ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ವಿದರ್ಭದಲ್ಲಿ 57 ಕೋಟಿ ರೂ. ಸಂಗ್ರಹ

|
Google Oneindia Kannada News

ನಾಗ್ಪುರ, ಮಾರ್ಚ್ 25: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಮಹಾರಾಷ್ಟ್ರದ ವಿದರ್ಭದಲ್ಲಿ 57 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ದೇಣಿಗೆ ಅಭಿಯಾನದಲ್ಲಿ, 7,512 ಮಹಿಳೆಯರು ಸೇರಿದಂತೆ 70,796 ಆರ್‌ಎಸ್‌ಎಸ್ ಸ್ವಯಂಸೇವಕರು ವಿದರ್ಭದಲ್ಲಿ 12,310 ಗ್ರಾಮಗಳು ಮತ್ತು 27,67,991 ಕುಟುಂಬಗಳನ್ನು ಭೇಟಿ ನೀಡಿ 57 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ.

ಶ್ರೀಲಂಕಾದಲ್ಲಿ ಸೀತಾಮಾತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮಮಂದಿರಕ್ಕೆ ಬಳಕೆಶ್ರೀಲಂಕಾದಲ್ಲಿ ಸೀತಾಮಾತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮಮಂದಿರಕ್ಕೆ ಬಳಕೆ

ಈ ಕುರಿತು ಆರ್‌ಎಸ್‌ಎಸ್‌ನ ವಿದರ್ಭ 'ಪ್ರಾಂತ್ ಕಾರ್ಯವಾಹ' ದೀಪಕ್ ತಮ್‌ಶೆಟ್ಟಿವಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಮ ಮಂದಿರ ದೇಣಿ ಸಂಗ್ರಹಕ್ಕಾಗಿ 80,424 ಮಹಿಳೆಯರು ಸೇರಿದಂತೆ ಒಟ್ಟು 20,64,622 ಸ್ವಯಂಸೇವಕರು ದೇಶದ 5,45,737 ಗ್ರಾಮಗಳು ಮತ್ತು 12,42,21,214 ಕುಟುಂಬಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.

 RSS Workers Collected Rs 57 Cr In Vidarbha For Ram Temple

ವಿದರ್ಭ ಪ್ರದೇಶದ 11 ಜಿಲ್ಲೆಗಳಾದ ಯವತ್ಮಾಲ್, ಅಕೋಲಾ, ಅಮರಾವತಿ, ವಾರ್ಧಾ, ಬುಲ್ಖಾನಾ, ವಾಶಿಮ್, ನಾಗ್ಪುರ, ಚಂದ್ರಪುರ, ಭಂಡಾರ, ಗಡ್ಚಿರೋಲಿ ಮತ್ತು ಗೊಂಡಿಯಾದಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ, ಸೀತಾಮಾತೆ ತಂಗಿದ್ದ ಐತಿಹ್ಯವಿರುವ ಶ್ರೀಲಂಕಾದ ಸೀತಾ ಇಲಿಯಾದಲ್ಲಿನ ಅಶೋಕ ವಟಿಕದ ಕಲ್ಲೊಂದನ್ನು ಬಳಸಲು ತೀರ್ಮಾನಿಸಲಾಗಿದ್ದು, ಆ ಕಲ್ಲನ್ನು ಅಲ್ಲಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ.

English summary
Rashtriya Swayamsevak Sangh (RSS) volunteers have collected funds worth Rs 57 crore from 27 lakh families in Maharashtra''s Vidarbha region for the construction of Ram temple in Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X