ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠ್ಯ ಪುಸ್ತಕ ಸೇರಿದ 'ಕ್ರಿಕೆಟ್ ದೇವರು' ಸಚಿನ್

By Mahesh
|
Google Oneindia Kannada News

ಮುಂಬೈ, ಮೇ.28: ಕ್ರಿಕೆಟ್ ಜಗತ್ತಿನ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ ಕೊನೆಗೂ ಪಠ್ಯ ಪುಸ್ತಕವಾಗಿದೆ. ಮಹಾರಾಷ್ಟ್ರ ಸರ್ಕಾರ ಸುಮಾರು ಒಂದೂವರೆ ವರ್ಷದ ನಂತರ ಹಲವು ವರ್ಷಗಳ ಬೇಡಿಕೆಯನ್ನು ಪುರಸ್ಕರಿಸಿದೆ.

ಮಹಾರಾಷ್ಟ್ರ ಸರ್ಕಾರ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಇನ್ಮುಂದೆ ಸಚಿನ್ ಅವರ ಕ್ರಿಕೆಟ್ ವೃತ್ತಿ ಬದುಕಿನ ಕೆಲವು ಪ್ರಮುಖ ಅಂಶಗಳನ್ನು ಪಠ್ಯ ರೂಪದಲ್ಲಿ ಓದಬಹುದಾಗಿದೆ. ಮರಾಠಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಚಿನ್ ಕುರಿತ ಪಾಠಗಳು ಓದಲು ಸಿಗಲಿವೆ. ಈ ವರ್ಷದ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಮಹಾರಾಷ್ಟ್ರ ಶಿಕ್ಷಣ ಸಚಿವ ರಾಜೇಂದ್ರ ದರ್ದಾ ಅವರು ಪಿಟಿಐಗೆ ಹೇಳಿದ್ದಾರೆ.

Sachin Tendulkar Features in Maharashtra's School Textbooks

ಭಾರತ ಕ್ರಿಕೆಟ್ ನ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಕೆಲವು ಅಂಶಗಳನ್ನು ಶಾಲಾ ಪಠ್ಯ ಕ್ರಮದಲ್ಲಿ ಸೇರಿಸಲು ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷವೇ ನಿರ್ಧರಿಸಿತ್ತು. ತಾಂತ್ರಿಕ ತೊಂದರೆಯಿಂದ ಮುಂದಿನ ಶೈಕ್ಷಣಿಕ ವರ್ಷದ ತನಕ ಕಾಯಬೇಕು. ಮಹಾರಾಷ್ಟ್ರದಲ್ಲಿನ ಶಾಲಾ ಮಕ್ಕಳು ಸಚಿನ್ ಬಗ್ಗೆ ಪಾಠ ಕೇಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಮಕ್ಕಳು ಅವರಿಂದ ಪ್ರೇರೆಪಿತರಾಗುವ ವಿಶ್ವಾಸವಿದೆ ಎಂದು ಶಾಲಾ ಶಿಕ್ಷಣ ಸಚಿವ ರಾಜೇಂದ್ರ ದಾರ್ದಾ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕ್ರಿಕೆಟ್ ಜಗತ್ತಿನ 'ವಾಲ್' ಭಾರತೀಯ ಕ್ರಿಕೆಟ್ ನ ಅದ್ಭುತ ಆಟಗಾರ, ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಸಾಧನೆ ಈಗ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯವಿದೆ. ಹತ್ತನೇ ತರಗತಿಯ ಎರಡನೇ ಭಾಷಾ ವಿಷಯ ಕನ್ನಡದಲ್ಲಿ ರಾಹುಲ್ ಬಗ್ಗೆ ಓದಬಹುದು ಎಂಬ ಸಂತಸದ ಸುದ್ದಿ ಬಂದಿತ್ತು. ಇದರ ಬೆನ್ನಲ್ಲೇ ಸಚಿನ್ ಕುರಿತಂತೆ ಪಾಠ ಕೇಳುವ ಸೌಭಾಗ್ಯ ಮಕ್ಕಳಿಗೆ ಸಿಕ್ಕಿದೆ.

ಕ್ರಿಕೆಟ್ ಪಟುವೊಬ್ಬರ ಬಗ್ಗೆ ಪಠ್ಯಕ್ರಮದಲ್ಲಿ ಅಳವಡಿಸಿರುವುದು ಇದೇ ಮೊದಲಲ್ಲ ಈ ಹಿಂದೆ ಚಂದ್ರಕಾಂತ್ ಗುಲಬ್ರೋ 'ಚಂದು' ಬೊರ್ಡೆ ಮತ್ತು ಸುನಿಲ್ ಗವಾಸ್ಕರ್ ಕುರಿತು ಪಾಠಗಳು ಬಂದಿವೆ. ಈ ನಡುವೆ ಸಚಿನ್ ಕುರಿತಂತೆ ಪಾಠಗಳು ಮಕ್ಕಳು ಓದುವಂತಾಗಲು ಮಹಾರಾಷ್ಟ್ರ ನವನಿರ್ಮಾನ್ ಸೇನಾ ನಡೆಸಿದ ಹೋರಾಟವೇ ಕಾರಣ ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

English summary
The Maharashtra government has added a chapter on Sachin Tendulkar in the school syllabus so that children are inspired by the iconic cricketer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X