ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ರುಪಾಯಿ ನೋಟು ಬಿಡುಗಡೆಗೆ ಆರ್ ಬಿಐ ಅಂತಿಮ ಹಂತದ ತಯಾರಿ

ಸಾವಿರ ರುಪಾಯಿ ನೋಟು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ 500 ರುಪಾಯಿ ನೋಟುಗಳನ್ನು ಮುದ್ರಣ ಮಾಡಬೇಕಾಗಿದ್ದರಿಂದ ಅದು ಮುಂದೆ ಹೋಗಿದೆ. ಆದರೆ ತಿಂಗಳೊಳಗೆ ಸಾವಿರ ರುಪಾಯಿ ನೋಟು ಚಲಾವಣೆಗೆ ಬರಲಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಫೆಬ್ರವರಿ 21: 2017ರ ಜನವರಿಗೆ ಹೊಸ 1,000 ರುಪಾಯಿ ನೋಟುಗಳ ಬಿಡುಗಡೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಸಿದ್ಧತೆ ನಡೆಸಿತ್ತು. ಆದರೆ 500 ರುಪಾಯಿ ನೋಟುಗಳ ಮುದ್ರಣವನ್ನು ಚಲಾವಣೆಗೆ ಬಿಡುವ ತುರ್ತು ಇದ್ದಿದ್ದರಿಂದ ಇದು ಮುಂದೆ ಹೋಗಿದೆ.

ಹೊಸ 1,000 ರುಪಾಯಿ ನೋಟುಗಳ ಮುದ್ರಣ ಈಗಾಗಲೇ ಆರಂಭವಾಗಿದೆ. ಇನ್ನು ಒಂದು ತಿಂಗಳಲ್ಲಿ ಆ ನೋಟುಗಳು ಚಲಾವಣೆಗೆ ಬರಲಿವೆ. ಎರಡು ಸಾವಿರ ರುಪಾಯಿ ನೋಟು ಬಂದ ಮೇಲೆ ಚಿಲ್ಲರೆಗಾಗಿ ಪರದಾಡುತ್ತಿರುವವರಿಗೆ ಹೊಸದಾಗಿ ಬಿಡುಗಡೆ ಆಗುವ 1000 ರುಪಾಯಿ ನೋಟಿನಿಂದ ಅನುಕೂಲವಾಗುತ್ತದೆ.[ಉಳಿತಾಯ ಖಾತೆಯಿಂದ ವಿತ್ ಡ್ರಾ: ರಿಸರ್ವ್ ಬ್ಯಾಂಕ್ ಹೊಸ ನಿಯಮ]

RBI

ಕಳೆದ ವರ್ಷದ ನವೆಂಬರ್ 8ರ ನೋಟು ನಿಷೇಧದ ನಂತರ ಚಲಾವಣೆಯಲ್ಲಿ 500, 1000 ರುಪಾಯಿ ನೋಟುಗಳ ಒಟ್ಟು ಮೊತ್ತ 15.44 ಲಕ್ಷ ಕೋಟಿ ರುಪಾಯಿ ಹಿಂಪಡೆಯಲಾಗಿತ್ತು. ಈಗ ಸಾವಿರ ರುಪಾಯಿ ನೋಟು ಬರುವುದರಿಂದ ಅನುಕೂಲವಾಗುತ್ತದೆ. ಜನವರಿವರೆಗೆ ಆರ್ ಬಿಐ 9.92 ಲಕ್ಷ ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ.

ಅಮಾನ್ಯ ಮಾಡಿದ ನೋಟು ಎಷ್ಟು ಪ್ರಮಾಣದಲ್ಲಿ ಹಿಂತಿರುಗಿದೆ ಎಂಬ ಬಗ್ಗೆ ಆರ್ ಬಿಐ ಇನ್ನೂ ಮಾಹಿತಿ ನೀಡಬೇಕಿದೆ. ಅಂದಾಜು ಹಣ ಅಂತ ಹೇಳಲ್ಲ, ನಿಖರವಾದ ಸಂಖ್ಯೆಯನ್ನೇ ಕೊಡ್ತೀವಿ ಅಂತ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ. ವಿದೇಶದಲ್ಲಿ ವಾಸವಿರುವ ಭಾರತೀಯರಿಗೆ ಹಳೇ ನೋಟು ಬದಲಾವಣೆಗೆ ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.[ಮಾರ್ಚ್ 13ರಿಂದ ಹಣ ವಿಥ್ ಡ್ರಾಗೆ ಯಾವುದೇ ನಿರ್ಬಂಧವಿಲ್ಲ]

ಇನ್ನು ಅನಿವಾಸಿ ಭಾರತೀಯರಿಗೆ ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಸರಿಯಾದ ಮಾಹಿತಿಯನ್ನು ಜೂನ್ 30ರ ನಂತರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.

English summary
The Reserve Bank is all set to launch the new Rs 1,000 note. The launch of the new series Rs 1,000 note scheduled for January 2017 was delayed due to a pressing need to put in circulation the Rs 500 notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X