ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಗೆ ಸೇರಿದ ಹೋಟೆಲ್ ಖರೀದಿಸಿದ ಮಾಜಿ ಪತ್ರಕರ್ತ

By Mahesh
|
Google Oneindia Kannada News

ನವದೆಹಲಿ, ಡಿ. 10: ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಒಡೆತನದಲ್ಲಿರುವ ಆಸ್ತಿ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಆರಂಭವಾಗಿದೆ. ಈ ಮೂಲಕ ಮೋದಿ ಸರ್ಕಾರ ದಾವೂದ್ ಆಸ್ತಿ ಜಪ್ತಿ ಕಾರ್ಯಕ್ಕೆ ಚಾಲನೆ ನೀಡಿದೆ.

ದಕ್ಷಿಣ ಮುಂಬೈಯಲ್ಲಿರುವ ಹೋಟೆಲ್ ಕಟ್ಟಡ ಸೇರಿದಂತೆ ಏಳು ಸ್ಥಿರಾಸ್ತಿ ಹಾಗೂ ನಗರದ ಹೊರವಲಯದಲ್ಲಿರುವ ನಾಲ್ಕು ಕಟ್ಟಡಗಳು ಹರಾಜಿಗಿಡಲಾಗಿತ್ತು. ಈ ಪೈಕಿ ಹೋಟೆಲ್ ರನೌಕ್ ಅಫ್ರೋಜ್ (ಈಗಿನ ಹೆಸರು ದೆಹಲಿ ಜೈಕಾ)ಗೆ ಮಾಜಿ ಪತ್ರಕರ್ತ ಹಾಲಿ ಎನ್ ಜಿಒ ಸದಸ್ಯ ಎಸ್ ಬಾಲಕೃಷ್ಣನ್ ಅವರು 4.28 ಕೋಟಿ ರು ಬಿಡ್ ಮಾಡಿ ಗೆದ್ದುಕೊಂಡಿದ್ದಾರೆ.[ಇಂಟರ್ ಪೋಲ್ ನಿಂದ ಮೋದಿಗೆ ಭರವಸೆ : ದಾವೂದ್ ಸೆರೆ ಖಚಿತ]

ಹೋಟೆಲ್ ಅಲ್ಲದೆ ನಾನಿ ದಮನ್, ದಮನ್ ಹಾಗೂ ದಿಯುನಲ್ಲಿರುವ ಕೃಷಿ ಭೂಮಿ, ಮಾತುಂಗಾದ ಕಟ್ಟಡ, 2000 ಇಸವಿ ಮಾಡೆಲ್ ಹ್ಯುಂಡೈ ಅಕ್ಸೆಂಡ್ ಸೀಡನ್ ಕಾರು (4,000 ರೂ.ಮೂಲ ಹಣ ನಿಗದಿ) ಹರಾಜಿಗೆ ಇಡಲಾಗಿತ್ತು.

ಮುಂಬೈನ ಮಾತುಂಗಾದಲ್ಲಿನ ಹೊಟೇಲ್ ಹರಾಜಿನಲ್ಲಿ ಪತ್ರಕರ್ತ ಹಾಲಿ ಎನ್ ಜಿಒ ವೊಂದರ ಮುಖ್ಯಸ್ಥ ಎಸ್.ಬಾಲಕೃಷ್ಣನ್, ದೆಹಲಿ ಮೂಲದ ನ್ಯಾಯವಾದಿ ಅಜಯ್ ಶ್ರೀವಾಸ್ತವ, ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ಮುಂತಾದವರು ಬಿಡ್ ಮಾಡಿದ್ದರು.

ಧಾಟ್ಕೋಪಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ

ಧಾಟ್ಕೋಪಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ

1980ರಲ್ಲಿ ಇದೇ ಕಟ್ಟಡದಲ್ಲಿ ಪಾತಕಿ ದಾವೂದ್ ನೆಲೆಸಿದ್ದ. ಇದು ಧಾಟ್ಕೋಪಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. 1993 ಮುಂಬೈ ಸ್ಫೋಟ ಪ್ರಕರಣದ ಪ್ರಧಾನ ಆರೋಪಿಯಾಗಿರುವ ದಾವೂದ್ ಭಾರತದಿಂದ ಪಲಾಯನಗೈದ ಬಳಿಕ ಖಾಲಿ ಬಿದ್ದಿತ್ತು. ಕಟ್ಟಡವನ್ನು ಬಾಡಿಗೆಗೆ ಪಡೆದವರು ರನೌಕ್ ಅಫ್ರೋಜ್ ಎಂಬ ಹೆಸರನ್ನು ಬದಲಿಸಿ ದೆಹಲಿ ಜೈಕಾ ಎಂದು ಹೆಸರಿಟ್ಟಿದ್ದರು.

ಎನ್ ಜಿಒ ದೇಶ್ ಸೇವಾ ಸಮಿತಿ ಬಿಡ್ಡಿಂಗ್ ವಿನ್ನರ್

ಎನ್ ಜಿಒ ದೇಶ್ ಸೇವಾ ಸಮಿತಿ ಬಿಡ್ಡಿಂಗ್ ವಿನ್ನರ್

ಎಸ್ ಬಾಲಕೃಷ್ಣನ್ ಅವರ ಎನ್ ಜಿಒ ದೇಶ್ ಸೇವಾ ಸಮಿತಿ ಅಲ್ಲದೆ ಮತ್ತಿಬ್ಬರು ಇ ಹರಾಜಿನಲ್ಲಿ ಪಾಲ್ಗೊಂಡಿದ್ದರು. 2.52 ಕೋಟಿ ರು ಹಾಗೂ 1.72 ಕೋಟಿ ರು ಕೂಗಿದ್ದರು. ಎನ್ಜಿಒ ಅಧಿಕ ಮೊತ್ತ ಬಿಡ್ ಮಾಡಿ ಕಟ್ಟಡವನ್ನು ಸರ್ಕಾರದಿಂದ(ವಿತ್ತ ಸಚಿವಾಲಯ) ತನ್ನ ವಶಕ್ಕೆ ತೆಗೆದುಕೊಂಡಿದೆ.

ಹೋಟೆಲ್ ನಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್

ಹೋಟೆಲ್ ನಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್

ದಾವೂದ್ ಸೇರಿದ್ದ ಹೋಟೆಲ್ ನಲ್ಲಿ ಇನ್ಮುಂದೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಕಂಪ್ಯೂಟರ್ ಶಾಲೆ ಆರಂಭಿಸಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಅಥವಾ ಕೋಮು ಭಾವನೆ ಇಲ್ಲ, ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ಖರೀದಿಸಿಲ್ಲ. ಭೆಂಡಿ ಬಜಾರ್ ನ ಜನರಿಗೆ ಉಪಯೋಗವಾಗಬೇಕು ಎಂದು ಬಾಲಕೃಷ್ಣನ್ ಹೇಳಿದ್ದಾರೆ.

 ಹಿಂದೂ ಮಹಾಸಭಾ ಅಧ್ಯಕ್ಷರಿಗೆ ಕಾರು

ಹಿಂದೂ ಮಹಾಸಭಾ ಅಧ್ಯಕ್ಷರಿಗೆ ಕಾರು

ದಾವೂದ್ ಒಡೆತನದ 15 ವರ್ಷಗಳ ಹಿಂದಿನ ಕಾರು ಹೈಯುಂಡೈ ಆಕ್ಸೆಂಟ್ ಸೀಡನ್‌ನ್ನೂ ಹರಾಜು ಮಾಡಲಾಗಿದೆ. ಇದಕ್ಕೆ 4,000 ರೂ.ಮೂಲಹಣವನ್ನು ನಿಗದಿಪಡಿಸಲಾಗಿತ್ತು. ಮಾಜಿ ಪತ್ರಕರ್ತನಲ್ಲದೆ, ವಕೀಲರು ಬಿಡ್ಡರ್‌ಗಳಾಗಿ ಪಾಲ್ಗೊಂಡಿದ್ದರು. ದೆಹೆಲಿಯ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಮಣಿ ಅವರು 32 ಸಾವಿರಕ್ಕೆ ಕಾರು ಗೆದ್ದುಕೊಂಡಿದ್ದಾರೆ.

ಹೋಟೆಲ್ ಗೆ ಸ್ವಾತಂತ್ರ್ಯ ಯೋಧರ ಹೆಸರು

ಹೋಟೆಲ್ ಗೆ ಸ್ವಾತಂತ್ರ್ಯ ಯೋಧರ ಹೆಸರು

1925ರ ಕಕೋರಿ ರೈಲು ದರೋಡೆ ಮಾಡಿ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಸ್ವಾತಂತ್ರ್ಯ ಯೋಧರಾದ ಅಷ್ಫಾಖುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಅವರ ಹೆಸರನ್ನು ಶಾಲೆಗಳಿಗೆ ಇಡಲಾಗುತ್ತದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ. ಎಲ್ಲೋ ಪಾಕಿಸ್ತಾನದಲ್ಲಿ ಕುಳಿತು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವುದನ್ನು ನೋಡಿಕೊಂಡು ಸುಮ್ಮನಿರಲಾಗದು. ಇಲ್ಲಿನ ಜನ ನೆಮ್ಮದಿಯಿಂದ ಓಡಾಡುವಂತಾಗಬೇಕು ಎಂದಿದ್ದಾರೆ.

English summary
S. Balakrishnan, a former journalist from Mumbai, on Wednesday made the winning bid of Rs. 4.28 crore for underworld don Dawood Ibrahim’s property — a restaurant — in an auction conducted by the Ministry of Finance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X