• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಧೇರಿಯಲ್ಲಿ ಸಚಿನ್ ಸ್ಟಾರ್ ನೈಟ್

By Mahesh
|

ಮುಂಬೈ, ನ.19: ಕ್ರಿಕೆಟ್ ಗೆ ವಿದಾಯ ಹೇಳಿದ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶೇಷ ಭೋಜನ ಕೂಟ ಆಯೋಜಿಸಿದ್ದರು. ಬಾಲಿವುಡ್ ಅತಿರಥ-ಮಹಾರಥರ ಜತೆಗೆ ಟೀಂ ಇಂಡಿಯಾದ ಸದಸ್ಯರು ಆಗಮಿಸಿ ಸಚಿನ್ ಜತೆ ಸಂಭ್ರಮದಿಂದ ಕಾಲಕಳೆದರು.

ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ಸ್ಟಾರ್ ಹೊಟೇಲ್ ನಡೆದ ಭೋಜನಕೂಟದಲ್ಲಿ ಹಲವು ತಾರೆಗಳ ಮಧ್ಯೆ ಸಚಿನ್ ' ಮಿನುಗು ತಾರೆ' ಆಗಿ ಕಂಗೊಳಿಸಿದರು. ಬಾಲಿವುಡ್ ನ ಬಾದ್ ಷಾ ಅಮಿತಾಬ್ ಬಚ್ಚನ್, ಅಮೀರ್ ಖಾನ್, ರಾಹುಲ್ ಬೋಸ್, ಖ್ಯಾತ ನಿರ್ದೇಶಕ ಕರಣ್ ಜೋಹರ್, ತೆಂಡೂಲ್ಕರ್ ಅವರ ಕ್ರಿಕೆಟ್ ಗುರು ರಮಾಕಾಂತ ಆಚ್ರೇಕರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಪ್ಪು ಸೂಟ್ ಧರಿಸಿದ್ದ ತೆಂಡೂಲ್ಕರ್ ಕಪ್ಪು ಉಡುಗೆಯಲ್ಲೇ ಇದ್ದ ಪತ್ನಿ ಅಂಜಲಿ ಜತೆ ಸೇರಿ ಅತಿಥಿ ಗಣ್ಯರನ್ನು ಆಹ್ವಾನಿಸಿ ಭೋಜನ ಆತಿಥ್ಯ ಕೊಟ್ಟರು. ಕೇವಲ ಬಾಲಿವುಡ್ ನ ಖ್ಯಾತ ನಾಮರ ಜತೆಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್, ರಾಜ್ ಠಾಕ್ರೆ, ಕ್ರಿಕೆಟಿಗರಾದ ಸುನೀಲ್ ಗಾವಸ್ಕರ್, ಕೆ.ಶ್ರೀಕಾಂತ್, ಸಂದೀಪ್ ಪಾಟೀಲ್,ಸೌರವ್ ಗಂಗೂಲಿ, ವಿ.ವಿ.ಎಸ್.ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಮುಂಬೈ ಇಂಡಿಯನ್ ಒಡತಿ ನೀತಾ ಅಂಬಾನಿ, ಸಹಾರಾ ಸಂಸ್ಥೆಯ ಸುಬ್ರತೋ ರಾಯ್, ಗಾಯಕಿ ಆಶಾಬೋಸ್ಲೆ ಮತ್ತಿತರರು ಸಾಕ್ಷಿಯಾದರು. ಟೀಂ ಇಂಡಿಯಾದಿಂದ ಯಾರು ಬಂದಿದ್ದರು., ಸಚಿನ್ ಹೇಳಿಕೆ ಮುಂತಾದ ಸಚಿತ್ರ ವಿವರ ಮುಂದೆ ಓದಿ...

ವಿರಾಟ್ ಕೊಹ್ಲಿ ಆಗಮನ

ವಿರಾಟ್ ಕೊಹ್ಲಿ ಆಗಮನ

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್, ರೋಹಿತ್ ಶರ್ಮ ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು. ದಿನವಿಡೀ ಬ್ಯುಸಿಯಾಗಿದ್ದ ಭಾರತ ರತ್ನ ತೆಂಡೂಲ್ಕರ್ ಗೆ ಇದು ಭಾವನಾತ್ಮಕ ಕಾರ್ಯಕ್ರಮವೇ ಆಗಿತ್ತು. ಕ್ರಿಕೆಟ್ ವಲಯದ ಎಲ್ಲ ಗಣ್ಯರು, ಗೆಳೆಯರು ಸಚಿನ್ ರನ್ನು ಭೋಜನ ಕೂಟದಲ್ಲೂ ಹಾಡಿ ಹೊಗಳಿದರು.

ಧೋನಿ ಆಗಮನ

ಧೋನಿ ಆಗಮನ

24 ವರ್ಷಗಳ ಕಾಲ ಸತತವಾಗಿ ಭಾರತಕ್ಕೆ ಆಡಿದ ತೃಪ್ತಿ ಇದೆ. ನನಗೀಗ ಕನಿಷ್ಠ 24 ದಿನಗಳ ವಿಶ್ರಾಂತಿಯ ಅಗತ್ಯವಿದೆ. ನಂತರವಷ್ಟೇ ನನ್ನ ನಡೆಯ ಬಗ್ಗೆ ತಿಳಿಸಲು ಸಾಧ್ಯ ಎಂದು ಮಾಧ್ಯಮಗಳಿಗೆ ಸಚಿನ್ ಉತ್ತರಿಸಿದರು.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಇದೊಂದು ಖಾಸಗಿ ಸಮಾರಂಭವಾಗಿದ್ದು, ಯಾವುದೇ ಮಾಧ್ಯಮ ಸಂಸ್ಥೆಗಳಿಗೆ ಕಾರ್ಯಕ್ರಮದ ವರದಿ ಪ್ರಸಾರಕ್ಕೆ ಅನುಮತಿ ನೀಡಿರಲಿಲ್ಲ. ಬಿಗಿ ಭದ್ರತೆ ನಡುವೆ ಭೋಜನಕೂಟ ಸಾಂಗವಾಗಿ ಸಾಗಿತ್ತು. ಅನ್ನದಾತ ಸುಖಿಭವ ಎಂದು ಸಚಿನ್ ದಂಪತಿಯನ್ನು ಎಲ್ಲರೂ ಹರಸಿ ಹೋದರಂತೆ.

ಸಚಿನ್ ಆಗಮನ

ಸಚಿನ್ ಆಗಮನ

ಅತಿಥೇಯ ಸಚಿನ್ ಅವರು ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಜತೆ ಆಗಮಿಸಿದರು

ಗಾಯಕ ಸೋನು ನಿಗಮ್

ಗಾಯಕ ಸೋನು ನಿಗಮ್

ಸಚಿನ್ ಆಯೋಜಿಸಿದ್ದ ಭೋಜನಕೂಟದಲ್ಲಿ ಗಣ್ಯರು

ಸಚಿನ್ ಪುತ್ರಿ

ಸಚಿನ್ ಪುತ್ರಿ

ಅತಿಥೇಯ ಸಚಿನ್ ಅವರು ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಜತೆ ಆಗಮಿಸಿದರು

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಸಚಿನ್ ಆಯೋಜಿಸಿದ್ದ ಭೋಜನಕೂಟದಲ್ಲಿ ಗಣ್ಯರು

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಸಚಿನ್ ಆಯೋಜಿಸಿದ್ದ ಭೋಜನಕೂಟದಲ್ಲಿ ಗಣ್ಯರು

ಪತ್ನಿ ಜತೆ ಧೋನಿ

ಪತ್ನಿ ಜತೆ ಧೋನಿ

ಪತ್ನಿ ಸಾಕ್ಷಿ ಜತೆ ಆಗಮಿಸಿದ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ

ಕರಣ್ ಜೋಹರ್

ಕರಣ್ ಜೋಹರ್

ಸಚಿನ್ ಆಯೋಜಿಸಿದ್ದ ಭೋಜನಕೂಟದಲ್ಲಿ ಗಣ್ಯರು.. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ನಟ ಅರ್ಷದ್ ವಾರ್ಸಿ

ನಟ ಅರ್ಷದ್ ವಾರ್ಸಿ

ನಟ ಅರ್ಷದ್ ವಾರ್ಸಿ ಪತ್ನಿ ಮರಿಯಾ ಗೊರೆಟ್ಟಿ ಜತೆ

ಸಹಾರಾ ಸಂಸ್ಥೆ ಒಡೆಯ

ಸಹಾರಾ ಸಂಸ್ಥೆ ಒಡೆಯ

ಸಚಿನ್ ಸಂತೋಷ ಕೂಟಕ್ಕೆ ಸಹಾರಾ ಸಂಸ್ಥೆ ಒಡೆಯ ಸುಬ್ರತೋ ರಾಯ್ ಆಗಮನ

ಸಂಗೀತಗಾರ ಅನು ಮಲ್ಲಿಕ್

ಸಂಗೀತಗಾರ ಅನು ಮಲ್ಲಿಕ್

ಸಚಿನ್ ಸಂತೋಷ ಕೂಟಕ್ಕೆ ಸಂಗೀತಗಾರ ಅನು ಮಲ್ಲಿಕ್ ಆಗಮನ

ನಟ, ಚಿತ್ರಕರ್ಮಿ ಫರಾನ್ ಅಖ್ತರ್

ನಟ, ಚಿತ್ರಕರ್ಮಿ ಫರಾನ್ ಅಖ್ತರ್

ಸಚಿನ್ ಸಂತೋಷ ಕೂಟಕ್ಕೆ ನಟ, ಚಿತ್ರಕರ್ಮಿ ಫರಾನ್ ಅಖ್ತರ್ ಆಗಮನ

ಜಯಾ ಬಚ್ಚನ್ ಆಗಮನ

ಜಯಾ ಬಚ್ಚನ್ ಆಗಮನ

ಸಚಿನ್ ಸಂತೋಷ ಕೂಟಕ್ಕೆ ಜಯಾ ಬಚ್ಚನ್ ಆಗಮನ

ಅಭಿಷೇಕ್ ಬಚ್ಚನ್ ಆಗಮನ

ಅಭಿಷೇಕ್ ಬಚ್ಚನ್ ಆಗಮನ

ಸಚಿನ್ ಸಂತೋಷ ಕೂಟಕ್ಕೆ ಅಭಿಷೇಕ್ ಬಚ್ಚನ್ ಆಗಮನ

ಐಶ್ವರ್ಯಾ ರೈ ಆಗಮನ

ಐಶ್ವರ್ಯಾ ರೈ ಆಗಮನ

ಸಚಿನ್ ಸಂತೋಷ ಕೂಟಕ್ಕೆ ಐಶ್ವರ್ಯಾ ರೈ ಬಚ್ಚನ್ ಆಗಮನ

ಬಿಗ್ ಬಿ ಆಗಮನ

ಬಿಗ್ ಬಿ ಆಗಮನ

ಸಚಿನ್ ಸಂತೋಷ ಕೂಟಕ್ಕೆ ಬಿಗ್ ಬಿ ಅಮಿತಾಬ್

ಪತ್ನಿ ಜತೆ ಅಮೀರ್

ಪತ್ನಿ ಜತೆ ಅಮೀರ್

ಸಚಿನ್ ಸಂತೋಷ ಕೂಟಕ್ಕೆ ಪತ್ನಿ ಕಿರಣ್ ರಾವ್ ಜತೆ ಅಮೀರ್ ಖಾನ್ ಆಗಮನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bollywood celebrities business tycoons, politicians and members of the team India were in attendance at a dinner party thrown by Sachin Tendulkar in a hotel in Andheri East on Monday(Nov.18). Here are the pictures from the event
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more