ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೆಗಾಂವ್ ಸ್ಫೋಟದ ಬಗ್ಗೆ ಗೊತ್ತೇ ಇಲ್ಲ ಎಂದ ಸಂಸದೆ ಸಾಧ್ವಿ ಪ್ರಗ್ಯಾ

|
Google Oneindia Kannada News

ಮುಂಬೈ, ಜೂನ್ 7: ಕಳೆದ ಎರಡು ವಾರ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರಾದರು.

ಈ ವೇಳೆ ಎನ್‌ಐಎ ವಿಶೇಷ ನ್ಯಾಯಾಧೀಶ ವಿಎಸ್ ಪಡಾಲ್ಕರ್, ಸ್ಫೋಟಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳುವುದು ಇದೆಯೇ ಎಂದು ಪ್ರಶ್ನಿಸಿದಾಗ ಸಾಧ್ವಿ 'ನನಗೇನೂ ಗೊತ್ತಿಲ್ಲ' ಎಂದು ಉತ್ತರಿಸಿದರು.

'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!

ಸಾಧ್ವಿ ಅವರಿಗೆ ಕೂರಲು ಅನುಕೂಲವಾಗುವಂತೆ ಬೆಂಚ್‌ನ ಮೇಲೆ ಕೇಸರಿ ಬಣ್ಣದ ಮೃದುವಾದ ಬಟ್ಟೆ ಹಾಸಲಾಗಿತ್ತು. ಕೇಸರಿ ಉಡುಪು ಧರಿಸಿ ಬಂದಿದ್ದ ಸಾಧ್ವಿ ಅವರನ್ನು ಆರೋಪಿ ಕಟಕಟೆಗೆ ಬರುವಂತೆ ಸೂಚಿಸಲಾಯಿತು. ವಿಚಾರಣೆ ವೇಳೆ 2008ರ ಸೆಪ್ಟೆಂಬರ್ 29ರಂದು ನಡೆದ ಸ್ಫೋಟದ ಬಗ್ಗೆ ತಿಳಿದಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.

Sadhvi pragya singh nia court said no idea on Malegaon blast

ಈ ಸಂದರ್ಭದಲ್ಲಿ ಕರ್ಚೀಫ್ ತೆಗೆದ ಸಾಧ್ವಿ ಮುಖ ಒರೆಸಿಕೊಂಡರು. '116 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಹೇಳಿಕೆಯಂತೆ ಬಾಂಬ್ ಸ್ಫೋಟ ಸಂಭವಿಸಿದೆ. ಅದನ್ನು ಯಾರು ಮಾಡಿದ್ದು ಎಂದು ನಾನು ಕೇಳುತ್ತಿಲ್ಲ. 2008 ಸೆಪ್ಟೆಂಬರ್‌ನಲ್ಲಿ ಬಾಂಬ್ ಸ್ಫೋಟ ನಡೆದಿದ್ದರ ಬಗ್ಗೆ ನಿಮಗೆ ಗೊತ್ತಿದೆಯೇ?' ಎಂದು ನ್ಯಾಯಾಧೀಶರು ಕೇಳಿದರು. ಆಗ ಸಾಧ್ವಿ 'ನನಗೆ ಯಾವುದೇ ಮಾಹಿತಿ ಇಲ್ಲ; ಎಂದರು.

ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ

ಪ್ರಕರಣದ ವಿಚಾರಣೆ ಕುರಿತು ಕೇಳಿದಾಗ ನ್ಯಾಯಾಲಯವು ಎಷ್ಟು ಜನ ಸಾಕ್ಷಿಗಳನ್ನು ವಿಚಾರಣೆ ಮಾಡಿದೆ ಎಂಬುದು ತಮಗೆ ಅರಿವಿಲ್ಲ ಎಂದು ಹೇಳಿದರು.

ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ

ಸಾಧ್ವಿ ಅವರು ಗುರುವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದರಿಂದ ವಿನಾಯಿತಿ ನೀಡಬೇಕು ಎಂದು ವಕೀಲರು ಕೋರಿದ್ದರು. ಒಂದು ದಿನದ ವಿನಾಯಿತಿ ನೀಡುತ್ತೇನೆ. ಆದರೆ, ಶುಕ್ರವಾರವೂ ಗೈರಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದರು.

English summary
BJP MP Sadhvi Pragya Singh Thakur on Friday appeared befor special NIA court. She said that she dont know about Malegaon bomb blast, when the court asked on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X