನಡೆದಿದ್ದರೆ, ಅದನ್ನು ತಾಳ್ಮೆಯಿಂದ ಸರಿಪಡಿಸಬಹುದಾಗಿತ್ತು ಎಂದು ಸಲ್ಮಾನ್ ನಡೆ ವಿರೋಧಿಸಿ ಟ್ವೀಟ್.

ಬಾಡಿಗಾರ್ಡಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ

ಬಾಡಿಗಾರ್ಡಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಸಲ್ಮಾನ್ ಅವರು ಮಾಡಿದ್ದು ಸರಿಯೋ ತಪ್ಪೋ ಎಂಬ ಚರ್ಚೆಯೂ ಮುಂದುವರೆದಿದೆ. ಸಲ್ಮಾನ್ ಪರ ಫ್ಯಾನ್ ಟ್ವೀಟ್ ಮಾಡಿದ್ದಾರೆ.

English summary
A video of Salman Khan slapping a security guard for allegedly manhandling a young fan has created quite a stir on social media.The incident is said to have taken place during the premiere of "Bharat", which released on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X