ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ನೊಂದಿಗೆ ಆರ್‌ಎಸ್‌ಎಸ್‌ ಹೋಲಿಕೆ: ಜಾವೇದ್‌ ಅಖ್ತರ್‌ಗೆ ಶೋಕಾಸ್ ನೋಟಿಸ್

|
Google Oneindia Kannada News

ಥಾಣೆ, ಸೆಪ್ಟೆಂಬರ್ 28: ತಾಲಿಬಾನ್‌ನೊಂದಿಗೆ ಆರ್‌ಎಸ್‌ಎಸ್‌ ಹೋಲಿಕೆ ಮಾಡಿದ ಆರೋಪದ ಮೇಲೆ ಥಾಣೆ ಹೈಕೋರ್ಟ್ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಥಾಣೆ ಹೈಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿಶ್ವದಾದ್ಯಂತ ಬಲಪಂಥೀಯರು ಅಸಾಮಾನ್ಯ ಸಾಮ್ಯತೆಯನ್ನು ಹೊಂದಿದ್ದಾರೆ ಎಂದು 76 ವರ್ಷದ ಹಿರಿಯ ಗೀತೆ ರಚನೆಕಾರರಾಗಿರುವ ಜಾವೇದ್ ಅಖ್ತರ್ ಈ ತಿಂಗಳ ಆರಂಭದಲ್ಲಿ ಖಾಸಗಿ ಸುದ್ದಿ ವಾಹಿಯೊಂದಿಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಜಾವೇದ್‌ ಅಖ್ತರ್‌ಗೆ ಲೀಗಲ್ ನೋಟಿಸ್RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಜಾವೇದ್‌ ಅಖ್ತರ್‌ಗೆ ಲೀಗಲ್ ನೋಟಿಸ್

ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ಮಾಡಲು ಬಯಸುತ್ತಾರೆ ಎಂದು ನಾಗ್ಪುರ್ ಪ್ರಧಾನ ಕಚೇರಿಯ ಹಿಂದುತ್ವ ಸಂಘಟನೆಯ ಹೆಸರನ್ನು ಹೇಳದೆ ಜಾವೇದ್ ಅಖ್ತರ್ ಹೇಳಿದ್ದರು.

RSS-Taliban Remarks Thane Court Issues Notice To Javed Akhtar

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಜಂಟಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಸಲ್ಲಿಸಿರುವ ಮೊಕದ್ದಮೆಯಲ್ಲಿ 1 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ನವೆಂಬರ್ 12 ರಂದು ಹಿಂತಿರುಗಿಸಬಹುದಾದ ನೋಟಿಸ್ ನೀಡಲು ನ್ಯಾಯಾಲಯ ಆದೇಶಿಸಿದೆ.

ಈ ಹಿಂದೆ, ಮಹಾರಾಷ್ಟ್ರ ಬಿಜೆಪಿ ಜಾವೇದ್ ಅಖ್ತರ್ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದೆ. ಮಹಾರಾಷ್ಟ್ರದ ಶಾಸಕ ಮತ್ತು ಬಿಜೆಪಿ ವಕ್ತಾರ ರಾಮ್ ಕದಮ್ ಅವರು ಜಾವೇದ್ ಅಖ್ತರ್ ಆರ್‌ಎಸ್‌ಎಸ್‌ ಬಳಿ ಕ್ಷಮೆಯಾಚಿಸುವವರೆಗೂ ದೇಶದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದೆಂದು ತಿಳಿಸಿದ್ದರು.

ಜಾವೇದ್ ಅಖ್ತರ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಮತ್ತು "ಹಿಂದೂ ರಾಷ್ಟ್ರವನ್ನು ಬಯಸುವವರಿಗೆ" ಸೈದ್ಧಾಂತಿಕ ಸಾಮ್ಯತೆ ಇದೆ ಎಂದು ಹೇಳಿದ್ದರು. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಘಟನೆಯಾಗಿರುವ ಆರೆಸ್ಸೆಸ್, ಭಾರತವು ಹಿಂದೂ 'ರಾಷ್ಟ್ರ' ಅಥವಾ ರಾಜ್ಯ ಎಂದು ಬಹಳ ಹಿಂದಿನಿಂದಲೂ ನಂಬಿದೆ ಎಂದು ಅವರು ಹೇಳಿದರು. ರಾಮ್ ಕದಮ್ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ, ಅಖ್ತರ್ ಅವರ ಹೇಳಿಕೆ ನಾಚಿಕೆಗೇಡು ಎಂದು ಎಚ್ಚರಿಸಿದ್ದರು.

ಇದು ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಕಾರ್ಯಕರ್ತರಿಗೆ ಮತ್ತು ಅವರ ಸಿದ್ಧಾಂತವನ್ನು ನಂಬಿರುವ ಕೋಟಿಗಟ್ಟಲೆ ಜನರಿಗೆ ಅವಮಾನಕರವಾಗಿದೆ. ಮತ್ತೊಂದೆಡೆ, ಜಾವೇದ್ ಅಖ್ತರ್ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಜಾವೇದ್ ಅಖ್ತರ್ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಂಗನಾ ವಿರುದ್ಧ ಈ ಪ್ರಕರಣ ದಾಖಲಿಸಿದ್ದಾರೆ.

English summary
A Thane court on Monday ordered issuance of a show-cause notice to noted Bollywood lyricist Javed Akhtar on a defamation suit filed against him over his alleged remarks seeking to compare the RSS with the Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X