ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ನಿವಾಸದ ನೀರಿನ ಬಿಲ್ ಬಾಕಿ ಮೊತ್ತ 7.4 ಲಕ್ಷ

|
Google Oneindia Kannada News

ಮುಂಬೈ, ಜೂನ್ 24: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಬಿಡುಗಡೆ ಮಾಡಿರುವ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿ ನಿವಾಸವೂ ಸೇರಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸ ವರ್ಷಾ ಬಂಗಲೆ ಕೂಡಾ ಬಿಲ್ ಪಾವತಿ ಉಳಿಸಿಕೊಂಡವರ ಪಟ್ಟಿಯಲ್ಲಿದೆ.

ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹ್ಮದ್ ಎಂಬುವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಬಿಎಂಸಿ ಉತ್ತರಿಸಿದ್ದು, 7,44,981 ರು ನೀರಿನ ಬಿಲ್ ಪಾವತಿಸಬೇಕು ಎಂದು ಪ್ರತಿಕ್ರಿಯಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ, 25 ಶಾಸಕರು ಬಿಜೆಪಿಗೆ?ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ, 25 ಶಾಸಕರು ಬಿಜೆಪಿಗೆ?

ಮುಖ್ಯಮಂತ್ರಿ ಫಡ್ನವೀಸ್ ಅಲ್ಲದೆ ಮಹಾರಾಷ್ಟ್ರದ 19 ಸಚಿವರುಗಳ ಹೆಸರು ಕೂಡಾ ಡಿಫಾಲ್ಟರ್ಸ್ ಪಟ್ಟಿಯಲ್ಲಿದೆ. ಪಂಕಜಾ ಮುಂಡೆ, ಸುಧೀರ್ ಮುಂಗತಿವಾರ್, ಎಕನಾಥ್ ಶಿಂಧೆ, ವಿನೋದ್ ತಾವ್ಡೆ ಅವರು ಕೂಡಾ ಬಾಕಿ ಉಳಿಸಿಕೊಂಡಿದ್ದಾರೆ.

Rs 7 lakh water bill pending: BMC declares Fadnavis’s bungalow as defaulter

ಅಕ್ಟೋಬರ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಫಡ್ನವೀಸ್ ನೇತೃತ್ವದಲ್ಲೇ ಈ ಬಾರಿಯೂ ಚುನಾವಣೆಯಲ್ಲಿ ಎದುರಿಸಲಿದೆ. 220 ಸ್ಥಾನ ಗೆಲ್ಲುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಮಹಾರಾಷ್ಟ್ರದ ಜೊತೆಗೆ ಜಾರ್ಖಂಡ್ ಹಾಗೂ ಹರ್ಯಾಣದಲ್ಲೂ ಚುನಾವಣೆ ನಡೆಯಲಿದೆ.

English summary
The Brihanmumbai Municipal Corporation (BMC) has declared Maharashtra Chief Minister Devendra Fadnavis's Varsha bungalow as a defaulter. An RTI query filed by activist Shakeel Ahmed revealed the CM's bungalow is yet to pay water bills amounting to Rs 7,44,981.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X