ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ರಿಷಿ ಈಗ ವಿವಾದದಲ್ಲಿ

ಪಾಕಿಸ್ತಾನ ಸ್ವಾತಂತ್ರ್ಯೋತ್ಸವಕ್ಕೆ ಶುಭಾಷಯ ಕೋರಿದ್ದ ರಿಷಿ ಈಗ ವಿವಾದದಲ್ಲಿ. ಕೆಲವು ಟ್ವಿಟ್ಟಿಗರು ರಿಷಿ ಕಪೂರ್ ಶುಭಾಷಯವನ್ನು ಹೊಗಳಿಸಿದರೆ, ಮತ್ತೆ ಕೆಲವರು ಅದನ್ನು ವಿರೋಧಿಸಿದ್ದಾರೆ.

|
Google Oneindia Kannada News

ಮುಂಬೈ, ಆಗಸ್ಟ್ 14: ಟ್ವಿಟರ್ ನಲ್ಲಿ ಪದೇ ಪದೇ ವಿವಾದಗಳನ್ನು ಮೈಮೇಲೆಳೆದುಕೊಳ್ಳುವುದೆಂದರೆ, ರಿಷಿ ಕಪೂರ್ ಗೆ ಬಲು ಪ್ರೀತಿಯೆಂದು ತೋರುತ್ತದೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡುವ ಅವರು, ಈಗ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನದಂದು (ಆಗಸ್ಟ್ 14) ಆ ದೇಶದ ಬಾಂಧವರಿಗೆ ಶುಭ ಕೋರಿದ್ದು ವಿವಾದಕ್ಕೆ ಕಾರಣವಾಗಿದೆ.

ವಿವಾದಾತ್ಮಕ ಟ್ವೀಟ್: 'ಚೀಚೀ'ಗೆ ಛೀ ಥೂ ಎಂದು ಬೈದ ಟ್ವಿಟ್ಟಿಗರು!ವಿವಾದಾತ್ಮಕ ಟ್ವೀಟ್: 'ಚೀಚೀ'ಗೆ ಛೀ ಥೂ ಎಂದು ಬೈದ ಟ್ವಿಟ್ಟಿಗರು!

ರಿಷಿ ಅವರ ಶುಭಾಷಯ ಸರಿಯೋ, ತಪ್ಪೋ ಎಂಬ ವಿಚಾರವನ್ನು ಆಧಾರಿಸಿ ಟ್ವಿಟ್ಟಿಗರ ಸಮುದಾಯವೇ ಎರಡು ಬಣಗಳಾಗಿ ವಿಭಜನೆಯಾಗಿದೆ. ಒಂದು ಬಣ ರಿಷಿ ಪರವಾಗಿ ನಿಂತಿದ್ದರೆ, ಮತ್ತೊಂದು ಬಣ ಅವರ ನಡೆಯನ್ನು ಆಕ್ಷೇಪಿಸಿದೆ.

Rishi Kapoor's New Tweet On Pakistan Made Folks Both Glad And Angry

ಭಾನುವಾರ ಸಂಜೆಯೇ ಟ್ವೀಟ್ ಮಾಡಿದ್ದ ಅವರು, ಪಾಕಿಸ್ತಾನ ರಾಷ್ಟ್ರಧ್ವಜ ಹಾಗೂ ಮಸೀದಿಗಳುಳ್ಳ ಚಿತ್ರವೊಂದನ್ನು ಹಾಕಿ, ಪಾಕಿಸ್ತಾನದಲ್ಲಿರುವ ನನ್ನೆಲ್ಲಾ ಸ್ನೇಹಿತರಿಗೆ, ಸ್ವಾತಂತ್ರ್ಯೋತ್ಸವದ (ಯುಮ್-ಎ-ಆಜಾದಿ) ಶುಭಾಷಯಗಳು ಎಂದಿದ್ದಾರೆ.

ಇದಕ್ಕೆ, ಹಲವರಿಂದ ಶಹಬ್ಬಾಸ್ ಗಿರಿ ಸಿಕ್ಕಿದ್ದು, ಎರಡೂ ದೇಶಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ಜನಪ್ರಿಯ ವ್ಯಕ್ತಿಗಳಿಂದ ಇಂಥ ನಡೆ ಅನಿವಾರ್ಯ ಎಂದಿದ್ದಾರೆ. ಆದರೆ, ಮತ್ತೂ ಕೆಲವರು ಈ ಬಗ್ಗೆ ಕಿಡಿ ಕಾರಿ, ರಿಷಿ ಕಪೂರ್ ಅವರನ್ನು 'ಉಗ್ರವಾದಿ' ಎಂದು ಕರೆದಿದ್ದಾರೆ.

ಇತ್ತೀಚೆಗಷ್ಟೇ, ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ವಿವಾದದ ಕಿಡಿ ಹೊತ್ತಿಸಿದ್ದರು ರಿಷಿ. ಈ ಹಿಂದೆ ಸೌರವ್ ಗಂಗೂಲಿಯವರು ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದನ್ನು ಗೆದ್ದಾಗ ಜೆರ್ಸಿ ಬಿಚ್ಚಿ ಸಂಭ್ರಮಿಸಿದ್ದ ಫೋಟೋವನ್ನು ಟ್ವೀಟ್ಟರ್ ನಲ್ಲಿ ಹಾಕಿದ್ದ ರಿಷಿ, ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಂದಲೂ ಇಂಥದ್ದೇ ಸಂಭ್ರಮ ನಿರೀಕ್ಷಿಸುತ್ತಿರುವುದಾಗಿ ತಿಳಿಸಿ, ವಿವಾದಕ್ಕೊಳಗಾಗಿದ್ದರು.

ಅವರ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾಗಿತ್ತು, ಹಲವಾರು ಮಂದಿ, ಮಹಿಳಾ ಕ್ರಿಕೆಟಿಗರು ಗೆದ್ದರೆ ಹೀಗೆ ಜೆರ್ಸಿ ಬಿಚ್ಚಿ ಕುಣಿದಾಡಬೇಕೆಂದು ಹೇಳುತ್ತೀದ್ದೀರಾ ಎಂದು ನೇರವಾಗಿಯೇ ಕೇಳಿದ್ದರು. ಆಗ, ತಮ್ಮ ತಪ್ಪಿನ ಅರಿವಾಗಿ, ರಿಷಿ ಕಪೂರ್ ಅವರು ತಮ್ಮ ಉದ್ದೇಶ ಹಾಗಿರಲಿಲ್ಲವೆಂದು ಸ್ಪಷ್ಟನೆ ನೀಡಿದ್ದರು.

English summary
Rishi Kapoor, undaunted by repeated trolling, has posted another tweet about Pakistan, this one an Independence Day greeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X