ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಘರ್ಷಣೆ ತಂದಿಟ್ಟಿದ್ದೇ ಬ್ರಿಟಿಷರು: ಮೋಹನ್ ಭಾಗವತ್

|
Google Oneindia Kannada News

ಮುಂಬೈ, ಡಿಸೆಂಬರ್ 07: ಹಿಂದೂ ಹಾಗೂ ಮುಸ್ಲಿಮರ ನಡುವೆ ಕಿತ್ತಾಟ ತಂದಿಟ್ಟಿದ್ದೇ ಬ್ರಿಟಿಷರು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಈ ದೇಶದಲ್ಲಿ ಮುಸ್ಲಿಮರು ಏನನ್ನೂ ಪಡೆಯುವುದಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲಾಗುವುದಿಲ್ಲ. ಅಲ್ಲದೆ ಮುಸ್ಲಿಮರು ಹಿಂದೂಗಳೊಂದಿಗೆ ಬದುಕಲು ನಿರ್ಧರಿಸಿದರೆ ಅವರಿಗೆ ಏನೂ ಸಿಗುವುದಿಲ್ಲ, ಹಿಂದೂಗಳು ಮಾತ್ರ ಚುನಾಯಿತರಾಗುತ್ತಾರೆ. ಹೀಗಾಗಿ ನೀವು ಪ್ರತ್ಯೇಕ(ರಾಷ್ಟ್ರ) ಬೇಡಿಕೆ ಇಡುವಂತೆ ಬ್ರಿಟಿಷರು ಮುಸ್ಲಿಮರಿಗೆ ತಾಕೀತು ಮಾಡಿದರು ಎಂದು ಭಾಗವತ್ ಹೇಳಿದ್ದಾರೆ.

'ಸಿಎಎ-ಎನ್‌ಆರ್‌ಸಿ ಭಾರತದ ಮುಸ್ಲಿಂ ನಾಗರಿಕರ ವಿರುದ್ಧವಲ್ಲ' ಎಂದ ಮೋಹನ್‌ ಭಾಗವತ್‌'ಸಿಎಎ-ಎನ್‌ಆರ್‌ಸಿ ಭಾರತದ ಮುಸ್ಲಿಂ ನಾಗರಿಕರ ವಿರುದ್ಧವಲ್ಲ' ಎಂದ ಮೋಹನ್‌ ಭಾಗವತ್‌

ಇಸ್ಲಾಂ ಭಾರತದಿಂದ ಕಣ್ಮರೆಯಾಗುತ್ತದೆ ಎಂದು ಬ್ರಿಟಿಷರು ಹೇಳಿದ್ದರು. ಆದರೆ ಅದು ಸಾಧ್ಯವಾಗಿದೆಯೇ? ಇಲ್ಲ. ಮುಸ್ಲಿಮರು ಎಲ್ಲಾ ಹುದ್ದೆಗಳನ್ನು ಹೊಂದಬಹುದು. ಮುಸ್ಲಿಂ ಆಡಳಿತಗಾರರ ಆಗಮನದ ಸಮಯದಿಂದ ಮತ್ತು ಇಂದಿನವರೆಗೂ, ಮುಸ್ಲಿಂ ಧರ್ಮವು ಕಣ್ಮರೆಯಾಗಿಲ್ಲ. ಅದು ತುಂಬಾ ಇದೆ.

RSS Chief Mohan Bhagwat Says That, Britishers Created Communication Gap Between Hindu And Muslims

ಹಾಗಾಗಿ ಬ್ರಿಟಿಷರು ತಪ್ಪು ಮಾಹಿತಿ ಹರಡಿದ್ದಾರೆ. ಮುಸ್ಲಮರು ಕೂಡ ಭಾರತದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ ಎಂದು ಭಾಗವತ್ ಹೇಳಿದರು.

ಬ್ರಿಟಿಷರು ತಪ್ಪು ಕಲ್ಪನೆಯನ್ನು ಸೃಷ್ಟಿಸಿದ್ದಾರೆ ಎಂದ ಆರ್ ಎಸ್ಎಸ್ ಮುಖ್ಯಸ್ಥ, ಮುಸ್ಲಿಮರು ಉಗ್ರಗಾಮಿಗಳು ಎಂದು ಬ್ರಿಟಿಷರು ಹಿಂದೂಗಳಿಗೆ ಹೇಳಿದರು.

ಅವರು ಎರಡೂ ಸಮುದಾಯಗಳನ್ನು ಕಿತ್ತಾಡುವಂತೆ ಮಾಡಿದರು. ಆ ಹೋರಾಟ ಮತ್ತು ನಂಬಿಕೆಯ ಕೊರತೆಯ ಪರಿಣಾಮವಾಗಿ ಈಗ ಇಬ್ಬರೂ ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾವು ನಮ್ಮ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.

ಬ್ರಿಟಿಷರು ಮುಸ್ಲಿಮರಿಗೆ ಬಹುಸಂಖ್ಯಾತ ಹಿಂದೂ ಭಾರತದಲ್ಲಿ ನೀವೂ ಏನನ್ನೂ ಪಡೆಯುವುದಿಲ್ಲ ಎಂದು ಹೇಳಿದರು ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತ ಆಳುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಅವರು ಮಾತ್ರ ಚುನಾಯಿತರಾಗುತ್ತಾರೆ ಮತ್ತು ಆಡಳಿತ ನಡೆಸುತ್ತಾರೆ ಎಂದು ಬ್ರಿಟಿಷರು ಮುಸ್ಲಿಮರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಿದರು ಎಂದರು.

ಕೆಲವು ತಿಂಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ್ದ ಭಾಗವತ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಯಾವುದೇ ಮುಸ್ಲಿಂರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.

ಎರಡು ದಿನ ಅಸ್ಸಾಂ ಪ್ರವಾಸದಲ್ಲಿದ್ದಾರೆ. ನಗರದಲ್ಲಿ ಈ ಕುರಿತು ಮಾತನಾಡಿರುವ ಮೋಹನ್ ಭಾಗವತ್, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಹಿಂದೂ-ಮುಸ್ಲಿಂ ವಿಭಜನೆಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುವಾಹಟಿಯಲ್ಲಿ ಭಾಗವತ್ ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಈ ಎರಡೂ ಪ್ರಕರಣಗಳಿಗೆ ಕೆಲವರು ಕೋಮು ಬಣ್ಣವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದರು.

English summary
Rashtriya Swayamsevak Sangh (RSS) chief Mohan Bhagwat on Monday said Britishers made Hindus and Muslims fight by creating misconception, at a symposium on the topic of 'Rashtra Pratham - Rashtra Sarvopari' in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X